ಫರೂಕಾಬಾದ್ (ಉತ್ತರ ಪ್ರದೇಶ): ಇತ್ತೀಚೆಗೆ ವಿಚಿತ್ರ ಕಾರಣಗಳಿಂದ ಮದುವೆಗಳು ಮಧ್ಯದಲ್ಲೇ ನಿಂತು ಹೋಗುವ ಪ್ರಸಂಗ ನಡೆಯುತ್ತಲೇ ಇವೆ. ವಿವಾಹ ವೇದಿಕೆ ಮೇಲೆ ವರ ಮುತ್ತು ಕೊಟ್ಟಿದ್ದಕ್ಕೆ, ಗುಟ್ಕಾ ಜಗಿಯುವ ಮತ್ತು ಮದ್ಯ ಸೇವನೆ ಮಾಡುವ ಕಾರಣ ನೀಡಿ ವಧುಗಳು ಮದುವೆಗಳನ್ನು ಅರ್ಧಕ್ಕೆ ಮೊಟಕುಗೊಳಿರುವ ಘಟನೆಗಳು ಈ ಹಿಂದೆ ವರದಿಯಾಗಿದೆ. ಇದೀಗ ವರನೋರ್ವನಿಗೆ ಹಣದ ನೋಟುಗಳನ್ನು ಎಣಿಕೆ ಮಾಡಲು ಆಗದಿದ್ದಕ್ಕೆ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ.
ಇದನ್ನೂ ಓದಿ:ಕಿಸ್ಗೆ ಬೇಸತ್ತ ವಧು: ಮಾವನ ಮನೆಯಿಂದ ಬರಿಗೈಯಲ್ಲಿ ವರ ವಾಪಸ್
ಹೌದು, ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ಹಣ ನೋಟುಗಳನ್ನು ಎಣಿಸಲು ವಿಫಲವಾದ ವರನಿಂದಾಗಿ ಮದುವೆ ಮುರಿದು ಬಿದ್ದಿರುವ ಕುತೂಹಲಕಾರಿ ಪ್ರಕರಣ ಬೆಳಕಿಗೆ ಬಂದಿದೆ. ವಧುವಿನ ಸಹೋದರ ವರನಿಗೆ ಎಣಿಕೆ ಮಾಡುವಂತೆ ನೋಟುಗಳ ಬಂಡಲ್ಗಳನ್ನು ನೀಡಿದ್ದ. ಆದರೆ, ಈ ನೋಟುಗಳನ್ನು ಎಣಿಸಲು ವರ ತಾಪತ್ರಯ ಪಟ್ಟಿದ್ದಾನೆ. ಈ ವಿಷಯ ತಿಳಿದ ವಧುವಿಗೆ ತಾನು ಮದುವೆ ಆಗಲು ಹೊರಟಿರುವ ಹುಡುಗ ಅನಕ್ಷರಸ್ಥ ಎಂದು ಮನವರಿಕೆಯಾಗಿದೆ. ಆದ್ದರಿಂದ ಈತನ ಸಹವಾಸವೇ ಬೇಡ ಎಂದು ವಧು ಮದುವೆಯನ್ನೇ ರದ್ದು ಮಾಡಿದ್ದಾಳೆ.
ವರವನ್ನು ಹುಡುಕಿ ಕೊಟ್ಟಿದ್ದ ಮಧ್ಯವರ್ತಿ: ಇಲ್ಲಿನ ದುರ್ಗಾಪುರ ಗ್ರಾಮದ ಯುವತಿಯ ವಿವಾಹವು ಸುಮಾರು ಮೂರು ತಿಂಗಳ ಹಿಂದೆ ಮೈನ್‌ಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಬಿನಾ ಸಾರಾ ಗ್ರಾಮದ ಯುವಕನೊಂದಿಗೆ ನಿಶ್ಚಯವಾಗಿತ್ತು. ಕುಟುಂಬ ಸದಸ್ಯರ ಮಾಹಿತಿ ಪ್ರಕಾರ, ಬಬಿನಾ ಸಾರಾ ಗ್ರಾಮದ ಮಧ್ಯವರ್ತಿಯೋರ್ವ ವರನ ಕಡೆಯವರು ದುರ್ಗಪುರಕ್ಕೆ ಕರೆತಂದು ಮದುವೆ ಸಂಬಂಧ ಬೆಳೆಸಲು ಕಾರಣವಾಗಿದ್ದ.
ಇದಾದ ಬಳಿಕ ಯುವತಿ ಮತ್ತು ಯುವಕ ಕಡೆಯ ಎರಡೂ ಕುಟುಂಬಗಳ ಮಧ್ಯೆ ಮಾತುಕತೆ ನಡೆದಿತ್ತು. ಇದರ ನಂತರ ವರ ಕಡೆಯವರು ಹುಡುಗಿಯನ್ನು ನೋಡಲು ಬಂದಿದ್ದರು. ವಧುವಿನ ಕಡೆಯವರು ಸಹ ಹುಡುಗನನ್ನು ನೋಡಲು ಹೋಗಿದ್ದರು. ಇಷ್ಟೆಲ್ಲ ನಡೆದ ಬಳಿಕ ಇಬ್ಬರಿಗೂ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿಸಿದ್ದರು. ಅಲ್ಲದೇ, ಮಧ್ಯವರ್ತಿಯ ನಂಬಿಕೆಯ ಮೇಲೆಯೇ ಮದುವೆಯ ದಿನಾಂಕವನ್ನೂ ನಿಗದಿ ಪಡಿಸಲಾಗಿತ್ತು.