ಮೇಷ :ಈ ವಾರವು ಮನೆಯಲ್ಲಿ ಸಂತಸ ಮತ್ತು ಸಂಭ್ರಮವನ್ನು ತರಲಿದೆ. ಸಭೆ ಸಮಾರಂಭ ನಡೆಯಲಿದ್ದು ಅನೇಕ ಜನರು ಬರಲಿದ್ದಾರೆ. ಈ ಮೂಲಕ ನಿಮ್ಮ ಮನೆಯಲ್ಲಿ ಚಟುವಟಿಕೆಗಳು ನಡೆಯಲಿವೆ. ಹೊಸ ಖಾದ್ಯಗಳನ್ನು ಸೇವಿಸುವ ಅವಕಾಶ ನಿಮಗೆ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ಸಮಸ್ಯೆಗಳು ಕಡಿಮೆಯಾಗಲಿವೆ. ಅವರೊಂದಿಗೆ ಉತ್ತಮ ಬಾಂಧವ್ಯ ನೆಲೆಸಲಿದೆ. ಇದರಿಂದಾಗಿ ನಿಮ್ಮ ವೈವಾಹಿಕ ಬದುಕಿನಲ್ಲಿ ಸುಧಾರಣೆ ಉಂಟಾಗಲಿದೆ. ಪ್ರೇಮ ವ್ಯವಹಾರದ ಕುರಿತು ಮಾತನಾಡುವುದಾದರೆ, ಮುಂದೆ ಸಾಗಲು ಹಾಗೂ ನಿಮ್ಮ ಪ್ರೇಮಿಯೊಂದಿಗೆ ನಿಮ್ಮ ಮಾತುಗಳನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ದೊರೆಯಲಿದೆ. ಈ ಅವಕಾಶ ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ನಿಮ್ಮ ಖರ್ಚುವೆಚ್ಚವೂ ನಿಯಂತ್ರಣದಲ್ಲಿ ಇರಲಿದೆ. ಇದು ನಿಮಗೆ ಸಾಕಷ್ಟು ನಿರಾಳತೆಯನ್ನು ನೀಡಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಕೋರ್ಸ್ ಮೇಲೆ ಇನ್ನಷ್ಟು ಏಕಾಗ್ರತೆ ತೋರಿಸಲು ನಿಮಗೆ ಸಾಧ್ಯವಾಗಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸಂಪೂರ್ಣ ಸುಧಾರಣೆ ಕಾಣಿಸಿಕೊಳ್ಳಲಿದೆ.
ವೃಷಭ :ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಮನಸ್ಸು ಹಗುರಗೊಳ್ಳಲಿದ್ದು, ನಿಮ್ಮ ವೈಯಕ್ತಿಕ ಸಂಬಂಧವು ಸುಂದರಗೊಳ್ಳಲಿದೆ. ನಿಮ್ಮ ವೈವಾಹಿಕ ಬದುಕು ಸುಂದರಗೊಳ್ಳಲಿದೆ. ಪ್ರಣಯದ ಮೂಲಕ ನಿಮ್ಮ ಜೀವನ ಸಂಗಾತಿಯ ಹೃದಯವನ್ನು ಮುಟ್ಟಲಿದ್ದೀರಿ. ನೀವು ಪ್ರೇಮ ಸಂಬಂಧದಲ್ಲಿದ್ದರೆ, ನಿಮ್ಮ ಪ್ರೇಮಿಯ ಬೆಂಬಲವನ್ನು ನೀವು ಪಡೆಯಲಿದ್ದೀರಿ. ಅವರೊಂದಿಗಿನ ನಿಮ್ಮ ಆಪ್ತತೆಯು ಹೆಚ್ಚಲಿದೆ. ಪರಸ್ಪರ ಒಳ್ಳೆಯ ಉಡುಗೊರೆಯನ್ನು ನೀಡಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ದೃಢತೆ ತೋರಲಿದ್ದೀರಿ. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ಆದರೆ ಕೆಲವೊಂದು ಜನರ ಜೊತೆಗೆ ವಾಗ್ವಾದ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಯಾವುದೇ ಹೊಸ ಯೋಜನೆಯ ಲಾಭ ಪಡೆಯಲಿದ್ದಾರೆ. ಮಹಿಳೆಯರ ಮೂಲಕ ನಿಮ್ಮ ಕೆಲಸದಲ್ಲಿ ಪ್ರಯೋಜನವನ್ನು ಪಡೆಯುವ ಉತ್ತಮ ಸಾಧ್ಯತೆ ಇದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅಧ್ಯಯನಕ್ಕಾಗಿ ಈ ವಾರವು ಒಳ್ಳೆಯದು.
ಮಿಥುನ :ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ವೈವಾಹಿಕ ಬದುಕು ಸದೃಢವಾಗಿರಲಿದೆ. ಗುರುವಿನ ಅನುಗ್ರಹದಿಂದ ವೈವಾಹಿಕ ಬದುಕನ್ನು ಕಾಡುತ್ತಿದ್ದ ಒತ್ತಡವು ಕಡಿಮೆಯಾಗಲಿದೆ. ಪರಸ್ಪರ ಅನ್ಯೋನ್ಯತೆಯ ಹೆಚ್ಚಳದೊಂದಿಗೆ, ನಿಮ್ಮ ಸಂಬಂಧವು ಚೆನ್ನಾಗಿರಲಿದೆ. ಇದರಿಂದಾಗಿ ಮನೆಯ ವಾತಾವರಣವು ಚೆನ್ನಾಗಿರಲಿದೆ. ಕೌಟುಂಬಿಕ ಜೀವನವು ಸಂತಸ ಮತ್ತು ಶಾಂತಿಯಿಂದ ಕೂಡಿರಲಿದೆ. ಆಸ್ತಿಯ ಮಾರಾಟದಿಂದ ಲಾಭ ದೊರೆಯಲಿದೆ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಈಗ ನೀವು ನಿಮ್ಮ ಪ್ರೇಮಿಗೆ ಮದುವೆಯ ಪ್ರಸ್ತಾವನೆಯನ್ನು ಮಾಡಬಹುದು. ನಿಮ್ಮ ಸಂತಸಕ್ಕಾಗಿ ನೀವು ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಆತ್ಮವಿಶ್ವಾಸದಲ್ಲೂ ವೃದ್ಧಿ ಉಂಟಾಗಲಿದೆ. ಹೀಗಾಗಿ ಏನಾದರೂ ಹೊಸ ಕೆಲಸವನ್ನು ಪ್ರಾರಂಭಿಸಲು ನಿಮಗೆ ಅವಕಾಶ ದೊರೆಯಲಿದೆ. ಈ ಸಮಯವು ವ್ಯವಹಾರದ ವಿಚಾರದಲ್ಲಿ ಚೆನ್ನಾಗಿರಲಿದೆ. ನಿಮಗೆ ಗ್ರಹಗಳ ಸಂಪೂರ್ಣ ಸಹಕಾರ ದೊರೆಯಲಿದ್ದು, ನಿಮ್ಮ ವ್ಯವಹಾರವು ಬೆಳೆಯಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಬೇಕು.
ಕರ್ಕಾಟಕ :ಈ ವಾರದ ಆರಂಭದಲ್ಲಿ ಸ್ವಚ್ಛಂದ ಹಕ್ಕಿಯಂತೆ ಬಾನಂಗಳದಲ್ಲಿ ಹಾರಾಡಲು ನೀವು ಇಷ್ಟ ಪಡಲಿದ್ದೀರಿ ಹಾಗೂ ನಿಮ್ಮ ಸೃಜನಶೀಲತೆಯ ಮೂಲಕ ಜನರ ಮನಸ್ಸನ್ನು ಗೆಲ್ಲಲಿದ್ದೀರಿ. ನಿಮ್ಮಲ್ಲಿ ಯಾವುದೇ ಪ್ರತಿಭೆ ಇದ್ದಲ್ಲಿ ಈ ಪ್ರತಿಭೆಯನ್ನು ಪ್ರದರ್ಶಿಸಲು ನಿಮಗೆ ಅವಕಾಶ ದೊರೆಯಲಿದೆ ಹಾಗೂ ಜನರ ಕಣ್ಣೆದುರು ಇದು ಅನಾವರಣಗೊಳ್ಳಲಿದೆ. ನೀವು ಜನಪ್ರಿಯತೆಯನ್ನು ಗಳಿಸಲಿದ್ದೀರಿ. ಪ್ರೇಮ ಜೀವನದ ವಿಚಾರದಲ್ಲಿ ಈ ವಾರವು ಒಳ್ಳೆಯದು. ನಿಮ್ಮ ಸಂಬಂಧದಲ್ಲಿ ಪ್ರಣಯವನ್ನು ವ್ಯಕ್ತಪಡಿಸುವ ಮೂಲಕ ನಿಮ್ಮ ಪ್ರೇಮಿಯ ಮನದಲ್ಲಿ ಗುರುತನ್ನು ರೂಪಿಸಲಿದ್ದೀರಿ. ವೈವಾಹಿಕ ಜೀವನ ಸಾಗಿಸುವ ಜನರು ತಮ್ಮ ಕೌಟುಂಬಿಕ ಜೀವನದಲ್ಲಿ ಸಂತಸ ತರಲು ಎಲ್ಲಾ ಪ್ರಯತ್ನವನ್ನು ಮಾಡಲಿದ್ದಾರೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಕಠಿಣ ಶ್ರಮ ಪಡಲಿದ್ದಾರೆ. ವ್ಯಾಪಾರದಲ್ಲಿ ಹೂಡಿಕೆ ಮಾಡುವುದು ನಿಮ್ಮ ಪಾಲಿಗೆ ಪ್ರಯೋಜನಕಾರಿ ಎನಿಸಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನೀವು ಕೆಲವು ಹೊಸ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಅವರಿಂದ ನಿಮಗೆ ಕಲಿಯಲು ಸಾಕಷ್ಟು ಅವಕಾಶ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಸಾಕಷ್ಟು ಉತ್ಸಾಹ ಮತ್ತು ಚೈತನ್ಯ ಕಂಡು ಬರಲಿದೆ. ಅದು ನಿಮ್ಮನ್ನು ಚುರುಕುಗೊಳಿಸಲಿದೆ.
ಸಿಂಹ :ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಕೌಟುಂಬಿಕ ಬದುಕಿಗೆ ಈ ವಾರವು ತುಂಬಾ ಅನುಕೂಲಕರ. ಸದ್ಯಕ್ಕೆ ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ಸಾಕಷ್ಟು ಉತ್ಸಾಹ ಮತ್ತು ಶ್ರದ್ಧೆಯಿಂದ ಬೆಂಬಲಿಸಲಿದ್ದಾರೆ. ನಿಮ್ಮ ಪ್ರೇಮ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯದ ಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲಸದ ಸ್ಥಳದಲ್ಲಿ ನೀವು ಸಂಪೂರ್ಣ ಗಮನ ನೀಡಲಿದ್ದೀರಿ. ಇದರಿಂದಾಗಿ ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಲು ನಿಮಗೆ ಸಾಧ್ಯವಾಗಲಿದೆ. ನೀವು ಸ್ನೇಹಿತೆಯರೊಂದಿಗೆ ಚೆನ್ನಾಗಿ ವರ್ತಿಸಲಿದ್ದು, ಇದರಿಂದ ನಿಮಗೆ ಪ್ರಯೋಜನ ಉಂಟಾಗಲಿದೆ. ಉದ್ಯೋಗಿಗಳು ತಮ್ಮ ಕೆಲಸ ಹಾಗೂ ಉಪವೃತ್ತಿಗೆ ಗಮನ ನೀಡಲಿದ್ದಾರೆ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಸಮಯವು ನಿಮಗೆ ಅನುಕೂಲಕರವಾಗಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಿರಿ ಹಾಗೂ ನಿಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯಿರಿ. ಹೂಡಿಕೆಯು ಪ್ರಯೋಜನಕಾರಿ ಎನಿಸಲಿದೆ. ನಿಂತು ಹೋದ ಕೆಲಸವು ಪೂರ್ಣಗೊಳ್ಳಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಕ್ರಿಯರಾಗಲಿದ್ದಾರೆ. ಏನಾದರೂ ಹೊಸತನ್ನು ಕಲಿಯಲು ಅವರು ಆಸಕ್ತಿ ತೋರಲಿದ್ದಾರೆ. ಈ ವಿಚಾರದಲ್ಲಿ ಅವರು ಯಾವುದಾದರೂ ಮಾಹಿತಿಯ ನೆರವು ಪಡೆಯಲಿದ್ದಾರೆ. ಆರೋಗ್ಯದ ಕುರಿತು ಹೇಳುವುದಾದರೆ, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮನ್ನು ಸದ್ಯಕ್ಕೆ ಕಾಡದು.
ಕನ್ಯಾ :ಈ ವಾರ ನಿಮಗೆ ಸಾಕಷ್ಟು ಸಮಸ್ಯೆಯಿಂದ ಕೂಡಿರಲಿದೆ. ನಿಮಗೆ ಕೆಲವೊಂದು ಹೊಸ ಸಮಸ್ಯೆಗಳನ್ನು ಎದುರಾಗಬಹುದು. ಇದು ಕೌಟುಂಬಿಕ ಬದುಕು ಆಗಿರಲಿ ಅಥವಾ ಆರೋಗ್ಯವಾಗಿರಲಿ, ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ವಿವಾಹಿತ ವ್ಯಕ್ತಿಗಳಿಗೆ ತಮ್ಮ ಕೌಟುಂಬಿಕ ಬದುಕಿನಲ್ಲಿ ತಮ್ಮ ಜೀವನ ಸಂಗಾತಿಯ ಆರೋಗ್ಯವು ಚಿಂತೆಗೆ ಕಾರಣವಾಗಬಹುದು. ಅವರಿಗಾಗಿ ನೀವು ಕಷ್ಟ ಪಡಬಹುದು. ನಿಮ್ಮ ಅತ್ತೆ - ಮಾವಂದಿರ ಜೊತೆಗಿನ ಸಂಬಂಧವು ಹದಗೆಡಬಹುದು. ಈ ವೇಳೆ ನ್ಯಾಯಾಲಯದ ಪ್ರಕಕರಣಗಳು ನಿಮ್ಮ ಗಮನ ಸೆಳೆಯಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ಆರೋಗ್ಯ ಹದಗೆಡುವ ಕಾರಣ ಪರಿಸ್ಥಿತಿಯು ಕೈಮೀರಿ ಹೋಗಬಹುದು. ಉದ್ಯೋಗದಲ್ಲಿರುವವರ ಕೆಲಸವು ಅರ್ಧದಲ್ಲಿಯೇ ಬಾಕಿ ಉಳಿಯಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಒಂದಷ್ಟು ನಿರಾಸೆಯನ್ನು ಅನುಭವಿಸಬಹುದು. ಯಾವುದೇ ದೈಹಿಕ ಸಮಸ್ಯೆಗಳಿದ್ದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಮಾಡಿಸಿಕೊಳ್ಳಿ. ವಾರದ ಆರಂಭವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ಯಾವುದಾದರೂ ಸುಂದರ ಸ್ಥಳಕ್ಕೆ ನೀವು ಪ್ರವಾಸಕ್ಕೆ ಹೋಗಬಹುದು.