ಕೋಲ್ಕತ್ತಾ:ಪಶ್ಚಿಮ ಬಂಗಾಳದ ಸಚಿವಾಲಯ (ಆಡಳಿತ ಕಚೇರಿ)ದ 14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಅರ್ಧ ಗಂಟೆಯೊಳಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಕೋಲ್ಕತ್ತಾದಲ್ಲಿರುವ ನಬನ್ನ ಕಟ್ಟಡದ 14ನೇ ಮಹಡಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಚೇರಿಯಿದ್ದು, ಇಂದು ಮಧ್ಯಾಹ್ನ ಮಹಡಿಯ ಮೇಲ್ಛಾವಣಿಯಲ್ಲಿದ್ದ ಮೊಬೈಲ್ ಟವರ್ಗಳ ಪ್ಯಾನೆಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದುರ್ಗಾ ಪೂಜೆ ಹಿನ್ನೆಲೆ ಸಿಎಂ ದೀದಿ ಹಾಗೂ ಯಾವುದೇ ಅಧಿಕಾರಿಗಳು ಕಚೇರಿಯಲ್ಲಿರಲಿಲ್ಲ ಎಂದು ಹೇಳಲಾಗಿದೆ.