ಹೈದರಾಬಾದ್:ಉತ್ತರಾಖಂಡ್ನಲ್ಲಿ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿರುವುದರ ಜೊತೆಗೆ ಸಾವಿನ ಸಂಖ್ಯೆ ಸಹ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಸಾವಿನ ಪ್ರಮಾಣ ಮೀರಿಸಿತು ಉತ್ತರಾಖಂಡ್ ಕೋವಿಡ್ ಮರಣ ಸಂಖ್ಯೆ! - ರೋಗಲಕ್ಷಣ
ಕೊರೊನಾದಿಂದ ಮೃತಪಡುತ್ತಿರುವವರ ಸಂಖ್ಯೆ ರಾಷ್ಟ್ರೀಯ ಸಾವಿನ ಪ್ರಮಾಣವನ್ನು ಮೀರಿಸಿದೆ. ಕೋವಿಡ್ ಸೋಂಕಿತರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗುವಲ್ಲಿ ವಿಫಲರಾಗುತ್ತಿದ್ದಾರೆ. ಅವರು ಆಸ್ಪತ್ರೆಗೆ ಬರುವ ಹೊತ್ತಿಗೆ ಪರಿಸ್ಥಿತಿ ಕೈಮೀರುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ರಾಜ್ಯದ ಸಾವಿನ ಪ್ರಮಾಣವು ರಾಷ್ಟ್ರೀಯ ಸಾವಿನ ಪ್ರಮಾಣವನ್ನು ಮೀರಿಸಿದ್ದು, ಕಳೆದ 48 ಗಂಟೆಗಳಲ್ಲಿ ಆಸ್ಪತ್ರೆಗೆ ದಾಖಲಾದ ಶೇ. 50ರಷ್ಟು ಸೋಂಕಿತರು ಮೃತಪಟ್ಟಿದ್ದಾರೆ.
ಪ್ರೊಫೆಸರ್ ಹೇಮಚಂದ್ರ ಅವರ ಪ್ರಕಾರ, ಮೃತಪಡುತ್ತಿರುವ ಮಂದಿ ಕೋವಿಡ್ ಸೋಂಕನ್ನು ಮೊದಲ ನಾಲ್ಕೈದು ದಿನಗಳವರೆಗೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗುವಲ್ಲಿ ವಿಫಲರಾಗುತ್ತಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾಗುವ ಹೊತ್ತಿಗೆ ಪರಿಸ್ಥಿತಿ ಕೈಮೀರಿರುತ್ತದೆ. ಅಲ್ಲದೆ ಆರಂಭದಲ್ಲಿ ರೋಗಲಕ್ಷಣವನ್ನು ಕಡೆಗಣಿಸುತ್ತಿದ್ದು, ಇದೂ ಸಹ ಮೃತರ ಪ್ರಮಾಣದಲ್ಲಿ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.