ತಿರುಪತಿ(ಆಂಧ್ರಪ್ರದೇಶ): ಇಲ್ಲಿನ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಕಲಿ ಮತದಾರರು ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಿದ್ದಾರೆ.
ಲೋಕಸಭಾ ಉಪಚುನಾವಣೆಯ ಮತದಾನದ ಸಮಯದಲ್ಲಿ, ನಕಲಿ ಮತದಾರರು ನಿರಂಕುಶವಾಗಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ನಕಲಿ ಮತದಾರರನ್ನು ಹೊರಗಿನಿಂದ ಖಾಸಗಿ ವಾಹನಗಳಲ್ಲಿ ತಿರುಪತಿಗೆ ಕರೆತರಲಾಗಿದೆ. ನಕಲಿ ಮತದಾರರಿಂದಾಗಿ, ನಿಜವಾಗಿಯೂ ಮತದಾನದ ಹಕ್ಕನ್ನು ಹೊಂದಿರುವವರು ತಮ್ಮ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ವೈಎಸ್ಆರ್ಸಿಪಿ ಮತ್ತೆ ಆಡಳಿತ ನಡೆಸುವ ಉದ್ದೇಶದಿಂದ ಈ ಕೆಲಸ ಮಾಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ತೆಲುಗು ದೇಶಂ ಪಕ್ಷ-ಟಿಡಿಪಿ ಸಾಕ್ಷಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಟಿಡಿಪಿ ಮತ್ತು ಬಿಜೆಪಿ ಉಪಚುನಾವಣೆ ಮತದಾನವನ್ನು ರದ್ದುಗೊಳಿಸುವಂತೆ ಕೋರಿದ್ದಲ್ಲದೆ, ಮರುಚುನಾವಣೆಗೆ ಒತ್ತಾಯಿಸಿವೆ.
ಶನಿವಾರ ಬೆಳಗ್ಗೆ ಮತದಾನ ಕೇಂದ್ರಗಳಲ್ಲಿ ಜನಸಮೂಹವು ಕಂಡುಬಂದಿತ್ತು. ಎಲ್ಲರ ಕೈಯಲ್ಲಿ ಮತದಾರರ ಕಾರ್ಡ್‌ಗಳಿದ್ದವು. ಜನರು ವ್ಯವಸ್ಥಿತವಾಗಿ ಮತ ಚಲಾಯಿಸಲು ಬಂದಂತೆ ಕಾಣುತ್ತಿತ್ತು. ಆದರೆ ಸತ್ಯವೆಂದರೆ ಅವರು ನಿಜವಾದ ಮತದಾರರಲ್ಲ. ತಿರುಪತಿಯಲ್ಲಿ ಮತ ಚಲಾಯಿಸಲು ಬಂದ ಚಿತ್ತೂರು ಮತ್ತು ಕಡಪ ಪ್ರದೇಶದ ಜನರು. ಇದು ಆಶ್ಚರ್ಯವೆಂದರೂ ನಿಜ ಅಂತಿದ್ದಾರೆ ಪ್ರತಿಪಕ್ಷದವರು.
ಸರದಿಯಲ್ಲಿರುವವರಿಗೆ ಅವರ ಹೆಸರು ತಿಳಿದಿಲ್ಲ. ವಿಳಾಸವನ್ನು ಹೇಳಲು ಸಾಧ್ಯವಿಲ್ಲ. ಮತದಾನ ಕೇಂದ್ರಕ್ಕೆ ಹೋದರೆ ಯಾರೋ ಈಗಾಗಲೇ ಮತ ಚಲಾಯಿಸಿರುತ್ತಾರೆ. ಚುನಾವಣಾ ಸಂಹಿತೆ ಜಾರಿಯಲ್ಲಿರುವ ತಿರುಪತಿ ಪ್ರದೇಶದಲ್ಲಿ ನೂರಾರು ಜನರು ಬಸ್ಸು ಮತ್ತು ಕಾರುಗಳಲ್ಲಿ ಜಮಾಯಿಸುತ್ತಾರೆ. ಈ ಬಗ್ಗೆ ಕೇಳಿದರೆ ಅವರು ತೀರ್ಥಯಾತ್ರೆಗಾಗಿ ಬಂದಿದ್ದಾರೆ ಎಂದು ಸರಳವಾಗಿ ಉತ್ತರ ನೀಡುತ್ತಾರೆ.
ತಿರುಪತಿ ಉಪಚುನಾವಣೆಯಲ್ಲಿ ಕಂಡುಬಂದ ದೃಶ್ಯಗಳು ಇವು. ಹೆಚ್ಚಿನ ಸಂಖ್ಯೆಯ ನಕಲಿ ಮತದಾರರು ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಿದ್ದಾರೆ. ತಿರುಪತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಿರುಪತಿ ಮತ್ತು ಶ್ರೀಕಾಳಹಸ್ತಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಪಾರ ಸಂಖ್ಯೆಯ ನಕಲಿ ಮತದಾರರು ಮತ್ತು ವಂಚಕರು ಸೇರಿದ್ದಾರೆ. ಬಿಜೆಪಿ, ಜನಸೇನಾ ಪಕ್ಷದ ಮುಖಂಡರು, ಏಜೆಂಟರು ಅವರನ್ನು ಸಾಕ್ಷ್ಯಗಳೊಂದಿಗೆ ಸೆರೆಹಿಡಿದಿದ್ದಾರೆ.
ನಕಲಿ ಮತದಾರರು ದೌಡು:
ಮತದಾನ ನಡೆಯುತ್ತಿದ್ದ ವೇಳೆ ಹೆಚ್ಚಿನ ಸಂಖ್ಯೆಯ ನಕಲಿ ಮತದಾರರು ಆಗಮಿಸಿದ್ದರು. ಮತದಾರರ ಗುರುತಿನ ಚೀಟಿ ಇರುವುದರಿಂದ ಅವರು ಯಾವುದೇ ಅಡೆತಡೆಯಿಲ್ಲದೆ ಮತ ಚಲಾಯಿಸಿದ್ದರು. ಆದರೆ ಅವು ನಕಲಿ. ಕೊರೊನಾದ ಕಾರಣ, ಎಲ್ಲರೂ ಮಾಸ್ಕ್ ಧರಿಸಿದ್ದರು. ಪೋಲಿಂಗ್ ಸಿಬ್ಬಂದಿ ಮತ್ತು ಏಜೆಂಟರು ಅಷ್ಟಾಗಿ ಆಕ್ಷೇಪಿಸಲಿಲ್ಲ. ಚಿತ್ತೂರು ಸಂಸತ್ತು ಮತ್ತು ಕಡಪಾ ಜಿಲ್ಲೆಗಳ ನಕಲಿ ಮತದಾರರು ನಗರದಾದ್ಯಂತ ಕಂಡುಬಂದರು. ಅವರು ಸ್ಥಳೀಯ ಮುಖಂಡರಿಗೆ ಸಿಕ್ಕಿಬಿದ್ದಾಗ ಮತದಾರರ ಗುರುತಿನ ಹೆಸರನ್ನು ಸಹ ಹೇಳಲು ಸಾಧ್ಯವಾಗಲಿಲ್ಲ. ಆ ನಕಲಿ ಮತದಾರರನ್ನು ಹಿಡಿಯಲಾಯಿತು, ತಪ್ಪಿಸಿಕೊಂಡ ಹಲವಾರು ವಿಡಿಯೋಗಳು ಈಗ ವೈರಲ್ ಆಗಿವೆ.