ಇಂಪಾಲ್, ಮಣಿಪುರ:ಮಣಿಪುರದಲ್ಲಿ ನಡೆಯುತ್ತಿರುವ ಜಾತಿ ಹಿಂಸಾಚಾರದ ನಡುವೆ ಹಲವಾರು ಪೀಡಿತ ಪ್ರದೇಶಗಳಲ್ಲಿ ಮಹಿಳೆಯರು ಪ್ರತಿಭಟನೆ ಕೈಗೊಂಡಿದ್ದರು. ಪ್ರತಿಭಟನೆಕ್ಕೆ ಮಣಿದ ಮಣಿಪುರ ಸರ್ಕಾರ ಸೇನೆಯನ್ನು ಕಣಕ್ಕಿಳಿಸಿದೆ. ಕಲಹ ಪೀಡಿತ ಮಣಿಪುರದಲ್ಲಿ ಹಿಂಸಾಚಾರ ತಡೆಯಲು ನಾವು ಅಸ್ಸೋಂ ರೈಫಲ್ಸ್ ಜೊತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸೇನೆ ಹೇಳಿದೆ.
ಈ ಬಗ್ಗೆ ಸೇನೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಸೇನೆ ತನ್ನ ಹೇಳಿಕೆಯಲ್ಲಿ, ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿಯನ್ನು ನೆಲೆಸುವಲ್ಲಿ ಅಸ್ಸೋಂ ರೈಫಲ್ಸ್ ತೊಡಗಿದೆ. ಅಸ್ಸೋಂ ರೈಫಲ್ಸ್ ಸಿಬ್ಬಂದಿ ವಿರುದ್ಧ ನಂಬಿಕೆಗೆ ಧಕ್ಕೆ ತರುವ ಪ್ರಯತ್ನಗಳು ನಡೆದಿವೆ. ಮೇ 3 ರಿಂದ ಮಣಿಪುರದಲ್ಲಿ ಜೀವಗಳನ್ನು ಉಳಿಸಲು ಮತ್ತು ಶಾಂತಿ ಮರು ನೆಲಸಲು ಕೇಂದ್ರ ಭದ್ರತಾ ಪಡೆಗಳ ಪಾತ್ರ, ಉದ್ದೇಶ ಮತ್ತು ಸಮಗ್ರತೆಯನ್ನು ವಿಫಲಗೊಳಿಸಲು ಕೆಲವು ಶತ್ರುಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸೇನೆ ಹೇಳಿದೆ.
ಮಣಿಪುರದಲ್ಲಿ ಶಾಂತಿಯ ಮರುಸ್ಥಾಪನೆಗಾಗಿ ಪ್ರಯತ್ನಿಸಲಾಗುತ್ತದೆ. ಜಂಟಿ ಕಾರ್ಯವಿಧಾನದ ಮೂಲಕ ಎಲ್ಲ ತಪ್ಪುಗ್ರಹಿಕೆಗಳನ್ನು ತಕ್ಷಣವೇ ಪರಿಹರಿಸಲಾಗುತ್ತದೆ. ಕಳೆದ 24 ಗಂಟೆಗಳಲ್ಲಿ ಅಸ್ಸೋಂ ರೈಫಲ್ಸ್ ಸಿಬ್ಬಂದಿ ಗೌರವವನ್ನು ಹಾಳುಮಾಡುವ ಉದ್ದೇಶ ಹೊಂದಿರುವ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಸೇನೆ ಹೇಳಿದೆ.
ಮೊದಲ ಪ್ರಕರಣದಲ್ಲಿ, ಅಸ್ಸೋಂ ರೈಫಲ್ಸ್ ಬೆಟಾಲಿಯನ್ ಎರಡು ಸಮುದಾಯಗಳ ನಡುವಿನ ಹಿಂಸಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ಬಫರ್ ವಲಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಪ್ರಧಾನ ಕಚೇರಿಯ ಆದೇಶಕ್ಕೆ ಅನುಗುಣವಾಗಿ ಅಸ್ಸೋಂ ರೈಫಲ್ಸ್ ಕಾರ್ಯನಿರ್ವಹಿಸಿದೆ. ಎರಡನೇ ಪ್ರಕರಣದಲ್ಲಿ, ಅಸ್ಸೋಂ ರೈಫಲ್ಸ್ ಆ ಪ್ರದೇಶದಿಂದ ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಸೇನೆ ಹೇಳಿದೆ.
ಮೇ ತಿಂಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಸೇನೆಯ ಪದಾತಿ ದಳವನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಅಲ್ಲಿಂದ ಅಸ್ಸೋಂ ರೈಫಲ್ಸ್ ಅನ್ನು ಸ್ಥಳಾಂತರಿಸಲಾಗಿದೆ ಎಂಬ ವರದಿ ಮಾಡಲಾಗಿದೆ. ನಗರದಲ್ಲಿ ಹಿಂಸಾಚಾರ ತಡೆಯಲು ನಾವು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಭಾರತೀಯ ಸೇನೆ ಮತ್ತು ಅಸ್ಸೋಂ ರೈಫಲ್ಸ್ ಮಣಿಪುರದ ಜನರಿಗೆ ಭರವಸೆ ನೀಡುತ್ತವೆ ಅಂತಾ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಸ್ಸೋಂ ರೈಫಲ್ಸ್ ವಿರುದ್ಧ ಎಫ್‌ಐಆರ್:ಕಾರ್ಯಾಚರಣೆಗೆ ಅಡ್ಡಿಪಡಿಸಿದ ಅಸ್ಸೋಂ ರೈಫಲ್ಸ್ ಯೋಧರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಪ್ರದೇಶದಲ್ಲಿ ಮೈತೇಯಿ ಸಮುದಾಯಕ್ಕೆ ಸೇರಿದ ಮೂವರನ್ನು ಕೊಂದ ನಂತರ ಹಿಂಸಾಚಾರ ಭುಗಿಲೆದ್ದಿತು. ಕುಕ್ಕಿ ದಾಳಿ ನಡೆಸಿದವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಈ ಕಾರ್ಯಾಚರಣೆಯಲ್ಲಿ, ಅಸ್ಸೋಂ ರೈಫಲ್ಸ್ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಎಫ್‌ಐಆರ್ ದಾಖಲಾಗಿತ್ತು.
ಓದಿ:No-Confidence Motion: ಮಣಿಪುರ ಬಗ್ಗೆ ಮೋದಿ ಮೌನ ಮುರಿಯಲು ಅವಿಶ್ವಾಸ ನಿರ್ಣಯ ಅನಿವಾರ್ಯವಾಗಿತ್ತು: ಲೋಕಸಭೆಯಲ್ಲಿ ಕಾಂಗ್ರೆಸ್