ಕರ್ನಾಟಕ

karnataka

ETV Bharat / bharat

ಮುಖ್ಯ ಶಿಕ್ಷಕನಿಗೆ ಅಟ್ಟಾಡಿಸಿ ಚಪ್ಪಲಿಯಿಂದ ಹೊಡೆದ ಸಹ ಶಿಕ್ಷಕಿ.. ಯಾವ ಕಾರಣಕ್ಕಾಗಿ!? - ಉತ್ತರ ಪ್ರದೇಶ ನ್ಯೂಸ್​

ಶಾಲಾ ಆವರಣದಲ್ಲೇ ಮುಖೋಪಾಧ್ಯಾಯ ಒಬ್ಬನಿಗೆ ಮಹಿಳಾ ಶಿಕ್ಷಕಿ ಅಟ್ಟಾಡಿಸಿ ಹೊಡೆದಿರುವ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

sidharthnagar teacher
sidharthnagar teacher

By

Published : Aug 6, 2021, 4:30 PM IST

ಸಿದ್ಧಾರ್ಥನಗರ(ಉತ್ತರ ಪ್ರದೇಶ):ಶಾಲೆಯ ಮುಖ್ಯೋಪಾಧ್ಯಾಯನೊಬ್ಬನಿಗೆ ಸಹಾಯಕ ಶಿಕ್ಷಕಿಯೊಬ್ಬರು ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿದೆ.

ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಖುನಿಯಾವ್​ ಬ್ಲಾಕ್​​ ಪ್ರದೇಶದ ಶಾಲೆಯ ಆವರಣದಲ್ಲಿ ಈ ಘಟನೆ ನಡೆದಿದೆ. ಮಹಿಳಾ ಶಿಕ್ಷಕಿಯೊಬ್ಬಳು, ಮುಖೋಪಾಧ್ಯಾಯನಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಶಿಕ್ಷಣಾಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.

ಮುಖ್ಯ ಶಿಕ್ಷಕನಿಗೆ ಅಟ್ಟಾಡಿಸಿ ಚಪ್ಪಲಿಯಿಂದ ಹೊಡೆದ ಸಹ ಶಿಕ್ಷಕಿ

ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಹಾಗೂ ಸಹಾಯಕ ಶಿಕ್ಷಕಿ ಕೆಲಸ ಮಾಡ್ತಿದ್ದು, ಈ ವೇಳೆ, ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಸಂಭಾಷಣೆ ನಡೆದಿದ್ದು, ಇದರಿಂದ ಮಹಿಳಾ ಶಿಕ್ಷಕಿ ಸಿಟ್ಟಿಗೆದ್ದಿದ್ದಾಳೆ. ಹೀಗಾಗಿ ಮುಖ್ಯೋಪಾಧ್ಯಾಯ ಮನೋಜ್​ ಕುಮಾರ್​ ಅವರನ್ನು ಥಳಿಸಿದ್ದಾರೆ. ಅದರ ವಿಡಿಯೋ ಸೆರೆ ಹಿಡಿದಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ವೈರಲ್​ ಆಗಿದೆ. ಈ ಘಟನೆ ಒಂದು ವಾರದ ಹಿಂದೆ ನಡೆದಿರುವುದು ಎನ್ನಲಾಗುತ್ತಿದೆ.

ಇದನ್ನೂ ಓದಿರಿ: ವೈದ್ಯಕೀಯ ಚಿಕಿತ್ಸೆಗಾಗಿ ಪಿಎಂ ಅಮೆರಿಕಕ್ಕೆ ಕಳುಹಿಸಿದ್ದು ನಿಜ, ತರಬೇತಿ ವೇಳೆ ಸಾಕಷ್ಟು ಸಹಾಯ: ಮೀರಾಬಾಯಿ ಚನು!

ಶಾಲೆಯಲ್ಲಿ ಇದೀಗ ತೇಜ್​ಪಾಲ್​ ಹಾಗೂ ಪೂನಂ ಅವರನ್ನ ನಿಯೋಜನೆ ಮಾಡಲಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಇವರಿಬ್ಬರನ್ನ ಅಮಾನತುಗೊಳಿಸಲಾಗಿದೆ.

ABOUT THE AUTHOR

...view details