ಕರ್ನಾಟಕ

karnataka

ETV Bharat / bharat

ಗೋವು ಕಳ್ಳಸಾಗಣೆದಾರರ ಭಯದಿಂದ ಗ್ರಾಮ ತೊರೆದ ಹಿಂದೂ ಕುಟುಂಬ - ಜಾನುವಾರು

ಪಿಲಿಭಿತ್ ಜಿಲ್ಲೆಯಲ್ಲಿ ಗೋವು ಕಳ್ಳಸಾಗಣೆದಾರರ ಭಯದಿಂದ ಹಿಂದೂ ಕುಟುಂಬವೊಂದು ಗ್ರಾಮ ಬಿಟ್ಟು ಬೇರೆ ಕಡೆಗೆ ವಲಸೆ ಹೋಗಿದೆ. ಜೊತೆಗೆ ಗೋವು ಕಳ್ಳಸಾಗಣೆದಾರರಿಗೆ ಪೊಲೀಸರು ರಕ್ಷಣೆ ನೀಡಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.

cow smugglers
ಗ್ರಾಮ ತೊರೆದ ಹಿಂದೂ ಕುಟುಂಬ

By

Published : Aug 11, 2022, 10:08 AM IST

ಉತ್ತರ ಪ್ರದೇಶ:ಗೋವು ಕಳ್ಳಸಾಗಣೆದಾರರ ಭಯದಿಂದ ಹಿಂದೂ ಕುಟುಂಬವೊಂದು ಬುಧವಾರ ರಾತ್ರಿ ಗ್ರಾಮವನ್ನ ತೊರೆದ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಕೊತ್ವಾಲಿಯಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಏಪ್ರಿಲ್ 10 ರಂದು ರಾಮ್ದಿನ್ ಅವರ ಪತ್ನಿ ಕೃಷ್ಣಾದೇವಿ ಬಿಸಲ್ಪುರ್ ಕೊತ್ವಾಲಿ ಪ್ರದೇಶದ ರಾಸಿಯಾ ಖಾನ್ಪುರ್ ಗ್ರಾಮದಲ್ಲಿ ಜಾನುವಾರು ಮೇಯಿಸಲು ಹೋಗಿದ್ದರು. ಈ ವೇಳೆ, ಅವರ ಕರುವೊಂದು ಪಕ್ಕದ ಹೊಲಕ್ಕೆ ಹೋಗಿತ್ತು. ಸ್ವಲ್ಪ ಸಮಯದ ನಂತರ ಕರು ಅಲ್ಲಿಂದ ನಾಪತ್ತೆಯಾಗಿದ್ದು, ನಂತರ ಮಹಿಳೆ ಏಷ್ಟೇ ಹುಡುಕಿದರೂ ಪತ್ತೆಯಾಗಿರಲಿಲ್ಲ. ಇದಾದ ನಂತರ ಕೊತ್ವಾಲಿ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ನಂತರ ಸಂತ್ರಸ್ತೆ ಪೊಲೀಸ್ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಪೊಲೀಸರು ಜೂನ್ 4 ರಂದು ಅಬಿದ್ ಹುಸೇನ್, ಜಿಲ್ದಾರ್, ರೈಸ್ ಖಾನ್ ಮತ್ತು ಮುನ್ನೇಖಾನ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಷ್ಟೇ ಅಲ್ಲದೆ, ಆರೋಪಿಗಳು ಮಹಿಳೆಯ ಕುಟುಂಬಕ್ಕೆ ಗ್ರಾಮ ಬಿಟ್ಟು ಓಡಿ ಹೋಗುವಂತೆ ಎಚ್ಚರಿಕೆ ನೀಡಿ, ಕಿರುಕುಳ ನೀಡಿರುತ್ತಿದ್ದರು ಎನ್ನಲಾಗಿದೆ. ಜೊತೆಗೆ ಪದೇ ಪದೆ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕುತ್ತಿದ್ದರು ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.

ನಾಲ್ವರು ಆರೋಪಿಗಳನ್ನು ಬಂಧಿಸದ ಕಾರಣ ಅಸಮಾಧಾನಗೊಂಡ ಕೃಷ್ಣಾದೇವಿ ಕುಟುಂಬ, ಗ್ರಾಮ ತೊರೆಯುವ ನಿರ್ಧಾರ ಕೈಗೊಂಡಿತ್ತು. ಈ ಕುರಿತು ವಿಷಯ ತಿಳಿಯುತ್ತಿದ್ದಂತೆ ಆ.5ರಂದು ಪೊಲೀಸ್ ಅಧಿಕಾರಿ ಪ್ರಶಾಂತ್ ಸಿಂಗ್, ಅಪರ ಜಿಲ್ಲಾಧಿಕಾರಿ ರಿಷಿಕಾಂತ್ ರಾಜವಂಶಿ ಹಾಗೂ ಬಿಸಲ್‌ಪುರ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ವೇದ್ ಪ್ರಕಾಶ್ ಸ್ಥಳಕ್ಕಾಗಮಿಸಿ ಮಹಿಳೆಯ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಬುಧವಾರ ತನ್ನ ಕುಟುಂಬ ಸಮೇತ ಮಹಿಳೆ ಊರು ತೊರೆದಿದ್ದು, ಈ ಘಟನೆ ಪೊಲೀಸ್ ಇಲಾಖೆಯಲ್ಲಿ ಭಾರಿ ಸಂಚಲನ ಮೂಡಿದೆ. ನಿನ್ನೆ ಕೂಡಲೇ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತೆಯ ಮನೆಗೆ ಬೀಗ ಹಾಕಿರುವುದನ್ನ ಗಮನಿಸಿದ್ದು, ಗ್ರಾಮಸ್ಥರಿಂದ ಮಾಹಿತಿ ಕಲೆಹಾಕಿ ತನಿಖೆ ಪ್ರಾರಂಭಿಸಲಾಗಿದೆ.

ಇದನ್ನೂ ಓದಿ:ಪಂಜಾಬ್​ನಲ್ಲಿ ಮತ್ತೆ ಗುಂಡಿನ ಸದ್ದು: ಪೆಟ್ರೋಲ್​ ಬಂಕ್​ ಮಾಲೀಕನ ಗುಂಡಿಕ್ಕಿ ಕೊಲೆ

ABOUT THE AUTHOR

...view details