ಮುಂಬೈ( ಮಹಾರಾಷ್ಟ್ರ): ಇತ್ತೀಚೆಗೆ ವಿಡಿಯೋ ಅಥವಾ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಸುಲಿಗೆ ಮಾಡುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಬೈನ ಅಂಧೇರಿ ಪ್ರದೇಶದಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ.
ನಿರ್ಮಾಣ ಕ್ಷೇತ್ರದ ಹೆಸರಾಂತ ಕಂಪನಿಯೊಂದರ ನಿರ್ದೇಶಕರನ್ನು ಈ ರೀತಿಯಲ್ಲಿ ಬೆದರಿಸಲಾಗಿದೆ. ಆರೋಪಿಯು ನಿರ್ದೇಶಕನ ಹೆಸರಿನಲ್ಲಿ ಎರಡು ನಕಲಿ ಸಾಮಾಜಿಕ ಖಾತೆಗಳನ್ನು ತೆರೆದು ನಿರ್ದೇಶಕರ ಚಿಕ್ಕಪ್ಪ ಮತ್ತು ಇತರ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಈ ವಿಡಿಯೋ ಹಾಗೂ ಫೋಟೋಗಳನ್ನು ಅವರಿಗೆ ಕಳುಹಿಸುವ ಮೂಲಕ ಮಾನಹಾನಿ ಮಾಡಿದ್ದಾನೆ. ಬಿಲ್ಡರ್ ದೂರಿನ ಆಧಾರದ ಮೇಲೆ ಜುಹು ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ:26 ವರ್ಷದ ದೂರುದಾರರು ಪ್ರಸಿದ್ಧ ನಿರ್ಮಾಣ ಕಂಪನಿಯ ನಿರ್ದೇಶಕರಾಗಿದ್ದಾರೆ. ಇವರು ಇನ್ಸ್ಟಾ ದಲ್ಲಿ ಖಾತೆಯನ್ನು ಹೊಂದಿದ್ದಾರೆ. ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯೊಬ್ಬರಿಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದರು. ಆ ವಿನಂತಿಯನ್ನು ಸ್ವೀಕರಿಸಿದ ನಂತರ ಮಹಿಳೆ ನಾನು ಯಾರು ಎಂದು ಗೊತ್ತೇ ಎಂದು ಕೇಳಿದ್ದಾಳೆ. ನಂತರ ನಿರ್ದೇಶಕ ಮತ್ತು ಅಪರಿಚಿತ ಮಹಿಳೆ ಪರಸ್ಪರ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾರೆ.