ಮಾರ್ಚ್ 26ಕ್ಕೆ ರೈತ ಸಂಘಟನೆಗಳಿಂದ ಭಾರತ್ ಬಂದ್ - farmers protest in india
20:40 March 10
ಮಾರ್ಚ್ 26ಕ್ಕೆ ರೈತ ಸಂಘಟನೆಗಳಿಂದ ಭಾರತ್ ಬಂದ್
ನವದೆಹಲಿ:ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮಾರ್ಚ್ 26ರಂದು ಭಾರತ್ ಬಂದ್ಗೆ ರೈತ ಸಂಘಟನೆಗಳು ಕರೆ ನೀಡಿವೆ.
ದೆಹಲಿ ಗಡಿ ಸೇರಿದಂತೆ ಹಲವೆಡೆ ರೈತರ ಪ್ರತಿಭಟನೆಗೆ ನಾಲ್ಕು ತಿಂಗಳು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತ ಸಂಘಟನೆಗಳು ಮುಂದಾಗಿವೆ.
ಮತ್ತೊಂದೆಡೆ, ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವುದರ ವಿರುದ್ಧ ಮತ್ತು ಖಾಸಗೀಕರಣದ ವಿರುದ್ಧವೂ ದೇಶಾದ್ಯಂತ ಆಕ್ರೋಶ ಕೇಳಿಬರುತ್ತಿದೆ.