ಕರ್ನಾಟಕ

karnataka

ETV Bharat / bharat

ಮುಂಬೈ ದಾಳಿಗೆ 14 ವರ್ಷ: ಭಯೋತ್ಪಾದನೆ ಮನುಕುಲಕ್ಕೆ ಧಕ್ಕೆ ಎಂದ ವಿದೇಶಾಂಗ ಸಚಿವ ಜೈಶಂಕರ್​ - terrorism is a threat to mankind

ಮುಂಬೈ ದಾಳಿಗೆ 14 ವರ್ಷ ಕಳೆದಿದ್ದು. ಈ ಉಗ್ರರ ದಾಳಿಯಲ್ಲಿ ಮಡಿದ ಸಂತ್ರಸ್ತರನ್ನು ವಿದೇಶಾಂಗ ಸಚಿವರು ಸ್ಮರಣೆ ಮಾಡಿದ್ದಾರೆ

ಮುಂಬೈ ದಾಳಿಗೆ 14 ವರ್ಷ: ಭಯೋತ್ಪಾದನೆ ಮನುಕುಲಕ್ಕೆ ಧಕ್ಕೆ ಎಂದ ವಿದೇಶಾಂಗ ಸಚಿವ ಜೈಶಂಕರ್​
external-affairs-minister-jaishankar-says-terrorism-is-a-threat-to-mankind

By

Published : Nov 26, 2022, 11:14 AM IST

ದೆಹಲಿ:ಭಯೋತ್ಪಾದನೆ ಮನುಕುಲಕ್ಕೆ ಮಾರಕವಾಗಿದ್ದು, ಆತಂಕ ಮೂಡಿಸಿದೆ. ಜಗತ್ತಿನಾದ್ಯಂತ ನಡೆಯುತ್ತಿರುವ 26/11 ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದವರ ಸ್ಮರಣೆಯಲ್ಲಿ ಭಾರತ ಭಾಗಿಯಾಗಿದೆ. ಈ ದಾಳಿಯನ್ನು ಯೋಜಿಸಿದ ಮತ್ತು ಮೇಲ್ವಿಚಾರಣೆ ಮಾಡಿದವರನ್ನು ನ್ಯಾಯದ ಮುಂದೆ ತರಬೇಕು. ನಾವು ಭಯೋತ್ಪಾದನೆಯ ಪ್ರತಿಯೊಬ್ಬ ಸಂತ್ರಸ್ತರ ಜೊತೆಗಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಮುಂಬೈ ದಾಳಿಗೆ 14 ವರ್ಷ ಕಳೆದಿದ್ದು. ಈ ಉಗ್ರರ ದಾಳಿಯಲ್ಲಿ ಮಡಿದ ಸಂತ್ರಸ್ತರನ್ನು ವಿದೇಶಾಂಗ ಸಚಿವರು ಸ್ಮರಿಸಿದ್ದಾರೆ. 14 ವರ್ಷಗಳ ಹಿಂದೆ ನವೆಂಬರ್​ 26ರಂದು ಮುಂಬೈನಲ್ಲಿ ನಡೆದ ಪಾಕಿಸ್ತಾನ ಮೂಲದ ಲಷ್ಕರ್​ ಎ-ತೋಯ್ಬಾದ 12 ಮಂದಿ ಉಗ್ರರು ನಡೆಸಿದ ದಾಳಿಯಲ್ಲಿ 174 ಮಂದಿಯನ್ನು ಗುಂಡಿಕ್ಕಿ ಕೊಂದಿದ್ದರು. ಇದರಲ್ಲಿ 26 ಮಂದಿ ವಿದೇಶಿಗರು ಆಗಿದ್ದು, ಘಟನೆಯಲ್ಲಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ: ಮುಂಬೈ ದಾಳಿಗೆ 14 ವರ್ಷ.. ಭಾರತೀಯ ಇತಿಹಾಸ ಪುಟದಲ್ಲಿ ಮರೆಯಲಾಗದ ಕಹಿ ಘಟನೆ

ABOUT THE AUTHOR

...view details