ಮೇಷ:ಈ ವಾರ ನಿಮಗೆ ಮಿಶ್ರ ಫಲ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ಸಮಸ್ಯೆಯನ್ನು ಎದುರಿಸುತ್ತಲೇ ಮುಂದೆ ಸಾಗಲಿದ್ದಾರೆ. ಯಾವುದೇ ದೊಡ್ಡ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ನೀವು ಸಾಕಷ್ಟು ಪ್ರಯತ್ನ ಮಾಡಬೇಕಾಗಬಹುದು. ಪರಸ್ಪರ ಯಾವುದೇ ಅಂತರ ಉಂಟಾಗದಂತೆ ನೋಡಿಕೊಳ್ಳಿ. ವಿಶೇಷ ವ್ಯಕ್ತಿಯ ಜೊತೆಗಿನ ಆಪ್ತತೆಯಲ್ಲಿ ವೃದ್ಧಿ ಉಂಟಾಗಲಿದೆ. ವಾರದ ಆರಂಭದಿಂದಲೇ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಇದು ನಿಮಗೆ ಸಂತಸ ನೀಡಲಿದೆ. ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ಇರಲಿದೆ. ನಿಮ್ಮ ಸುತ್ತಲಿನ ಜನರಿಗಾಗಿ ಏನಾದರೂ ಹೊಸತನ್ನು ಮಾಡಲು ನೀವು ಇಷ್ಟ ಪಡಲಿದ್ದೀರಿ. ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ, ಆರಂಭದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಆದರೂ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮಗೆ ಲಾಭ ಉಂಟಾಗಲಿದೆ. ಏನಾದರೂ ವಿಷಯದ ಕುರಿತು ನಿಮ್ಮನ್ನು ದೂರುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಇದು ನಿಮಗೆ ಸಂತಸ ನೀಡಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ.
ವೃಷಭ:ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವೈವಾಹಿಕ ಬದುಕು ಸಹ ಚೆನ್ನಾಗಿರಲಿದೆ. ಇನ್ನೊಂದೆಡೆ, ಪ್ರೇಮ ಸಂಬಂಧದಲ್ಲಿರುವವರಿಗೆ ಈ ಸಮಯವು ದುರ್ಬಲವಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ಇಲ್ಲದಿದ್ದರೆ ಅವರ ಜೊತೆಗೆ ನೀವು ಜಗಳವಾಡಬೇಕಾದೀತು. ಆದರೂ ನಿಮ್ಮ ಖರ್ಚುವೆಚ್ಚಗಳು ಸದ್ಯಕ್ಕೆ ಮುಂದುವರಿಯಬಹುದು. ಹೀಗಾಗಿ ನಿಮ್ಮ ಚಿಂತೆ ಹೆಚ್ಚಾಗಬಹುದು. ನಿಮ್ಮ ಆದಾಯದಲ್ಲಿ ಇಳಿಕೆ ಉಂಟಾಗಲಿದೆ. ಇದರಿಂದ ನಿಮ್ಮ ಚಿಂತೆ ಹೆಚ್ಚಾಗಲಿದೆ. ಹೀಗಾಗಿ ಸಾಕಷ್ಟು ಯೋಚಿಸಿ ಮುಂದೆ ಸಾಗಿರಿ. ಈ ಸಂದರ್ಭದಲ್ಲಿ ಯಾವುದೇ ಹೊಸ ಸಾಲವನ್ನು ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ಸಮಸ್ಯೆ ಉಂಟಾದೀತು. ಉದ್ಯೋಗದಲ್ಲಿರುವವರ ಕುರಿತು ಮಾತನಾಡುವುದಾದರೆ, ಕೆಲಸದ ಕುರಿತು ಅವರು ದೃಢ ಸ್ಥಾನದಲ್ಲಿರಲಿದ್ದಾರೆ. ನಿಮ್ಮ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಲಿದೆ. ವ್ಯವಹಾರದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಇದು ನಿಮಗೆ ಮುಂದೆ ಸಾಗಲು ನೆರವಾಗಲಿದೆ. ಕೆಲವು ಹೊಸ ಸಂಪರ್ಕಗಳಿಂದ ನಿಮಗೆ ಲಾಭ ದೊರೆಯಲಿದೆ. ದೂರದ ಪ್ರದೇಶವನ್ನು ಸಂಪರ್ಕಿಸಿ ಕೆಲಸ ಮಾಡುವುದರಿಂದ ಒಳ್ಳೆಯ ಪ್ರಯೋಜನ ಉಂಟಾಗಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರ ಏಕಾಗ್ರತೆಯಲ್ಲಿ ಕೊರತೆ ಕಂಡು ಬರಲಿದೆ.
ಮಿಥುನ:ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಪ್ರಗತಿ ಸಾಧಿಸುವ ಕುರಿತು ಯೋಚಿಸಲಿದ್ದಾರೆ. ಅಲ್ಲದೆ ಮಕ್ಕಳನ್ನು ಪಡೆಯುವ ಇಚ್ಛೆ ಉಂಟಾಗಬಹುದು. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಇದರ ಹೊರತಾಗಿಯೂ ಸಂಬಂಧವು ಪ್ರೇಮದೊಂದಿಗೆ ಮುಂದುವರಿಯಲಿದೆ. ವಾರದ ಆರಂಭದಲ್ಲಿ ನಿಮ್ಮ ಗೆಳೆಯರೊಂದಿಗೆ ನೀವು ವಾಕ್ ಗೆ ಹೋಗಬಹುದು. ಅಲ್ಲದೆ ನಿಮ್ಮ ನೆರೆಹೊರೆಯವರ ಜೊತೆಗೆ ನೀವು ಉತ್ತಮ ಸಂಬಂಧವನ್ನು ಆನಂದಿಸಲಿದ್ದೀರಿ. ಮನೆಯ ಎಳೆಯ ಸಹೋದ್ಯೋಗಿಗಳಿಂದ ನಿಮಗೆ ಉತ್ತಮ ನೆರವು ದೊರೆಯಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲಿದೆ. ಸದ್ಯಕ್ಕೆ ನಿಮಗೆ ಸ್ವಲ್ಪ ಖರ್ಚುವೆಚ್ಚ ಉಂಟಾಗಬಹುದು. ಆದರೆ ಅವು ನಿಮಗೆ ಯಾವುದೇ ಚಿಂತೆಯನ್ನು ಉಂಟು ಮಾಡುವುದಿಲ್ಲ. ನಿಮ್ಮ ಉದ್ಯೋಗದಲ್ಲಿ ಕೆಲ ಜನರ ಕುರಿತು ನೀವು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅವರು ನಿಮ್ಮ ಹಿರಿಯ ಆಡಳಿತ ಮಂಡಳಿಗೆ ಸೇರಿರಬಹುದು. ಯಾರೊಂದಿಗೂ ಕೋಪದಿಂದ ಮಾತನಾಡಬೇಡಿ. ಅಲ್ಲದೆ ವಿಷಯವನ್ನು ಚೆನ್ನಾಗಿ ಅರಿತುಕೊಂಡ ನಂತರವೇ ಮುಂದೆ ಸಾಗಿರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಅತ್ಯಂತ ಪ್ರಮುಖವಾದುದು. ನಿಮ್ಮ ಕೆಲಸದಲ್ಲಿ ನೀವು ಬೇಗನೆ ಪ್ರಗತಿ ಸಾಧಿಸಲಿದ್ದೀರಿ.
ಕರ್ಕಾಟಕ:ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಮುಂದೆ ಸಾಗಲಿದ್ದಾರೆ ಹಾಗೂ ಜೀವನ ಸಂಗಾತಿಯ ಕುಟುಂಬದ ಸದಸ್ಯರೊಂದಿಗೆ ತಮ್ಮ ಸಹಯೋಗವನ್ನು ವೃದ್ಧಿಸಲು ಯತ್ನಿಸಲಿದ್ದಾರೆ. ಪ್ರೇಮ ಜೀವನಕ್ಕೆ ಈ ಸಮಯವು ಒಳ್ಳೆಯದು. ಆದರೆ ಮನಸ್ಸಿನಲ್ಲಿ ಸ್ವಲ್ಪ ಕೋಪ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಯಾವುದೇ ಕಾರಣವಿಲ್ಲದೆ ಅವರು ನಿಮ್ಮ ಜೊತೆಗೆ ಜಗಳವಾಡಬಹುದು. ಇದು ನಿಮ್ಮ ಪ್ರೇಮಿಗೆ ಒಂದಷ್ಟು ಸಮಸ್ಯೆಯನ್ನುಂಟು ಮಾಡಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಲಿದ್ದಾರೆ. ಇದು ನಿಮ್ಮನ್ನು ಪರೀಕ್ಷೆಗೆ ಒಡ್ಡುವ ಕಾಲವಾಗಿದೆ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಯಶಸ್ಸನ್ನು ಪಡೆಯಲಿದ್ದಾರೆ. ಪ್ರಯಾಣವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ಇದು ನಿಮ್ಮ ವ್ಯವಹಾರದಲ್ಲಿ ಶೀಘ್ರ ಪ್ರಗತಿಯ ಅವಕಾಶವನ್ನು ಕಲ್ಪಿಸಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ, ವಾರದ ಆರಂಭದಿಂದಲೇ ನೀವು ಒತ್ತಡಕ್ಕೆ ಒಳಗಾಗಬಹುದು. ಹೀಗಾಗಿ ಯಾವುದೇ ಸಮಸ್ಯೆಯು ನಿಮ್ಮ ಮೇಲೆ ಪ್ರಭಾವ ಬೀರದಂತೆ ಸಂಪೂರ್ಣ ಗಮನ ನೀಡಿರಿ.
ಸಿಂಹ:ಈ ವಾರ ನಿಮ್ಮ ಪಾಲಿಗೆ ಹೊಸ ಆರಂಭ ಎನಿಸಲಿದೆ. ಆದರೆ ನಿಮ್ಮ ಕೌಟುಂಬಿಕ ಬದುಕಿನಲ್ಲಿ ಒತ್ತಡವು ಹೆಚ್ಚಲಿದೆ. ಜೀವನ ಸಂಗಾತಿಯ ಜೊತೆಗೆ ಅಭಿಪ್ರಾಯಭೇದ ಉಂಟಾಗಬಹುದು. ಆದರೂ ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಬಂಧದಲ್ಲಿ ನೀವು ಮುಂದೆ ಸಾಗಲಿದ್ದೀರಿ ಹಾಗೂ ಪ್ರೇಮ ವಿವಾಹಕ್ಕಾಗಿ ಮನವೊಲಿಸಲಿದ್ದೀರಿ. ವ್ಯವಹಾರದಲ್ಲಿ ಹೊಸ ವ್ಯಕ್ತಿಯನ್ನು ಭೇಟಿಯಾಗುವ ಮೂಲಕ ಏನಾದರೂ ಹೊಸ ಕೆಲಸವನ್ನು ಮಾಡಲು ನಿಮಗೆ ಅವಕಾಶ ದೊರೆಯಲಿದೆ. ಇದು ಭವಿಷ್ಯದಲ್ಲಿ ಏನಾದರೂ ಹೊಸತನ್ನು ತರಲಿದೆ. ನೀವು ಪಾಲುದಾರಿಕೆಯಲ್ಲಿ ವ್ಯವಹಾರವನ್ನು ನಡೆಸುತ್ತಿದ್ದರೆ, ನಿಮ್ಮ ಪಾಲುದಾರರ ಜೊತೆಗೆ ವಿಪರೀತ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಇದು ನಿಮ್ಮ ವ್ಯವಹಾರವನ್ನು ಹಾಳು ಮಾಡಬಹುದು. ಹೀಗಾಗಿ ಸಾಕಷ್ಟು ಎಚ್ಚರಿಕೆಯಿಂದ ಇರಿ. ಆದಾಯದ ದೃಷ್ಟಿಯಿಂದ ಈ ವಾರವು ಒಳ್ಳೆಯದು. ಆದರೆ ಖರ್ಚುವೆಚ್ಚಗಳಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಬಹುದು. ಇದನ್ನು ಗಮನದಲ್ಲಿಡಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸಾಕಷ್ಟು ಧನಾತ್ಮಕ ಮನೋಭಾವವನ್ನು ತೋರಲಿದ್ದಾರೆ. ಇದರಿಂದಾಗಿ ಅವರಿಗೆ ಲಾಭ ಉಂಟಾಗಲಿದೆ. ಆದರೆ ಯಾರಾದರೂ ವ್ಯಕ್ತಿಗಳು ನಿಮ್ಮ ವಿರುದ್ಧ ಷಡ್ಯಂತ್ರ ಹೂಡುವ ಸಾಧ್ಯತೆ ಇದೆ. ಇದರಿಂದಾಗಿ ನಿಮಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.
ಕನ್ಯಾ:ಈ ವಾರವು ನಿಮಗೆ ಮಿಶ್ರ ಫಲ ನೀಡಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸ್ವಲ್ಪ ಒತ್ತಡ ಎದುರಿಸಲಿದ್ದಾರೆ. ಅತ್ತೆ ಮಾವಂದಿರ ಸಂಬಂಧದಲ್ಲಿ ಏರುಪೇರು ಉಂಟಾಗಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ಅನುಕೂಲಕರವಾಗಿಲ್ಲ. ಅನಗತ್ಯ ಜಗಳದ ಕಾರಣ ಇಬ್ಬರೂ ಸಹ ಕೋಪಗೊಳ್ಳಬಹುದು. ಹೀಗಾಗಿ ತಾಳ್ಮೆಯಿಂದ ಮಾತನಾಡಿ. ಪರಿಸ್ಥಿತಿಯು ತಿಳಿಗೊಳ್ಳಲಿದೆ. ನೀವು ಕೆಲಸ ಮಾಡುವಲ್ಲಿ ಗೆಳೆಯರನ್ನು ಸಂಪಾದಿಸಲು ಅವಕಾಶ ದೊರೆಯಲಿದೆ. ನಿಮ್ಮ ಬಾಸ್ ಜೊತೆಗೆ ಅನಗತ್ಯವಾಗಿ ಜಗಳವಾಡಬೇಡಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳಿಗೆ ಫಲ ದೊರೆಯಲಿದೆ. ಆದರೆ ಕಾನೂನಿನ ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಳ್ಳಬೇಡಿ. ಇಲ್ಲದಿದ್ದರೆ ಪರಿಸ್ಥಿತಿಯು ಹದಗೆಡಬಹುದು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಲಿದ್ದಾರೆ. ಇದರಿಂದ ಅವರಿಗೆ ಲಾಭ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು.