ಕರ್ನಾಟಕ

karnataka

ETV Bharat / bharat

ಪ್ರೇಮ ವಿವಾಹ.. ಸೊಸೆಯಾಗಿ ಒಪ್ಪದ ಕುಟುಂಬಸ್ಥರು: ಗರ್ಭಿಣಿ ಪತ್ನಿ ಜೊತೆಗೆ ಯುವಕ ಆತ್ಮಹತ್ಯೆ - ಪಶ್ಚಿಮ ಬಂಗಾಳದ ದುರ್ಗಾಪುರ

ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಯುವಕನೊಬ್ಬ ತನ್ನ ಮೂರು ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

family-torture-forces-young-man-and-pregnant-wife-commit-suicide-in-west-bengal
ಪ್ರೇಮ ವಿವಾಹ.. ಸೊಸೆಯಾಗಿ ಒಪ್ಪದ ಕುಟುಂಬಸ್ಥರು: ಗರ್ಭಿಣಿ ಪತ್ನಿ ಜೊತೆಗೆ ಯುವಕ ಆತ್ಮಹತ್ಯೆ

By

Published : Nov 30, 2022, 6:11 PM IST

ದುರ್ಗಾಪುರ (ಪಶ್ಚಿಮ ಬಂಗಾಳ): ಪ್ರೇಮ ವಿವಾಹವಾದ ಯುವತಿಯನ್ನು ಕುಟುಂಬಸ್ಥರು ಒಪ್ಪದ ಕಾರಣಕ್ಕೆ ಯುವಕನೊಬ್ಬ ಆತನ ಗರ್ಭಿಣಿ ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ನಡೆದಿದೆ. ಆಕಾಶ್ ಅಕುರ್ ಮತ್ತು ಆಕೆಯ ಪತ್ನಿ ಪಂಪಾ ರೂಯಿಡಾಸ್ ಮೃತರು ಎಂದು ಗುರುತಿಸಲಾಗಿದೆ.

ಇಲ್ಲಿನ ಬಬ್ನಾಬೇರಾ ಪ್ರದೇಶದ ನಿವಾಸಿಯಾದ 24 ವರ್ಷದ ಆಕಾಶ್ ಮತ್ತು ಪಂಪಾ ಎರಡು ವರ್ಷಗಳ ಪ್ರೇಮ ವಿವಾಹವಾಗಿದ್ದರು. ಆದರೆ, ಆಕಾಶ್​​ನ ಮನೆಯವರು ಪಂಪಾಳನ್ನು ಸೊಸೆಯಾಗಿ ಒಪ್ಪಲು ಸಿದ್ಧರಿರಲಿಲ್ಲ. ತವರಿನ ಮನೆಯವರ ಸಂಪರ್ಕದಲ್ಲಿರಲು ಸಹ ಪಂಪಾಗೆ ಅನುಮತಿ ಕೊಡುತ್ತಿರಲಿಲ್ಲ. ಜೊತೆಗೆ ಪಂಪಾಳಿಗೆ ಯುವಕನ ಮನೆಯವರು ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆಕೆ ಕುಟುಂಬಸ್ಥರು ಆರೋಪಿಸಿದ್ದಾರೆ.

ಸದ್ಯ ಪಂಪಾ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾದ ಸುದ್ದಿ ತಿಳಿದ ಮೇಲೂ ಚಿತ್ರಹಿಂಸೆ ಹೆಚ್ಚಾಗಿತ್ತು. ಈ ಚಿತ್ರಹಿಂಸೆ ಸಹಿಸಲಾರದೇ ತನ್ನ 3 ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ಆಕಾಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಂಪಾಳ ಕುಟುಂಬಸ್ಥರು ದೂರಿದ್ದಾರೆ.

ದಂಪತಿ ಆತ್ಮಹತ್ಯೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತ ದೇಹಗಳನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ವಿವಾಹವಾಗಿ 16 ವರ್ಷ, ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ: ಗಂಡನ ಕೊಲೆ ಮಾಡಿ ಚರಂಡಿಗೆ ಶವ ಎಸೆದ ಹೆಂಡ್ತಿ

ABOUT THE AUTHOR

...view details