ಕರ್ನಾಟಕ

karnataka

ETV Bharat / bharat

ವಾರದ ರಾಶಿ ಭವಿಷ್ಯ: ನಿಮ್ಮಲ್ಲಿ ಕಂಡುಬರಲಿದೆ ಹೊಸ ಚೈತನ್ಯ.. ವೈವಾಹಿಕ ಬದುಕಿನಲ್ಲಿ ಸಮರಸ - ವಾರದ ಶುಭ ದಿನಗಳು

Weekly Horoscope: ಈ ವಾರದ ಶುಭ ದಿನಗಳು, ಯಾರಿಗೆಲ್ಲ ಯಶಸ್ಸು ಸಿಗಲಿದೆ ಎಂಬುದರ ಕುರಿತಂತೆ ವಾರದ ರಾಶಿ ಭವಿಷ್ಯ ತಿಳಿಯಿರಿ..

Etv bharat weekly horoscope
ವಾರದ ರಾಶಿ ಭವಿಷ್ಯ: ಪ್ರೇಮಿಗಳ ನಡುವೆ ಆಗಾಗ್ಗೆ ವಾಗ್ವಾದ ಉಂಟಾಗಲಿವೆ

By ETV Bharat Karnataka Team

Published : Sep 3, 2023, 5:01 AM IST

ಮೇಷ:ಈ ವಾರದಲ್ಲಿ ನೀವು ಸಾಕಷ್ಟು ಚೈತನ್ಯದಿಂದ ಕೂಡಿರಲಿದ್ದೀರಿ. ಆದರೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಒಳ್ಳೆಯದು ಮತ್ತು ಕೆಟ್ಟದು ಎರಡನ್ನೂ ಪರಿಗಣಿಸಿ. ತದನಂತರವೇ ಯಾವುದೇ ಕೆಲಸಕ್ಕೆ ಕೈ ಹಾಕಿರಿ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ತೃಪ್ತಿ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ನಿಮ್ಮ ಆಪ್ತತೆಯು ಹೆಚ್ಚಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಮಗೆ ಹೊಸ ಜವಾಬ್ದಾರಿ ಸಿಗಬಹುದು. ಭಡ್ತಿ ದೊರೆಯುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಕೆಲಸದಲ್ಲಿ ಇನ್ನಷ್ಟು ಸುಧಾರಣೆ ತರಲು ಯತ್ನಿಸಿ. ವ್ಯವಹಾರದಲ್ಲಿ ಕೆಲವೊಂದು ಹೊಸ ಸಂಪರ್ಕಗಳ ಲಾಭವನ್ನು ನೀವು ಪಡೆಯಲಿದ್ದೀರಿ. ಆದರೆ ಯಾರಾದರೂ ವ್ಯಕ್ತಿಯನ್ನು ನೀವು ಭೇಟಿಯಾಗಲಿದ್ದು ಇದರಿಂದಾಗಿ ನಿಮ್ಮ ಸಮಸ್ಯೆಗಳು ಹೆಚ್ಚಲಿವೆ. ಆದರೆ ಅವರ ಬೆಳವಣಿಗೆ ಉಂಟಾಗಲಿದೆ. ಸ್ಮರಣ ಶಕ್ತಿಯಲ್ಲಿ ವೃದ್ಧಿ ಉಂಟಾಗಲಿದೆ. ಇದು ನಿಮಗೆ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ನೀಡಲಿದೆ. ಮನೆಯಲ್ಲಿ ಸಂತಸ ಇರಲಿದೆ. ನೀವು ವಾಹನವನ್ನು ಖರೀದಿಸಬಹುದು.

ವೃಷಭ:ಈ ವಾರವು ನಿಮಗೆ ಅನುಕೂಲಕರ. ವಿವಾಹಿತ ವ್ಯಕ್ತಿಗಳು ತನ್ನ ಕೌಟುಂಬಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ ಹಾಗೂ ಅವರು ಪರಸ್ಪರ ಸಂಬಂಧವು ಚೆನ್ನಾಗಿರಲಿದೆ. ಪ್ರೇಮ ಜೀವನದ ಕುರಿತು ಹೇಳುವುದಾದರೆ, ಪ್ರಣಯವು ಹೆಚ್ಚಲಿದೆ. ಆದರೆ ಆಗಾಗ್ಗೆ ವಾಗ್ವಾದಗಳು ಉಂಟಾಗಬಹುದು. ಸ್ನೇಹಿತರ ನೆರವಿನಿಂದ ನೀವು ಹೊಸ ಕೆಲಸಕ್ಕೆ ಕೈ ಹಾಕಬಹುದು. ನಿಮ್ಮ ಮನಸ್ಸಿನಲ್ಲಿ ಸಂತಸ ನೆಲೆಸುವ ಕಾರಣ ಸಾಕಷ್ಟು ಉತ್ಸಾಹದಿಂದ ನೀವು ಕೆಲಸ ಮಾಡಲಿದ್ದೀರಿ. ಆದರೂ ಆಗಾಗ್ಗೆ ಕೋಪ ಕಾಣಿಸಿಕೊಳ್ಳಬಹುದು. ನಿಮ್ಮ ಸಹೋದ್ಯೋಗಿಗಳ ಮೇಲೆ ಈ ಕೋಪವನ್ನು ನೀವು ತೋರಿಸಬಹುದು. ಈ ರೀತಿ ಆಗದಂತೆ ನೋಡಿಕೊಳ್ಳಿ. ಏಕೆಂದರೆ ಇದರಿಂದಾಗಿ ಕಚೇರಿಯ ವಾತಾವರಣ ಕೆಟ್ಟು ಹೋಗಬಹುದು. ಅಲ್ಲದೆ ನೀವು ಸಮಸ್ಯೆಯಲ್ಲಿ ಸಿಲುಕಿಕೊಳ್ಳಬಹುದು. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರು ಸಾಕಷ್ಟು ಏರುಪೇರನ್ನು ಎದುರಿಸಬಹುದು. ನಿಮ್ಮ ದೇಹದ ಆಕಾರವನ್ನು ಕಾಪಾಡಲು ಯತ್ನಿಸಿ. ನಿಮ್ಮ ಆರೋಗ್ಯವನ್ನು ನೀವು ನಿರ್ಲಕ್ಷಿಸಿದರೆ ದೊಡ್ಡ ಬೆಲೆಯನ್ನು ತೆರಬೇಕಾದೀತು. ನೀವು ಆಸ್ಪತ್ರೆಗೆ ಭೇಟಿ ನೀಡಬೇಕಾದೀತು. ಹೀಗಾಗಿ ನಿಮ್ಮ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಿ.

ಮಿಥುನ:ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯವು ಚೆನ್ನಾಗಿರಲಿದೆ. ಇದರಿಂದಾಗಿ ಸಂತಸದ ವೈವಾಹಿಕ ಜೀವನವನ್ನು ನೀವು ನಡೆಸಲಿದ್ದೀರಿ. ಈ ವಾರದಲ್ಲಿ ಪ್ರೇಮ ಜೀವನವು ಸಾಮಾನ್ಯವಾಗಿರಲಿದೆ. ನಿಮ್ಮ ಪ್ರೇಮಿಯೊಂದಿಗೆ ಯಾವುದಾದರೂ ಸುಂದರ ಸ್ಥಳಕ್ಕೆ ನೀವು ಪ್ರವಾಸಕ್ಕೆ ಹೋಗಬಹುದು. ನಿಮ್ಮ ಕೆಲಸಕ್ಕೆ ಸಾಕಷ್ಟು ವೇಗ ದೊರೆಯಲಿದ್ದು, ಇದು ನಿಮ್ಮ ಕಾರ್ಯದಕ್ಷತೆಯನ್ನು ತೋರಿಸಿ ಕೊಡಲಿದೆ. ನಿಮ್ಮ ಬಾಸ್‌ ನಿಮ್ಮ ಕೆಲಸವನ್ನು ಪ್ರಶಂಸಿಸಲಿದ್ದಾರೆ. ಇದು ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಲಿದೆ. ವ್ಯಾಪಾರೋದ್ಯಮಿಗಳು ತಮ್ಮ ಕೆಲಸಕ್ಕೆ ಗಮನ ನೀಡಬೇಕು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಉನ್ನತ ಶಿಕ್ಷಣದಲ್ಲಿ ಅವರ ಕಾರ್ಯಕ್ಷಮತೆಯಲ್ಲಿ ವೃದ್ಧಿ ಉಂಟಾಗಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯವನ್ನು ನೀವು ನಿರ್ಲಕ್ಷಿಸುವ ಸಾಧ್ಯತೆ ಇದೆ. ಈ ತಪ್ಪನ್ನು ಮಾಡಬೇಡಿ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ.

ಕರ್ಕಾಟಕ:ಈ ವಾರವು ನಿಮಗೆ ಅನುಕೂಲಕರ. ವಿವಾಹಿತ ವ್ಯಕ್ತಿಗಳಿಗೆ ಈ ವಾರವು ಒಳ್ಳೆಯದು. ಕೌಟುಂಬಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದೀರಿ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಬೇರೆ ಯಾವುದೇ ವ್ಯಕ್ತಿಯು ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಿ. ಏಕೆಂದರೆ ಇದು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು. ವೃತ್ತಿಪರ ಬದುಕು ಒತ್ತಡದಿಂದ ಕೂಡಿರಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ ಹಾಗೂ ನಿಮ್ಮದೇ ಕೆಲಸಕಾರ್ಯಗಳಿಗೆ ಒತ್ತು ನೀಡಿರಿ. ನಿಮ್ಮ ಕೆಲಸದಲ್ಲಿ ಯಾರನ್ನೂ ಅನಗತ್ಯವಾಗಿ ಸೇರಿಸಿಕೊಳ್ಳಬೇಡಿ. ಇದರಿಂದ ನಿಮಗೆ ಹಾನಿಯುಂಟಾಗಲಿದೆ. ನಿಮ್ಮ ಕೆಲಸವು ಬಾಸ್‌ ಗೆ ಗೋಚರಿಸುವಂತಾಗಲು ಅದನ್ನು ತಕ್ಷಣವೇ ಅವರಿಗೆ ವರದಿ ಮಾಡಿರಿ. ನೀವು ಸರ್ಕಾರಿ ಕ್ಷೇತ್ರದಿಂದ ಒಳ್ಳೆಯ ಲಾಭವನ್ನು ಪಡೆಯಲಿದ್ದೀರಿ. ವಿದ್ಯಾಥಿಗಳಿಗೆ ಇದು ಸಕಾಲ. ತಮ್ಮ ಕಠಿಣ ಶ್ರಮದ ಪ್ರಯತ್ನವನ್ನು ಇವರು ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ಸಿಂಹ:ಈ ವಾರವು ನಿಮಗೆ ದುರ್ಬಲವೆನಿಸಲಿದೆ. ವಿವಾಹಿತ ವ್ಯಕ್ತಿಗಳಿಗೆ ಈ ವಾರವು ದುರ್ಬಲವೆನಿಸಲಿದೆ. ನಿಮ್ಮ ನಡುವಿನ ಭಿನ್ನಾಭಿಪ್ರಾಯದ ಕಾರಣ ಸ್ವಲ್ಪ ಒತ್ತಡವು ಹೆಚ್ಚಲಿದೆ. ಆದರೆ ಇದನ್ನು ಮಾತುಕತೆಯ ಮೂಲಕ ಬಗೆಹರಿಸಬಹುದು. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಕಾಲ. ನಿಮ್ಮ ಕಠಿಣ ಶ್ರಮವು ಯಶಸ್ವಿಯಾಗಲಿದೆ. ಇದಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ. ಬಾಸ್‌ ಜೊತೆಗಿನ ನಿಮ್ಮ ಸಂಬಂಧವು ಚೆನ್ನಾಗಿರಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ದೊರೆಯಲಿದೆ. ನಿಮ್ಮ ಕೆಲವು ಡೀಲುಗಳು ಅಂತಿಮಗೊಳ್ಳಲಿದ್ದು, ಲಾಭವನ್ನು ತಂದು ಕೊಡಲಿವೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯಕ್ಕೆ ನೀವು ಕಾಳಜಿ ವಹಿಸಬೇಕು. ಮಾನಸಿಕ ಒತ್ತಡವು ನಿಮ್ಮನ್ನು ಕಾಡದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಇದು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವುದಲ್ಲದೆ ಪ್ರಮುಖ ಚಟುವಟಿಕೆಗಳನ್ನು ಕುಂಠಿತಗೊಳಿಸಬಹುದು. ಈ ವಾರದ ಆರಂಭದಲ್ಲಿಯೇ ಕೆಲವೊಂದು ವಿಟಮಿನ್‌ ಗುಳಿಗೆಗಳನ್ನು ಸೇವಿಸಿ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿ.

ಕನ್ಯಾ:ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ಕೌಟುಂಬಿಕ ಜೀವನದ ಒತ್ತಡವನ್ನು ಮೀರುವುದಕ್ಕಾಗಿ, ಕುಟುಂಬದ ಹಿರಿಯರ ಜೊತೆಗೂಡಿ ನೀವು ಪ್ರಯತ್ನವನ್ನು ಮಾಡಬೇಕು. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಜೀವನದ ಒತ್ತಡದಿಂದ ಮೆಲ್ಲನೆ ಹೊರ ಬರಲಿದ್ದಾರೆ. ಅಲ್ಲದೆ ಪರಸ್ಪರ ಸಮನ್ವಯವನ್ನು ಸುಧಾರಿಸಲು ಯತ್ನಿಸಲಿದ್ದಾರೆ. ಜೀವನ ಸಂಗಾತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ. ಪ್ರೇಮ ಜೀವನವನ್ನು ಆನಂದಿಸಲು ಇದು ಸಕಾಲ. ನಿಮ್ಮ ಸಂತಸಕ್ಕೆ ನೀವೇ ಅಡ್ಡಿಯಾಗಬಹುದು. ಏಕೆಂದರೆ ಸರಿಯಾದ ದಿಸೆಯಲ್ಲಿ ನೀವು ಯೋಚಿಸದ ಕಾರಣ ನಿಮ್ಮ ಮನಸ್ಸಿನಲ್ಲಿ ಗೊಂದಲ ಕಾಣಿಸಿಕೊಳ್ಳಬಹುದು. ಇದು ನಿಮ್ಮ ಕೆಲವು ಪ್ರಮುಖ ಕೆಲಸದ ಮೇಲೆ ಪರಿಣಾಮ ಬೀರಬಹುದು. ವ್ಯವಹಾರದ ವಿಚಾರದಲ್ಲಿ ಇದು ಸಾಮಾನ್ಯ ಸಮಯವೆನಿಸಲಿದೆ. ಹೆಚ್ಚು ಪ್ರಯತ್ನ ಪಟ್ಟರೂ ಕಡಿಮೆ ಲಾಭಕ್ಕೆ ತೃಪ್ತಿಪಡಬೇಕಾದೀತು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಈಗ ಗೆಳೆಯರ ಸಹಾಯವನ್ನು ಪಡೆಯಬೇಕು. ಈ ಮೂಲಕ ಅವರು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಬಹುದು.

ತುಲಾ:ಈ ವಾರ ನಿಮಗೆ ಮಿಶ್ರ ಫಲಿತಾಂಶ ದೊರೆಯಲಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ. ಜೀವನ ಸಂಗಾತಿಯ ಜೊತೆಗಿನ ಆತ್ಮೀಯತೆಯು ಬೆಳೆಯಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ವಾರವೆನಿಸಲಿದೆ. ನೀವು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಈ ವಾರದಲ್ಲಿ ಪರಿಸ್ಥಿತಿಯಲ್ಲಿ ಏರುಪೇರು ಉಂಟಾಗಬಹುದು. ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರ ಪರಿಸ್ಥಿತಿಯು ಚೆನ್ನಾಗಿರಲಿದೆ. ಇದೇ ವೇಳೆ, ಕೆಲಸಕ್ಕೆ ಸಂಬಂಧಿಸಿದಂತೆ ನೀವು ದೂರದ ಊರಿಗೆ ಪ್ರಯಾಣಿಸಬೇಕಾದೀತು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಮಸ್ಯೆ ಎದುರಿಸಬಹುದು. ಹೀಗಾಗಿ ನೀವು ನಿಮ್ಮ ಅಧ್ಯಯನಕ್ಕೆ ಗಮನ ನೀಡಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಏರುಪೇರು ಉಂಟಾಗಬಹುದು. ವಾರದ ಕೊನೆಯ ಎರಡು ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ವೃಶ್ಚಿಕ:ನಿಮ್ಮ ಪಾಲಿಗೆ ಈ ವಾರವು ಸ್ವಲ್ಪ ದುರ್ಬಲ ಎನಿಸಲಿದೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ವಿವಾಹಿತ ವ್ಯಕ್ತಿಗಳು ತಮ್ಮ ವೈವಾಹಿಕ ಬದುಕನ್ನು ಆನಂದಿಸಲಿದ್ದಾರೆ. ಜೀವನ ಸಂಗಾತಿಯ ಜೊತೆಗೆ ಅನ್ಯೋನ್ಯತೆ ಮತ್ತು ಉತ್ತಮ ಬಾಂಧವ್ಯ ನೆಲೆಸಲಿದೆ. ಎಲ್ಲಾದರೂ ಒಟ್ಟಿಗೆ ಹೋಗುವ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಪ್ರೇಮದ ಸಂಬಂಧದಲ್ಲಿರುವವರ ಬದುಕಿನಲ್ಲಿ ಈ ವಾರದಲ್ಲಿ ಸಾಕಷ್ಟು ಏರುಪೇರು ಉಂಟಾಗಬಹುದು. ಯಾವುದೇ ಚಿಟ್‌ ಫಂಡ್‌ ನಲ್ಲಿ ಹಣದ ಹೂಡಿಕೆ ಮಾಡಬೇಡಿ. ಇಲ್ಲದಿದ್ದರೆ ನಿಮಗೆ ನಷ್ಟ ಉಂಟಾದೀತು. ಯಾರಿಗೂ ಹಣವನ್ನು ಸಾಲ ನೀಡಬೇಡಿ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ಹೊಸ ಕಾಮಗಾರಿಗಳು ನಿಮಗೆ ಲಭಿಸಲಿವೆ. ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ಕೆಲವೊಂದು ಹೊಸ ಜನರ ನೆರವಿನೊಂದಿಗೆ ನಿಮ್ಮ ಕೆಲಸವನ್ನು ನೀವು ಮುಂದಕ್ಕೆ ಕೊಂಡೊಯ್ಯಲಿದ್ದೀರಿ. ಇದರಿಂದಾಗಿ ನಿಮಗೆ ಲಾಭ ಉಂಟಾಗಲಿದೆ. ವ್ಯವಹಾರದಲ್ಲಿರುವ ಜನರು ಕೆಲವೊಂದು ಕೆಲಸದ ಕಾರಣ ದೀರ್ಘ ಪ್ರಯಾಣಕ್ಕೆ ಯೋಜನೆ ರೂಪಿಸಬಹುದು. ವಿದ್ಯಾರ್ಥಿಗಳ ಕುರಿತು ನಾವು ಮಾತನಾಡುವುದಾದರೆ, ಅಡೆತಡೆಗಳ ನಡುವೆಯೂ, ಪ್ರಮುಖ ವಿಷಯಗಳ ಮೇಲೆ ಹಿಡಿತ ಸಾಧಿಸುವ ಸಾಧ್ಯತೆ ಇದೆ.

ಧನು:ಈ ವಾರವನ್ನು ನೀವು ಸುಂದರವಾಗಿ ಕಳೆಯಲಿದ್ದೀರಿ. ವೈವಾಹಿಕ ಬದುಕು ಚೆನ್ನಾಗಿರಲಿದೆ. ಕೌಟುಂಬಿಕ ಜೀವನದಲ್ಲಿ ಸಂಗಾತಿಯ ಜೊತೆಗೆ ಒಂದಷ್ಟು ಅಂತರ ಉಂಟಾಗಬಹುದು. ಪ್ರೇಮ ಜೀವನಕ್ಕೆ ಸಮಯವು ಚೆನ್ನಾಗಿದೆ. ಆದರೆ ಪರಸ್ಪರರ ಮನಸ್ಸಿನಲ್ಲಿ ಒಂದಷ್ಟು ಸಂದೇಹಗಳು ಉಂಟಾಗಬಹುದು. ನಿಮ್ಮ ಕುಟುಂಬದ ಸದಸ್ಯರಿಗಾಗಿ ಏನನ್ನಾದರೂ ಮಾಡುವ ಇಚ್ಛೆ ನಿಮ್ಮ ಮನಸ್ಸಿನಲ್ಲಿ ಮೂಡಲಿದೆ. ರಿಯಲ್‌ ಎಸ್ಟೇಟ್‌ ಗೆ ಸಂಬಂಧಿಸಿದ ವಿಚಾರಗಳು ನಿಮ್ಮ ಗಮನವನ್ನು ಸೆಳೆಯಲಿವೆ. ಕೆಲಸದ ಪರಿಸ್ಥಿತಿಯು ಚೆನ್ನಾಗಿರಲಿದೆ. ಆದರೆ ಯಾವುದೇ ವ್ಯಕ್ತಿಯ ಕುರಿತು ಕೆಟ್ಟದಾಗಿ ಮಾತನಾಡಿದರೆ ನಿಮಗೆ ಹಾನಿಯುಂಟಾಗಬಹುದು. ಆದರೆ ಅದೃಷ್ಟವು ನಿಮ್ಮ ಜೊತೆಗಿದೆ. ಇದರಿಂದಾಗಿ ಕೆಲಸದಲ್ಲಿ ಭಡ್ತಿ ದೊರೆಯಲಿದೆ. ಕೆಲವೊಂದು ದೊಡ್ಡ ಡೀಲುಗಳು ನಿಮ್ಮ ಪಾಲಿಗೆ ದೊರೆಯಬಹುದು. ಇದು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಗಂಭೀರತೆ ತೋರಲಿದ್ದಾರೆ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ.

ಮಕರ:ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಕುಟುಂಬದಲ್ಲಿ ಸಂತಸ ಅನುಭವಿಸಲಿದ್ದೀರಿ. ಕೌಟುಂಬಿಕ ಜವಾಬ್ದಾರಿಯನ್ನು ಈಡೇರಿಸಲಿದ್ದೀರಿ. ನಿಮ್ಮ ತಾಯಿಯ ಆಶೀರ್ವಾದವನ್ನು ಪಡೆಯಲಿದ್ದೀರಿ. ಇದರಿಂದಾಗಿ ಕೆಲವೊಂದು ಪ್ರಮುಖ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮ ಕೌಟುಂಬಿಕ ವಾತಾವರಣವು ಚೆನ್ನಾಗಿರಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ಪ್ರೇಮ ವಿವಾಹದ ಸಾಧ್ಯತೆಯು ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಇದೇ ವೇಳೆ ವ್ಯಾಪಾರೋದ್ಯಮಿಗಳು ತಮ್ಮ ಕೆಲಸದಲ್ಲಿ ಪ್ರಯಾಣದ ಮೂಲಕ ಲಾಭ ಗಳಿಸಲಿದ್ದಾರೆ. ಕೆಲವೊಂದು ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ವ್ಯವಹಾರಕ್ಕೆ ನೆರವು ದೊರೆಯಲಿದೆ. ಸರ್ಕಾರಿ ವಲಯದಿಂದ ಯಾವುದಾದರೂ ನೋಟೀಸು ಬರಬಹುದು. ಮಕ್ಕಳ ಪಾಲಿಗೆ ಸಮಯವು ಶುಭಕರವಾಗಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ಸಂಪೂರ್ಣವಾಗಿ ಅಧ್ಯಯನಕ್ಕೆ ಗಮನ ನೀಡಲಿದ್ದೀರಿ. ಇದು ನಿಮಗೆ ಅನುಕೂಲಕರ ಫಲಿತಾಂಶವನ್ನು ನೀಡಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಸಮಯವು ನಿಮ್ಮ ಪಾಲಿಗೆ ಚೆನ್ನಾಗಿದೆ. ಆದರೆ ಹೊರಗಡೆ ಆಹಾರ ಸೇವಿಸಬೇಡಿ.

ಕುಂಭ:ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಅನುಭವಿಸಲಿದ್ದಾರೆ. ಜೀವನ ಸಂಗಾತಿಯ ಜೊತೆಗಿನ ನಿಮ್ಮ ಬಾಂಧವ್ಯವು ವೃದ್ಧಿಸಲಿದೆ. ಈ ನಿಟ್ಟಿನಲ್ಲಿ ನೀವು ನಿರಾಳತೆ ಅನುಭವಿಸಲಿದ್ದೀರಿ. ಈ ವಾರವು ಪ್ರೇಮ ಸಂಬಂಧದಲ್ಲಿ ಉತ್ತಮ ಫಲ ನೀಡಲಿದೆ. ವಾರದ ಆರಂಭದಲ್ಲಿ, ಗೆಳೆಯರು ಮತ್ತು ಕುಟುಂಬದ ಸದಸ್ಯರೊಂದಿಗೆ ನೀವು ಸಣ್ಣ ಮಟ್ಟಿನ ಪ್ರವಾಸವನ್ನು ಆಯೋಜಿಸಬಹುದು. ಅಲ್ಲದೆ ವಾಕ್‌ ಗೆ ಹೋಗಬಹುದು. ಇದರಿಂದಾಗಿ ನೀವು ತಾಜಾತನ ಹಾಗೂ ಹೊಸತನವನ್ನು ಆನುಭವಿಸಲಿದ್ದೀರಿ. ನಿಮ್ಮ ದೇಹಕ್ಕೆ ಚೈತನ್ಯವು ಲಭಿಸಲಿದೆ. ಉದ್ಯೋಗದಲ್ಲಿ ಸಾಕಷ್ಟು ಕಠಿಣ ಶ್ರಮ ಪಡಬೇಕಾದೀತು. ಕಠಿಣ ಶ್ರಮದಿಂದ ನೀವು ವಿಚಲಿತರಾಗದೆ ಇದ್ದರೆ ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮ ಹೂಡಿಕೆಯು ನಿಮಗೆ ಉತ್ತಮ ಲಾಭವನ್ನು ನೀಡಲಿದೆ. ನಿಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸುವುದಕ್ಕಾಗಿ ವಿಶೇಷ ವ್ಯಕ್ತಿಯೊಬ್ಬರು ಕೊಡುಗೆ ನೀಡಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅಧ್ಯಯನಕ್ಕೆ ಸಂಬಂಧಿಸಿದಂತೆ ಸರಿಯಾದ ಹಳಿಗೆ ಮರಳುವುದಕ್ಕಾಗಿ ಇವರಿಗೆ ಪೋಷಕರ ಅಗತ್ಯವಿದೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ.

ಮೀನ:ಈ ವಾರ ಒಟ್ಟಾರೆ ನಿಮಗೆ ಒಳ್ಳೆಯ ಫಲ ಲಭಿಸಲಿದೆ. ನಿಮ್ಮ ಕುಟುಂಬದಲ್ಲಿ ಸಂತಸ ಅನುಭವಿಸಲಿದ್ದೀರಿ. ಆಸ್ತಿಗೆ ಸಂಬಂಧಿಸಿದ ವಿವಾದ ಉಂಟಾಗುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲ ಸಂತಸ ನೆಲೆಸಲಿದೆ. ಸಂಬಂಧದಲ್ಲಿ ಸಾಕಷ್ಟು ಪ್ರೇಮ ಕಾಣಿಸಿಕೊಳ್ಳಲಿದೆ. ನಿಮ್ಮ ನಡುವಿನ ಅನ್ಯೋನ್ಯತೆಯು ಹೆಚ್ಚಲಿದೆ. ಪ್ರೇಮ ಸಂಬಂಧದಲ್ಲಿರುವವರು, ಪರಸ್ಪರ ಸಂವಹನದ ಮೂಲಕ ಪರಿಸ್ಥಿತಿಯನ್ನು ಸುಧಾರಿಸಬೇಕು. ಈ ವಾರದ ಆರಂಭದಲ್ಲಿ, ಯಾವುದೇ ಧಾರ್ಮಿಕ ಸ್ಥಳ ಅಥವಾ ಯಾವುದೇ ದೇವಸ್ಥಾನಕ್ಕೆ ಕೊಡುಗೆ ನೀಡಬಹುದು. ಇದು ನಿಮಗೆ ಸಂತೃಪ್ತಿ ನೀಡಲಿದೆ ಹಾಗೂ ನಿಮ್ಮ ಗೌರವವೂ ವೃದ್ಧಿಸಲಿದೆ. ವಾರದ ಆರಂಭದಲ್ಲಿ ನೀವು ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವ್ಯವಹಾರದಲ್ಲಿ ಹೊಸ ಫಲಿತಾಂಶ ದೊರೆಯಲಿದೆ. ಎದುರಾಳಿಗಳ ಮೇಲೆ ನೀವು ಯಶಸ್ಸನ್ನು ಪಡೆಯಲಿದ್ದೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ದೊರೆಯಬಹುದು. ವಿದ್ಯಾರ್ಥಿಗಳಿಗೆ ಇದು ಸಕಾಲ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸಂಪೂರ್ಣ ಸುಧಾರಣೆ ಕಾಣಿಸಿಕೊಳ್ಳಲಿದೆ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ಕೊನೆಯ ದಿನಗಳು ನಿಮಗೆ ಸೂಕ್ತ.

ABOUT THE AUTHOR

...view details