ಹೈದರಾಬಾದ್:ಹೆಂಡತಿ ಮೇಲಿನ ಕೋಪಕ್ಕೆ ತನ್ನ ಸ್ವಂತ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಚಂದಾನಗರದಲ್ಲಿ ನಡೆದಿದೆ. ಮಗಳ ಹತ್ಯೆಯ ಬಳಿಕ ಮೃತದೇಹವನ್ನು ಕಾರಿನಲ್ಲಿ ಸಾಗಿಸುತ್ತಿರುವಾಗ ಕಾರು ಅಪಘಾತಗೊಂಡು ಆರೋಪಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ವನಸ್ಥಲಿಪುರಂ ಎಸಿಪಿ ಭೀಮರೆಡ್ಡಿ ಹೇಳಿದ್ದಾರೆ. ಪ್ರಕರಣ ಅಬ್ದುಲ್ಲಾಪುರಮೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇನ್ಸ್‌ಪೆಕ್ಟರ್ ಮನಮೋಹನ್, ಎಸ್‌ಐಗಳಾದ ವೆಂಕಟರಾಮಿರೆಡ್ಡಿ ಮತ್ತು ಕಿಶನ್ ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ: ವಿಜಯವಾಡದ ಅಜಿತ್‌ಸಿಂಗ್ ನಗರದ ಕುಂಡೇಟಿ ಚಂದ್ರಶೇಖರ್ (ಆರೋಪಿ) ಮತ್ತು ಸಂಗಾರೆಡ್ಡಿ ಜಿಲ್ಲೆಯ ಬಿಎಚ್‌ಇಎಲ್‌ನ ಹಿಮಬಿಂದು 2011ರಲ್ಲಿ ವಿವಾಹವಾಗಿದ್ದರು. ಇವರು ಹಿಂದೆ ಅಮೆರಿಕದಲ್ಲಿ ಐಟಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಹೈದರಾಬಾದ್‌ಗೆ ಬಂದು ಚಂದಾನಗರದಲ್ಲಿ ನೆಲೆಸಿದ್ದರು. ಇಲ್ಲಿಗೆ ಬಂದ ಬಳಿಕ ಪತ್ನಿ ಹಿಮಬಿಂದು ಐಟಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ, ಪತಿ ಉದ್ಯೋಗಿಯಾಗಿ ಕರ್ತವ್ಯಕ್ಕೆ ಸೇರಿದ್ದರು. ಇವರಿಗೆ 8 ವರ್ಷದ ಮೋಕ್ಷಜಾ ಎನ್ನುವ ಮಗಳಿದ್ದು ಬಿಎಚ್‌ಇಎಲ್‌ನ ಜ್ಯೋತಿ ವಿದ್ಯಾಲಯದಲ್ಲಿ ನಾಲ್ಕನೇ ತರಗತಿ ಓದುತ್ತಿದಳು.
ಇವರ ಜೀವನ ಸುಂದರವಾಗಿಯೇ ಸಾಗುತ್ತಿತ್ತು. ಆದರೆ 8 ತಿಂಗಳ ಹಿಂದೆ ಚಂದ್ರಶೇಖರ್ ತನ್ನ ಕೆಲಸ ಕಳೆದುಕೊಳ್ಳುತ್ತಾನೆ. ಇದಾದ ಬಳಿಕ ದಂಪತಿ ಮಧ್ಯೆ ಜಗಳ ಪ್ರಾರಂಭವಾಗುತ್ತದೆ. ಪರಿಣಾಮ ಹಿಮಬಿಂದು ತನ್ನ ಮಗಳೊಂದಿಗೆ 4 ತಿಂಗಳ ಹಿಂದೆಯೇ ಬಿಎಚ್‌ಇಎಲ್‌ನಲ್ಲಿರುವ ಹುಟ್ಟೂರಿಗೆ ಹೋಗಿದ್ದಾಳೆ.
ಚಂದ್ರಶೇಖರ್ ಮಾತ್ರ ಒಂಟಿಯಾಗಿ ಚಂದನಗರದಲ್ಲಿಯೇ ವಾಸ ಮಾಡಿಕೊಂಡಿದ್ದನು. ಈತನಿಗೆ ತಾನು ಕೆಲಸ ಕಳೆದುಕೊಂಡ ಮೇಲೆ ಪತ್ನಿ ತನಗಿಂತ ಹೆಚ್ಚು ಸಂಪಾದಿಸುತ್ತಿದ್ದಾಳೆ, ಉನ್ನತ ಸ್ಥಾನದಲ್ಲಿದ್ದಾರೆ ಎಂದು ಕೊರಗು ಶುರುವಾಗಿತ್ತು. ತನ್ನ ಕೆಲಸ ಕಳೆದುಕೊಳ್ಳಲು ಪತ್ನಿಯೇ ಕಾರಣ ಎಂದು ಆಕೆಯ ವಿರುದ್ಧ ಇವನಲ್ಲಿ ದ್ವೇಷ ಭಾವನೆ ಬೆಳೆದು ಬಿಡುತ್ತದೆ. ಅಲ್ಲದೇ ತನ್ನ ಮಗಳನ್ನು ತನ್ನಿಂದ ಕಿತ್ತುಕೊಂಡು ದೂರ ಮಾಡಿದ್ದಾಳೆ. ಸಂಸಾರದಿಂದ ದೂರವಾಗಿ ನಾನು ಅನುಭವಿಸುತ್ತಿರುವ ನರಕಯಾತನೆಯನ್ನು ಪತ್ನಿಯೂ ಅನುಭವಿಸಲಿ ಎಂದು ತನ್ನ ಸ್ವಂತ ಮಗಳನ್ನೇ ಕೊಲ್ಲಲು ನಿರ್ಧರಿಸುತ್ತಾನೆ.