ಪೋರ್ಟ್ ಬ್ಲೇರ್ (ಅಂಡಮಾನ್ ಮತ್ತು ನಿಕೋಬಾರ್):ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಅಂಡಮಾನ್‌ನ ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಫಾಲ್ಸ್ ಸೀಲಿಂಗ್‌ನ ಒಂದು ಭಾಗ ಭಾರಿ ಗಾಳಿ ನೆಲಕ್ಕುರುಳಿದೆ. ಸಿಸಿಟಿವಿ ಕ್ಯಾಮರಾಗಳನ್ನು ದುರಸ್ತಿಗೊಳಿಸಲು ಫಾಲ್ಸ್ ಸಡಿಲಗೊಳಿಸಿದ ನಂತರ ಈ ಘಟನೆ ನಡೆದಿದೆ.
ಟರ್ಮಿನಲ್ ಕಟ್ಟಡದ ಹೊರಗೆ ಟಿಕೆಟಿಂಗ್ ಕೌಂಟರ್ ಮುಂಭಾಗದ ಫಾಲ್ಸ್ ಸೀಲಿಂಗ್ಅನ್ನು ಸಿಸಿಟಿವಿ ಕಾಮಗಾರಿಗಳ ಹೊಂದಾಣಿಕೆ ಮತ್ತು ಅಂತಿಮ ಜೋಡಣೆಗಾಗಿ ಸಡಿಲಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಅನ್ನು ಇನ್ನೂ ಕಾರ್ಯಗತಗೊಳಿಸಬೇಕಾಗಿದೆ. ಇದೊಂದು ಸಣ್ಣ ಘಟನೆ. ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಕೆಲಸ ನಡೆಯುತ್ತಿದೆ. ಪ್ಯಾನಲ್‌ಗಳ ಹಿಂದೆ ಅಂತಹ ಕ್ಯಾಮರಾಗಳಿಗೆ ವೈರಿಂಗ್ ಮಾಡಬೇಕಿಗಿದೆ. ಕೆಲವು ಫಿಕ್ಸಿಂಗ್ ಸಮಸ್ಯೆಗಳಿರಬಹುದು. ನಾವು ಸಮಸ್ಯೆ ಸರಿಪಡಿಸಿದ್ದೇವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ವೀರ್ ಸಾವರ್ಕರ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ಮೋದಿ ಜುಲೈ 18ರಂದು ಉದ್ಘಾಟಿಸಿದ್ದರು. ಜುಲೈ 22ರ ರಾತ್ರಿ, ಭಾರಿ ಗಾಳಿ ಬೀಸಿದ್ದು ಫಾಲ್ಸ್ ಸೀಲಿಂಗ್‌ನ ಒಂದು ಭಾಗ ಕೆಳಗೆ ಬಿದ್ದಿದೆ. ಟರ್ಮಿನಲ್ ಕಟ್ಟಡದೊಳಗಿನ ಫಾಲ್ಸ್ ಸೀಲಿಂಗ್ ಹಾಗೆಯೇ ಇದೆ. ಟರ್ಮಿನಲ್‌ನೊಳಗೆ ಯಾವುದೇ ಹಾನಿ ಸಂಭವಿಸಿಲ್ಲ" ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.