ನವದೆಹಲಿ:''ಕರ್ನಾಟಕದಲ್ಲಿ ಮುಂದಿನ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಬಿಜೆಪಿಯ 'ನಕಲಿ ಸುದ್ದಿ ಕಾರ್ಖಾನೆ'ಗೆ ನಮ್ಮ ಆತ್ಮೀಯ ಮಾಧ್ಯಮ ಮಿತ್ರರು ಬಲಿಯಾಗಿದ್ದಾರೆ. ಬಿಜೆಪಿಯ ಹತಾಶೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಕರ್ನಾಟಕದ ಸಹೋದರ, ಸಹೋದರಿಯರ ನಿರ್ಧಾರದಿಂದ 40 ಪರ್ಸೆಂಟ್ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿದರು'' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಸುಳ್ಳು ಸುದ್ದಿ ಬಗ್ಗೆ ಎಚ್ಚರಿಕೆಯನ್ನೂ ನೀಡಿದರು.
ಇದನ್ನೂ ಓದಿ:ಖರ್ಗೆ, ರಾಹುಲ್ ಬಳಿಕ ಸುರ್ಜೇವಾಲ ನಿವಾಸದಲ್ಲಿ ಡಿಕೆಶಿ ಸಭೆ: ವಿಡಿಯೋ
ರಣದೀಪ್ ಸಿಂಗ್ ಸುರ್ಜೆವಾಲಾ ಗರಂ:ಈ ಕುರಿತು ಟ್ವೀಟ್ ಮಾಡಿದ ಅವರು, ''ಉತ್ತರ ಪ್ರದೇಶ, ಅಸ್ಸೋಂ , ಗೋವಾ ಮತ್ತು ಇತರ ಹಲವು ರಾಜ್ಯಗಳ ಮುಖ್ಯಮಂತ್ರಿಗಳನ್ನು ನಿರ್ಧರಿಸಲು 7ರಿಂದ 10 ದಿನಗಳನ್ನು ತೆಗೆದುಕೊಂಡಾಗ ಅದೇ ಜನರು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆಗ ಯಾರೂ ಹೈಕಮಾಂಡ್ ಸಂಸ್ಕೃತಿಯ ಬಗ್ಗೆ ಪಿಸುಗುಟ್ಟಲಿಲ್ಲ. ಆದರೆ, ಅದೇ ಶಕ್ತಿಗಳು ಮತ್ತು ಆಯ್ದ ಸುದ್ದಿವಾಹಿನಿಗಳು ಸಂವಾದ, ಚರ್ಚೆ, ಒಮ್ಮತದ ಪ್ರಕ್ರಿಯೆಗೆ ಆಕ್ಷೇಪಗಳನ್ನು ವ್ಯಕ್ತಪಡಿಸಿದವು ಎಂದು ಗರಂ ಆದರು.
ಇದನ್ನೂ ಓದಿ:ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಬ್ಲಾಕ್ ಮೇಲ್ ತಂತ್ರ ಎಂದ ಛಲವಾದಿ ನಾರಾಯಣಸ್ವಾಮಿ ಆರೋಪ.
5 ಕಾಂಗ್ರೆಸ್ ಗ್ಯಾರೆಂಟಿಗಳನ್ನು ಜಾರಿಗೊಳಿಸಲಿದೆ - ಸುರ್ಜೆವಾಲಾ:''ಖರ್ಗೆ ಅವರು ನಿಜವಾದ ಪ್ರಜಾಪ್ರಭುತ್ವವಾದಿಯಾಗಿದ್ದು, ಸಂಪ್ರದಾಯಬದ್ಧವಾಗಿ ವ್ಯವಹರಿಸುತ್ತಿದ್ದಾರೆ. ಹೀಗಾಗಿ ಯಾರೂ ನಾಯಕತ್ವದ ವಿಚಾರದಲ್ಲಿ ಹೇಳಿಕೆ ನೀಡದಂತೆ ಎಲ್ಲ ಕಾಂಗ್ರೆಸ್ ನಾಯಕರಿಗೂ ಸೂಚಿಸಿದ್ದಾರೆ. ಇಲ್ಲಿಂದ ಮುಂದಕ್ಕೆ ಹೋಗಿ ಮಾಡುವಂತಹ ಔಟ್ ಟರ್ನ್ ಟೀಕೆಗಳನ್ನು ಅಶಿಸ್ತು ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು. ಕಾಂಗ್ರೆಸ್ ಪಕ್ಷವು ಪ್ರತಿಯೊಬ್ಬ ಕನ್ನಡಿಗನ ಕಲ್ಯಾಣಕ್ಕೆ ಬದ್ಧವಾಗಿದ್ದು, ಸಚಿವ ಸಂಪುಟದ ಮೊದಲ ಸಭೆಯಲ್ಲಿ 5 ಕಾಂಗ್ರೆಸ್ ಗ್ಯಾರೆಂಟಿಗಳನ್ನು ಜಾರಿಗೊಳಿಸಲಿದೆ'' ಎಂದು ಅವರು ಇದೇ ವೇಳೆ ಭರವಸೆ ನೀಡಿದರು.