ನವದೆಹಲಿ: 13 ವರ್ಷದೊಳಗಿನ ಮಕ್ಕಳು ಕೂಡ ಇನ್‌ಸ್ಟಾಗ್ರಾಂ ಬಳಕೆ ಮಾಡಬಹುದು. ಅಷ್ಟೇ ಅಲ್ಲ, ಇದನ್ನು ಪೋಷಕರು ನಿಯಂತ್ರಣ ಮಾಡಬಹುದಾಗಿದೆ ಎಂದು ಫೇಸ್‌ಬುಕ್ ತಿಳಿಸಿದೆ. ಈ ಸಂಬಂಧ ಜನಪ್ರಿಯ ಫೋಟೋ ಹಂಚಿಕೆ ಅಪ್ಲಿಕೇಶನ್‌ನ ಆವೃತ್ತಿಯನ್ನು ಅನ್ವೇಷಿಸಲಾಗುತ್ತಿದೆ ಎಂದು ಇನ್‌ಸ್ಟಾಗ್ರಾಂ ಮುಖ್ಯಸ್ಥ ಆಡಮ್ ಮೊಸ್ಸೆರಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಮ್ಮ ಸ್ನೇಹಿತರೊಂದಿಗೆ ಮುಂದುವರಿಯಲು ಸಹಾಯ ಮಾಡುವ ಅಪ್ಲಿಕೇಶನ್‌ಗಳಿಗೆ ಸೇರಬಹುದೇ ಎಂದು ಮಕ್ಕಳು ಪೋಷಕರನ್ನು ಕೇಳುತ್ತಿದ್ದಾರೆ ಎಂದು ಬರೆದಿದ್ದಾರೆ.
ನಾವು ಮೆಸೆಂಜರ್ ಕಿಡ್ಸ್ ಮಾಡಿದಂತೆಯೇ ಪೋಷಕರ ನಿಯಂತ್ರಣವಿರುವ ಇನ್‌ಸ್ಟಾಗ್ರಾಂನ ಒಂದು ಆವೃತ್ತಿಯನ್ನು ಅನ್ವೇಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಮೊಸ್ಸೆರಿ ಅವರು ಉಪಾಧ್ಯಕ್ಷ ಪಾವ್ನಿ ದಿವಾಂಜಿ ಅವರೊಂದಿಗೆ ಇನ್‌ಸ್ಟಾಗ್ರಾಂ ಫಾರ್ ಕಿಡ್ಸ್ ಯೋಜನೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.