ಮೇಷ: ಈ ವಾರ ನಿಮಗೆ ಮಾನಸಿಕ ಒತ್ತಡದಿಂದ ನೆಮ್ಮದಿ ದೊರೆಯಲಿದೆ. ವಾರದ ಆರಂಭದ ದಿನಗಳಲ್ಲಿ ನಿಮಗೆ ಅಷ್ಟೊಂದು ಒಳ್ಳೆಯ ಫಲ ದೊರೆಯದೆ ಇರಬಹುದು ಹಾಗೂ ನೀವು ಗೊಂದಲಕ್ಕೆ ಈಡಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಪಾಲಿಗೆ ಕಷ್ಟದ ಕೆಲಸವೆನಿಸಲಿದೆ. ಆದರೆ ತಾಳ್ಮೆಯಿಂದ ಇರಬೇಕು. ನಿಮ್ಮ ಪ್ರೇಮ ಜೀವನದಲ್ಲಿ ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕಾದರೆ ನೀವು ನಿಮ್ಮ ಪ್ರೇಮ ಸಂಗಾತಿಯನ್ನು ಭೇಟಿ ಮಾಡದೇ ಇದ್ದರೆ ಒಳ್ಳೆಯದು. ಏಕೆಂದರೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ. ತಪ್ಪು ಗ್ರಹಿಕೆಗಳು ನಿಮ್ಮ ವೈವಾಹಿಕ ಬದುಕಿನಲ್ಲಿ ಸಮಸ್ಯೆಗಳನ್ನು ಸೃಷ್ಠಿಸಬಹುದು. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ಸಾಕಷ್ಟು ಸಂಪತ್ತನ್ನು ಗಳಿಸಲಿದ್ದಾರೆ. ನೀವು ಉದ್ಯೋಗದಲ್ಲಿದ್ದರೆ ನಿಮಗೆ ಈ ವಾರದಲ್ಲಿ ವರ್ಗಾವಣೆಯಾಗುವ ಸಾಧ್ಯತೆ ಇದೆ. ವಾರದ ಮಧ್ಯಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ದೀರ್ಘ ಪ್ರಯಾಣವು ನಿಮಗೆ ಒಂದಷ್ಟು ಒಳ್ಳೆಯ ಫಲಿತಾಂಶಗಳನ್ನು ತರಬಹುದು.
ವೃಷಭ:ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಯಾವುದಾದರೂ ವಿಚಾರದಲ್ಲಿ ನಿಮಗೆ ಚಿಂತೆ ಕಾಡಬಹುದು. ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಹೆಚ್ಚಿನ ಗಮನ ನೀಡಿ ಮತ್ತು ಅನಾರೋಗ್ಯಕಾರಿ ವಸ್ತುಗಳನ್ನು ಸೇವಿಸಬೇಡಿ. ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಿ. ಅಲ್ಲದೆ ನೀವು ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಲಿದ್ದೀರಿ. ನಿಮ್ಮ ಪ್ರೀತಿಯ ಬದುಕಿನಲ್ಲಿ ಸವಾಲಿನ ಕ್ಷಣಗಳು ಎದುರಾಗಬಹುದಾಗಿದ್ದು ಎಚ್ಚರಿಕೆಯಿಂದ ಇರಿ. ವಿವಾಹಿತ ಜೋಡಿಗಳ ವಿಚಾರದಲ್ಲಿ ಹೇಳುವುದಾದರೆ, ಕೆಲವು ಬೆಳವಣಿಗೆಗಳು ನಿಮ್ಮ ಮನೋಸ್ಥೈರ್ಯವನ್ನು ವೃದ್ಧಿಸಲಿವೆ. ನಿಮ್ಮ ಬಾಳ ಸಂಗಾತಿಯು ನಿಮಗೆ ಮುಂದೆ ಹೋಗಲು ಹಾಗೂ ನಿಮ್ಮ ಹಣಕಾಸು ಸ್ಥಿತಿಯನ್ನು ಸುಧಾರಿಸಲು ಉತ್ತೇಜಿಸಲಿದ್ದಾರೆ. ಇದೇ ವೇಳೆ ನೀವು ಸಾಕಷ್ಟು ಖರ್ಚುವೆಚ್ಚ ಮಾಡಲಿದ್ದೀರಿ. ಉದ್ಯೋಗಾಕಾಂಕ್ಷಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವ್ಯಾಪಾರೋದ್ಯಮಿಗಳು ತಮ್ಮ ಗುರಿ ಸಾಧಿಸುವಲ್ಲಿ ಯಶಸ್ಸು ಗಳಿಸಲಿದ್ದಾರೆ. ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ವಾರವು ಒಳ್ಳೆಯದು.
ಮಿಥುನ:ಈ ವಾರ ಒಟ್ಟಾರೆ ನಿಮಗೆ ಒಳ್ಳೆಯದು. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದ್ದು, ಇದು ನಿಮ್ಮ ಚಿಂತೆಗೆ ಕಾರಣವಾಗಲಿದೆ. ನೀವು ಏನು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ ಎನ್ನುವ ಕುರಿತು ಎಚ್ಚರಿಕೆ ವಹಿಸಿ. ಏಕೆಂದರೆ ಇದು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ನೀವು ನಿಮ್ಮ ಕುಟುಂಬದ ಜವಾಬ್ದಾರಿಯನ್ನು ಪೂರೈಸಬೇಕು. ಇದೇ ವೇಳೆ ನಿಮ್ಮ ವೃತ್ತಿಪರ ಕೆಲಸಕ್ಕೂ ನೀವು ನ್ಯಾಯ ಒದಗಿಸಬೇಕು. ವ್ಯಾಪಾರಿಗಳ ವಿಚಾರದಲ್ಲಿ ಹೇಳುವುದಾದರೆ ಇವರಿಗೆ ಈ ಸಮಯವು ತುಂಬಾ ಕಠಿಣಕರವಾಗಿದೆ. ಏಕೆಂದರೆ ತಮ್ಮ ಹೂಡಿಕೆಯ ಮೇಲೆ ಇವರು ಸರಿಯಾದ ಲಾಭವನ್ನು ಪಡೆಯದೆ ಇರಬಹುದು. ಯಾವುದೇ ಹೊಸ ವ್ಯಾಪಾರಕ್ಕೆ ಸಹಿ ಹಾಕುವ ಮೊದಲು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಮತ್ತು ಅವುಗಳಲ್ಲಿ ಯಾವುದೇ ದೋಷಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರಣಯ ಪಕ್ಷಿಗಳಿಗೆ ಇದು ಸಾಧಾರಣ ಕಾಲ. ನಿಮ್ಮ ಸಂಬಂಧದಲ್ಲಿ ಮುಂದುವರೆಯಲು ನೀವು ಒಂದಷ್ಟು ಪ್ರಯತ್ನ ಮಾಡಬೇಕಾದೀತು. ವಿವಾಹಿತ ಜೋಡಿಗಳ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಸಮಸ್ಯೆಗಳು ಒಂದಷ್ಟು ಮಟ್ಟಿಗೆ ನಿವಾರಣೆಯಾಗಲಿದ್ದು ನಿಮ್ಮ ಪರಸ್ಪರ ಹೊಂದಾಣಿಕೆಯು ಉತ್ತಮಗೊಳ್ಳಲಿದೆ. ಈ ವಾರವು ಪ್ರವಾಸಕ್ಕೆ ಹೋಗಲು ಅಷ್ಟೊಂದು ಹಿತಕರವಲ್ಲ.
ಕರ್ಕಾಟಕ:ವಾರದ ಪ್ರಾರಂಭದಲ್ಲಿ, ನಿಮ್ಮ ಸಂಬಂಧಕ್ಕೆ ನೀವು ಹೆಚ್ಚಿನ ಪ್ರಾಮುಖ್ಯತೆ ನೀಡಲಿದ್ದೀರಿ. ನಿಮ್ಮ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಕಾಲ ಕಳೆದಂತೆ ಪ್ರೇಮದ ಕುರಿತು ನೀವು ಭ್ರಮನಿರಸನಗೊಳ್ಳುವ ಸಾಧ್ಯತೆ ಇದೆ. ವಾರದ ಕೊನೆಯ ಹಂತವು ನಿಮ್ಮ ಪಾಲಿಗೆ ಕಠಿಣ ಸಮಯವೆನಿಸಲಿದೆ. ಏಕೆಂದರೆ ನಿಮ್ಮ ಶಕ್ತಿಯ ಮಟ್ಟದಲ್ಲಿ ಇಳಿಕೆ ಉಂಟಾಗಲಿದೆ ಹಾಗೂ ನಿಮ್ಮ ಆರೋಗ್ಯದ ಕುರಿತು ನಿಮಗೆ ಚಿಂತೆ ಉಂಟಾಗಬಹುದು. ಇದೇ ವೇಳೆ ನಿಮ್ಮ ಆಕ್ರಮಣಕಾರಿ ವರ್ತನೆಯ ಕಾರಣ ಕಾರ್ಯಸ್ಥಳದಲ್ಲಿ ಕಲಹಗಳು ಉಂಟಾಗಬಹುದು. ಈ ಅವಧಿಯಲ್ಲಿ ನಿಮಗೆ ಯಾವುದೇ ಹೊಸ ಅವಕಾಶಗಳು ದೊರೆಯದೆ ಇರಬಹುದು. ವಾರದ ಕೊನೆಗೆ ನಿಮ್ಮ ಹಣಕಾಸಿನ ಸ್ಥಿತಿ ಹದಗೆಡಬಹುದು. ಹಣಕಾಸಿನ ವಹಿವಾಟುಗಳ ವಿಚಾರಗಳಲ್ಲಿ ನೀವು ಜಾಗರೂಕರಾಗಿರಬೇಕು ಹಾಗೂ ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕಲಹ ಉಂಟಾಗುವುದನ್ನು ತಪ್ಪಿಸಲು ನೀವು ತಾಳ್ಮೆಯಿಂದ ವರ್ತಿಸಬೇಕು.
ಸಿಂಹ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸದ ಕಡೆಗೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ. ಹೀಗಾಗಿ ನೀವು ಸಣ್ಣ ತಪ್ಪುಗಳನ್ನು ಸಹ ಸರಿಪಡಿಸಲಿದ್ದು, ಇದು ನಿಮ್ಮ ಕೆಲಸಕ್ಕೆ ಇನ್ನಷ್ಟು ನಾಜೂಕುತನ ನೀಡಲಿದೆ. ನಿಮ್ಮ ಬಾಸ್ ಮತ್ತು ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಹೊಗಳಲಿದ್ದಾರೆ. ವ್ಯಾಪಾರೋದ್ಯಮದಲ್ಲಿರುವವರು ಸಮಸ್ಯೆ ಎದುರಿಸಲಿದ್ದಾರೆ. ನಿಮ್ಮ ವ್ಯಾಪಾರದಲ್ಲಿ ಒಂದಷ್ಟು ನಷ್ಟ ಉಂಟಾಗಬಹುದು. ನಿಮ್ಮ ಕುಟುಂಬದ ವಾತಾವರಣವು ಒಟ್ಟಾರೆಯಾಗಿ ಚೆನ್ನಾಗಿರಲಿದೆ. ವಾರದ ಮಧ್ಯ ಭಾಗವು ನಿಮ್ಮ ಪ್ರೇಮದ ಬದುಕಿಗೆ ಒಳ್ಳೆಯದು. ಏಕೆಂದರೆ ಈ ಸಂದರ್ಭದಲ್ಲಿ ನಿಮ್ಮ ಪ್ರೇಮವನ್ನು ನಿಮ್ಮ ಪ್ರೇಮ ಸಂಗಾತಿಗೆ ನಿವೇದಿಸಲು ಅವಕಾಶ ದೊರೆಯಲಿದ್ದು, ಇದು ನಿಮ್ಮ ಬಂಧವನ್ನು ಗಟ್ಟಿಗೊಳಿಸಲಿದೆ. ವಿವಾಹಿತ ವ್ಯಕ್ತಿಗಳು ಸಹ ವಾರದ ಮಧ್ಯ ಭಾಗದಲ್ಲಿ ಬದುಕನ್ನು ಆನಂದಿಸಲಿದ್ದಾರೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ ಹಾಗೂ ನೀವು ಕೆಲಸವನ್ನು ದಕ್ಷತೆಯಿಂದ ನಿರ್ವಹಿಸಲಿದ್ದೀರಿ.
ಕನ್ಯಾ:ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಅಲ್ಲದೆ ನೀವು ಅನಗತ್ಯವಾಗಿ ಪ್ರಯಾಣಿಸಲಿದ್ದು ಇದು ನಿಮ್ಮನ್ನು ಬಾಧಿಸಲಿದೆ. ವಾರದ ಮಧ್ಯಭಾಗದ ಸುಮಾರಿಗೆ ನೀವು ನಿಮ್ಮ ವೈಯಕ್ತಿಕ ಬದುಕಿಗೆ ಹೆಚ್ಚು ಗಮನ ನೀಡಲಿದ್ದು ಇದನ್ನು ಸುಧಾರಿಸಲು ಯತ್ನಿಸುತ್ತೀರಿ. ವಾರಾಂತ್ಯದ ವೇಳೆ ನೀವು ನಿಮ್ಮ ಕುಟುಂಬದ ಸದಸ್ಯರ ಕುರಿತು ಸಾಕಷ್ಟು ಕಾಳಜಿ ವಹಿಸಲಿದ್ದೀರಿ. ಉದ್ಯೋಗದಲ್ಲಿರುವವರು ಈ ಸಮಯವನ್ನು ಆನಂದಿಸಲಿದ್ದಾರೆ. ವ್ಯಾಪಾರೋದ್ಯಮಿಗಳು ಸಹ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ವಾರವು ಪ್ರೇಮಿಗಳ ಪಾಲಿಗೆ ಅತ್ಯುತ್ತಮ. ನೀವು ನಿಮ್ಮ ಪ್ರೇಮ ಸಂಗಾತಿಯ ಹೃದಯವನ್ನು ಗೆಲ್ಲಲಿದ್ದೀರಿ. ನೀವು ಒಳ್ಳೆಯ ಹೊಸ ಸಂಗಾತಿಯನ್ನು ಪಡೆಯಬಹುದು. ವೈವಾಹಿಕ ಜೋಡಿಗಳ ಬದುಕಿನಲ್ಲೂ ಸಂತಸವಿರಲಿದೆ. ಆದರೆ ಅವರ ನಡುವೆ ಒಂದಷ್ಟು ಕಲಹ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಿ.