ಕರ್ನಾಟಕ

karnataka

By

Published : Nov 15, 2021, 1:41 PM IST

ETV Bharat / bharat

26 ಮಾವೋವಾದಿಗಳ ಹತ್ಯೆಯ ನಂತರ ಗಡ್ಚಿರೋಲಿಯಲ್ಲಿ ನೀರಸ ಮೌನ

ರಕ್ತದ ಕಲೆಗಳು, ಮರಗಳ ಮೇಲಿನ ಗುಂಡಿನ ಗುರುತುಗಳು ಸೇರಿದಂತೆ ಅಲ್ಲಲ್ಲಿ ಕೆಲ ವಸ್ತುಗಳು ಮತ್ತು ದಟ್ಟ ಅರಣ್ಯ ಸುತ್ತುವರೆದಿರುವ ಮೌನವು ನವೆಂಬರ್ 13 ರಂದು ನಡೆದ ರಕ್ತಸಿಕ್ತ ಕಥೆ ಹೇಳುತ್ತದೆ. ಮಾವೋವಾದಿಗಳು ಬಹುಶಃ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸ್ಥಳದಲ್ಲಿ ಅವರು ಬಳಸಿದ ಪಡಿತರ ಸಾಮಗ್ರಿಗಳು ಮತ್ತು ಇತರ ವಸ್ತುಗಳು ಇನ್ನೂ ಬಿದ್ದಿವೆ.

Special Report: Eerie silence falls on Gadchiroli after killings of 26 Maoists
Special Report: Eerie silence falls on Gadchiroli after killings of 26 Maoists

ಗಡ್ಚಿರೋಲಿ (ಮಹಾರಾಷ್ಟ್ರ):ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದ ಬಂಡಾಯ ವಿರೋಧಿ ಕಾರ್ಯಾಚರಣೆಯಲ್ಲಿ ಇಪ್ಪತ್ತಾರು ಮಾವೋವಾದಿಗಳುಹತರಾದ ಎರಡು ದಿನಗಳ ನಂತರ, ಈಟಿವಿ ಭಾರತ ತಂಡವು ಎನ್‌ಕೌಂಟರ್ ಸ್ಥಳಕ್ಕೆ ತಲುಪಿ ಕೂಲಂಕಷ ವರದಿ ಮಾಡಿದೆ.

ಮಹಾರಾಷ್ಟ್ರ - ಛತ್ತೀಸ್‌ಗಢ ಗಡಿ ಭಾಗವಾದ ಗಡ್ಚಿರೋಲಿ ಜಿಲ್ಲೆಯ ಧನೋರಾ ತಾಲೂಕಿನಲ್ಲಿ ಮಹಾರಾಷ್ಟ್ರ ಪೊಲೀಸ್‌ನ ಸಿ - 60 ಘಟಕದೊಂದಿಗಿನ (C-60 unit of the police) ಎನ್‌ಕೌಂಟರ್‌ನಲ್ಲಿ ಮಾವೋವಾದಿಗಳುಹತರಾಗಿದ್ದಾರೆ. ಮೂಲಗಳ ಪ್ರಕಾರ, ಈ ಗ್ರಾಮಗಳಿಗೆ ಹೆಚ್ಚಿನ ಸಂಖ್ಯೆಯ ಮಾವೋವಾದಿಗಳುಪ್ರವೇಶಿಸಿದ್ದಾರೆ ಎಂಬ ಸುಳಿವು ಆಧರಿಸಿ ಶೋಧ ಕಾರ್ಯಾಚರಣೆಯ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ರಕ್ತದ ಕಲೆಗಳು, ಮರಗಳ ಮೇಲಿನ ಗುಂಡಿನ ಗುರುತುಗಳು ಸೇರಿದಂತೆ ಅಲ್ಲಲ್ಲಿ ಕೆಲ ವಸ್ತುಗಳು ಮತ್ತು ದಟ್ಟ ಅರಣ್ಯ ಸುತ್ತುವರೆದಿರುವ ಮೌನವು ನವೆಂಬರ್ 13 ರಂದು ನಡೆದ ರಕ್ತಸಿಕ್ತ ಕಥೆ ಹೇಳುತ್ತದೆ. ಮಾವೋವಾದಿಗಳು ಬಹುಶಃ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸ್ಥಳದಲ್ಲಿ ಅವರು ಬಳಸಿದ ಪಡಿತರ ಸಾಮಗ್ರಿಗಳು ಮತ್ತು ಇತರ ವಸ್ತುಗಳು ಇನ್ನೂ ಬಿದ್ದಿವೆ. ಸ್ಥಳೀಯ ರಾಕೆಟ್ ಲಾಂಚರ್‌ನಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ ಅವಶೇಷಗಳು ಸ್ಥಳದಲ್ಲಿವೆ.

ಇದನ್ನೂ ಓದಿ: Gadchiroli Encounter: ಈ ಎನ್‌ಕೌಂಟರ್ ನಕಲಿ.. ನ್ಯಾಯಾಂಗ ತನಿಖೆಯಾಗಲಿ - ನಕ್ಸಲರ ಆಗ್ರಹ

ಪೊಲೀಸರ ಮೇಲೆ ಹಲ್ಲೆಗೆ ಯತ್ನ:

ಇನ್ನು ಗಡ್ಚಿರೋಲಿ ಪೊಲೀಸ್ ಸಿ-60 ರ ವಿಶೇಷ ಜವಾನರು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಭಾಗವಾಗಿ ಶನಿವಾರ ಬೆಳಗ್ಗೆ 6.30ರ ಸುಮಾರಿಗೆ 90 ರಿಂದ 100 ಮಾವೋವಾದಿಗಳು (Maoists) ಪೊಲೀಸ್ ಪಡೆಯ ಮೇಲೆ ದಾಳಿ ನಡೆಸಿದ್ದರು.

ಪೊಲೀಸರ ಪ್ರಕಾರ, ಪೊಲೀಸರನ್ನು ಕೊಂದು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವ ಉದ್ದೇಶದಿಂದ ತಮ್ಮ ತಂಡದ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಆ ವೇಳೆ ಪೊಲೀಸರು ಅವರಿಗೆ ಶರಣಾಗುವಂತೆ ಕರೆ ನೀಡಿದರು. ಇದರ ಹೊರತಾಗಿಯೂ ಅವರು ಪೊಲೀಸರ ಮೇಲೆ ಗುಂಡು ಹಾರಿಸುವುದನ್ನು ಮುಂದುವರೆಸಿದರು. ನಂತರ ಪೊಲೀಸರು ಪ್ರತೀಕಾರವಾಗಿ ಗುಂಡು ಹಾರಿಸಿದರು.

ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯುತ್ತಿದ್ದಂತೆ ಮಾವೋವಾದಿಗಳುಕಾಡಿನತ್ತ ಓಡಿ ಪರ್ವತದ ಕೆಳಗೆ ಆಶ್ರಯ ಪಡೆದರು. ಮಧ್ಯಾಹ್ನ 3.30ರ ಸುಮಾರಿಗೆ ಅಂತ್ಯಗೊಂಡ ಎನ್‌ಕೌಂಟರ್ ನಂತರ 20 ಪುರುಷ ಮತ್ತು 6 ಮಹಿಳಾ ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಯಿತು. ಹಾಗೆ ಆ ವೇಳೆ 29 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದರಲ್ಲಿ AK-47, INSAS ರೈಫಲ್ ಮತ್ತು SL ಸೇರಿವೆ.

ತೇಲ್ತುಂಬ್ಡೆ ಕೂಡ ಎನ್‌ಕೌಂಟರ್‌ನಲ್ಲಿ ಹತ:

ಪ್ರಮುಖ ಆರ್ದ್ರ ನಾಯಕ ಮಿಲಿಂದ್ ತೇಲ್ತುಂಬ್ಡೆ( Milind Thaltumbde) ಕೂಡ ಎನ್‌ಕೌಂಟರ್‌ನಲ್ಲಿ ಹತವಾಗಿದ್ದಾನೆ. ತೇಲ್ತುಂಬ್ಡೆ ಮಾವೋವಾದಿ ಸಂಘಟನೆಯ ಕೇಂದ್ರ ವಲಯ ಸಮಿತಿಯ ಸದಸ್ಯನಾಗಿದ್ದ. ಮಹಾರಾಷ್ಟ್ರ, ಛತ್ತೀಸ್‌ಗಢ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಸಕ್ರಿಯ ನಕ್ಸಲನಾಗಿದ್ದ ಈತ, ತನ್ನ ತಲೆಯ ಮೇಲೆ Rs 50 ಲಕ್ಷ ಬಹುಮಾನ ಹೊತ್ತಿದ್ದ. (ಈತನನ್ನು ಹಿಡಿದು ಕೊಟ್ಟವರಿಗೆ 50 ಕ್ಷ ಬಹುಮಾನ ಘೋಷಿಸಿದ್ದ ಪೊಲೀಸರು) ಯವತ್ಮಾಲ್ ಜಿಲ್ಲೆಯ ವಾನಿ ತಾಲೂಕಿನ ರಾಜೂರ್ ನಿವಾಸಿ ತೇಲ್ತುಂಬ್ಡೆ ದೇಶಾದ್ಯಂತ ಮಾವೋವಾದಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಗಡ್ಚಿರೋಲಿಯಲ್ಲಿ ನಕ್ಸಲೀಯರು ಮತ್ತು ಮಾವೋವಾದಿಗಳಹತ್ಯೆಗಳು ಹಲವು ವರ್ಷಗಳಿಂದ ಪುನರಾವರ್ತಿವಾಗುತ್ತಿವೆ. ಮೇ 21 ರಂದು ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ತಹಸಿಲ್‌ನ ಕೋಟ್ಮಿ ಅರಣ್ಯದಲ್ಲಿ ಪೊಲೀಸರು ಏಳು ಮಹಿಳೆಯರು ಸೇರಿದಂತೆ 13 ನಕ್ಸಲರನ್ನು ಹೊಡೆದುರುಳಿಸಿದ್ದರು. ಏಪ್ರಿಲ್ 28 ರಂದು ಎಟಪಲ್ಲಿಯ ಗಟ್ಟಾ-ಜಾಂಬಿಯಾ ಅರಣ್ಯದಲ್ಲಿ ಗಡ್ಚಿರೋಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದರು.

ABOUT THE AUTHOR

...view details