ಕರ್ನಾಟಕ

karnataka

ETV Bharat / bharat

ಸೋನಿಪತ್​ನಲ್ಲಿ ಮಹಿಳಾ ಬಾಕ್ಸರ್ ಅನುಮಾನಾಸ್ಪದ​ ಸಾವು.. ಬಾತ್​​ ರೂಮ್​ನಲ್ಲಿ ಮೃತದೇಹ ಪತ್ತೆ - ಮಹಿಳಾ ಬಾಕ್ಸರ್​​ ಮೃತದೇಹ

ಮಹಿಳಾ ಬಾಕ್ಸರ್​​ ಮೃತದೇಹ(Female boxer dead body) ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Female boxer
Female boxer

By

Published : Nov 13, 2021, 8:49 PM IST

ಸೋನಿಪತ್(ಹರಿಯಾಣ):ಉದಯೋನ್ಮುಖ ಮಹಿಳಾ ಬಾಕ್ಸರ್​​ ಮೃತದೇಹ(Body of female boxer) ಅನುಮಾನಾಸ್ಪದ(suspicious condition) ರೀತಿಯಲ್ಲಿ ಬಾತ್​​ರೂಂನಲ್ಲಿ ಸಿಕ್ಕಿದ್ದು, ಅನೇಕ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಮಹಿಳಾ ಬಾಕ್ಸರ್​ ಭಾವನಾ​ ಹರಿಯಾಣದ ಸೋನಿಪತ್​ನ ಖರ್ಖೋಡಾದ ಬಾಕ್ಸಿಂಗ್​ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು.

ಕಳೆದ ಮೂರು ದಿನಗಳ ಹಿಂದೆ ಸೋನಿಪತ್​ನಲ್ಲಿ ಕುಸ್ತಿಪಟು ನಿಶಾ ದಹಿಯಾ(Nisha Dahiya) ಕೊಲೆ ಪ್ರಕರಣದ ಬೆನ್ನಲ್ಲೇ ಮತ್ತೋರ್ವ ಕ್ರೀಡಾಪಟುವಿನ ಸಾವಿನ ಸುದ್ದಿ ಮುನ್ನೆಲೆಗೆ ಬಂದಿದೆ. ಮಹಿಳಾ ಬಾಕ್ಸರ್​ ಮೃತದೇಹ ಸ್ನಾನದ ಗೃಹದಲ್ಲಿ ಪತ್ತೆಯಾಗಿದೆ. ಮೃತದೇಹ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ವರದಿಗೋಸ್ಕರ ಕಾಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ:Manipur ambush: ಉಗ್ರರ ದಾಳಿ ಖಂಡಿಸಿದ ನಮೋ, ಅಪರಾಧಿಗಳನ್ನ ಬಿಡಲ್ಲ ಎಂದ ರಕ್ಷಣಾ ಸಚಿವ

ಮಹಿಳಾ ಬಾಕ್ಸರ್​​​ ಭಾವನಾ ಖರ್ಖೋಡಾದಲ್ಲಿ ಇತರೆ ಕ್ರೀಡಾಪಟುಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗೆ ಸ್ನಾನ ಮಾಡಲು ಬಾತ್ ರೂಂಗೆ ಹೋಗಿದ್ದರು. ತುಂಬಾ ಸಮಯವಾದರೂ ಹೊರಗೆ ಬರದಿದ್ದಾಗ ಸಹ ಆಟಗಾರರು ಅಲ್ಲಿಗೆ ತೆರಳಿದ್ದಾರೆ. ಈ ವೇಳೆಬಾತ್​ ರೂಮ್​ಅನ್ನು ಒಳಗಡೆಯಿಂದ ಲಾಕ್​ ಮಾಡಲಾಗಿತ್ತು. ತಕ್ಷಣವೇ ಮನೆಯ ಮಾಲೀಕರಿಗೆ ಸುದ್ದಿ ಮುಟ್ಟಿಸಲಾಗಿದೆ. ಬಾತ್​ ರೂಂ ಬಾಗಿಲು ಒಡೆದು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಿಸಿದ್ದಾರೆ.

ಭಾವನಾ ಮೂಲತಃ ಉತ್ತರ ಪ್ರದೇಶದವರು ಎನ್ನಲಾಗಿದ್ದು, ಸೋನಿಪತ್​ನಲ್ಲಿ ಬಾಕ್ಸಿಂಗ್ ತರಬೇತಿ(Boxing Academy) ಪಡೆಯುತ್ತಿದ್ದರು.

ABOUT THE AUTHOR

...view details