ಮೇಷ: ಈ ವಾರ ನೀವು ಸಾಧಾರಣ ಫಲವನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳಲಿದ್ದೀರಿ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಸಾಕಷ್ಟು ಪ್ರಯತ್ನದ ನಂತರ ಯಶಸ್ಸು ಪಡೆಯಲಿದ್ದೀರಿ. ಆದರೂ, ನೀವು ಇತರರ ಕುರಿತು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆದಾಯವನ್ನು ವೃದ್ಧಿಸಲು ಮಾಡುವ ಪ್ರಯತ್ನದಲ್ಲಿ ಯಶಸ್ಸು ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳು ಸಹ ದೊಡ್ಡ ಲಾಭ ಮಾಡಲಿದ್ದಾರೆ. ಹೊಸ ವಾಹನ ಅಥವಾ ಯಾವುದಾದರೂ ಆಸ್ತಿ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಕೌಟುಂಬಿಕ ಜೀವನವು ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಒತ್ತಡ ಕಡಿಮೆಯಾಗಲಿದೆ. ನೀವು ಯಾವುದಾದರೂ ಒಂದು ಪ್ರವಾಸಿ ತಾಣಕ್ಕೆ ಹೋಗಲಿದ್ದೀರಿ.
ವೃಷಭ: ಇದು ನಿಮ್ಮ ಪಾಲಿಗೆ ಉತ್ತಮ ವಾರ. ವಾರದ ಪ್ರಾರಂಭದಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು. ನಿಮ್ಮ ಕುಟುಂಬದ ಸದಸ್ಯರನ್ನು ವಿಹಾರಕ್ಕೆ ಕರೆದುಕೊಂಡು ಹೋಗುವುದರಿಂದ ನಿಮಗೆ ಸಾಕಷ್ಟು ಸಂತಸ ದೊರೆಯಲಿದೆ. ಕುಟುಂಬದ ಸದಸ್ಯರ ನಡುವೆ ಸಾಕಷ್ಟು ಅನ್ಯೋನ್ಯತೆ ಇರಲಿದೆ. ಸಂಬಂಧಿಕರು ಮತ್ತು ಕುಟುಂಬದ ಸದಸ್ಯರ ಜೊತೆಗಿನ ನಿಮ್ಮ ಬಂಧವು ಚೆನ್ನಾಗಿರಲಿದೆ. ವ್ಯಾಪಾರದಲ್ಲಿ ಮತ್ತು ನಿಮ್ಮ ಬದುಕಿನ ಇತರೆ ವಿಚಾರಗಳಲ್ಲಿ ನೀವು ಉತ್ತಮ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಗೆಳೆಯರು ನಿಮ್ಮ ನೆರವಿಗೆ ಬರಲಿದ್ದಾರೆ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಉತ್ತಮವಾಗಿ ಆನಂದಿಸಲಿದ್ದಾರೆ. ನೀವು ಸರ್ಕಾರಿ ಯೋಜನೆಯಿಂದ ಲಾಭ ಪಡೆಯಲಿದ್ದು, ನಿಮ್ಮ ಆರ್ಥಿಕ ಸ್ಥಿತಿಗತಿ ಸುಧಾರಿಸಲಿದೆ. ನಿಮ್ಮ ಖರ್ಚು ವೆಚ್ಚಗಳು ನಿಯಂತ್ರಣದಲ್ಲಿರಲಿದ್ದು, ಒತ್ತಡದಿಂದ ದೂರವಿರಲಿದ್ದೀರಿ. ಹೀಗಾಗಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಮಿಥುನ: ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ವಾರದ ಆರಂಭವು ಒಂದಷ್ಟು ಸವಾಲು ಭರಿತವಾಗಿದೆ. ಈ ಹಂತದಲ್ಲಿ ನೀವು ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಯಶಸ್ಸನ್ನು ಸಾಧಿಸಲು ನೀವು ಕಠಿಣ ಶ್ರಮ ಪಡಬೇಕು. ಉದ್ಯೋಗದಲ್ಲಿರುವವರು ಆಲಸ್ಯಕ್ಕೆ ಜಾರಿದರೆ ದುಬಾರಿ ಬೆಲೆ ತೆರಬೇಕಾದೀತು. ವ್ಯಾಪಾರೋದ್ಯಮದಲ್ಲಿ ತೊಡಗಿರುವವರಿಗೆ ಇದು ಸಕಾಲ. ನಿಮ್ಮ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಬಳಸಿ ನೀವು ಮುಂದೆ ಸಾಗಲಿದ್ದೀರಿ. ಮನೆಯ ವಾತಾವರಣವು ಸಂತಸದಾಯಕ ಮತ್ತು ಶಾಂತಿಯುತವಾಗಿರಲಿದೆ. ನೀವು ನಿಮ್ಮ ಮನೆಯಲ್ಲಿ ಏನಾದರೂ ಒಂದು ಕಾರ್ಯಕ್ರಮವನ್ನು ಆಯೋಜಿಸಲಿದ್ದೀರಿ. ಪ್ರೇಮಿಗಳು ತಮ್ಮ ಪ್ರೇಮ ಸಂಗಾತಿಯನ್ನು ಕುಟುಂಬದ ಸದಸ್ಯರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಇದು ನಿಮ್ಮನ್ನು ಸಂತಸಗೊಳಿಸಲಿದೆ. ವಿವಾಹಿತ ಜೋಡಿಗಳ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯ ವೃದ್ಧಿಸಲಿದೆ. ನಿಮ್ಮ ಬದುಕಿನ ಜವಾಬ್ದಾರಿಗಳು ಮತ್ತು ಬದ್ಧತೆಗಳನ್ನು ನೀವು ಪೂರ್ಣಗೊಳಿಸಬೇಕು ಎಂದು ನಿಮ್ಮ ಆತ್ಮವು ಹೇಳುತ್ತದೆ. ನಿಮ್ಮ ಆದಾಯವು ಚೆನ್ನಾಗಿರಲಿದೆ. ಆದರೆ ಅದೇ ಪ್ರಮಾಣದಲ್ಲಿ ವೆಚ್ಚವೂ ಹೆಚ್ಚಲಿದೆ. ವಾರದ ಮಧ್ಯ ಭಾಗ ಪ್ರಯಾಣಿಸಲು ಅನುಕೂಲಕರ.
ಕರ್ಕಾಟಕ: ವಾರದ ಆರಂಭದಲ್ಲಿ ಗ್ರಹ ಗತಿಗಳು ನಿಮ್ಮ ಪರವಾಗಿ ಇರುವಂತೆ ಕಾಣುತ್ತದೆ. ಈ ಹಂತದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ. ವೃತ್ತಿಯ ವಿಚಾರದಲ್ಲಿ ನೀವು ಪ್ರಗತಿಯನ್ನು ಸಾಧಿಸಲಿದ್ದೀರಿ. ವಾರದ ಪ್ರಾರಂಭದಲ್ಲಿ ಪ್ರೇಮ ಮತ್ತು ಮದುವೆಗೆ ಸಂಬಂಧಿಸಿದಂತೆ ನೀವು ಸಮಸ್ಯೆಯನ್ನು ಎದುರಿಸಲಿದ್ದೀರಿ. ಆದರೂ, ವಾರದ ಮಧ್ಯ ಭಾಗ ಮತ್ತು ಕೊನೆಯ ಹಂತದಲ್ಲಿ ಪರಿಸ್ಥಿತಿಯು ಮೆಲ್ಲನೆ ಸುಧಾರಿಸುತ್ತದೆ. ಈ ಹಂತದಲ್ಲಿ ನಿಮ್ಮ ಸಂಬಂಧದಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳಲು, ನೀವು ಹೆಚ್ಚಿನ ಪ್ರಯತ್ನವನ್ನು ಮಾಡುವ ಅಗತ್ಯವಿದೆ. ಆರೋಗ್ಯದ ವಿಚಾರದಲ್ಲಿ ವಾರದ ಮೊದಲ ಭಾಗದಲ್ಲಿ ನಿಮಗೆ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ನಿಮಗೆ ಈಗಾಗಲೇ ಆರೋಗ್ಯದ ಸಮಸ್ಯೆಗಳು ಇದ್ದಲ್ಲಿ, ಅವು ಮರುಕಳಿಸಿ ನಿಮಗೆ ಸಮಸ್ಯೆಯೊಡ್ಡಬಹುದು. ವ್ಯಾಪಾರೋದ್ಯಮಿಗಳ ವಿಚಾರದಲ್ಲಿ ಹೇಳುವುದಾದರೆ, ನೀವು ವಾರದ ಮಧ್ಯ ಭಾಗದಲ್ಲಿ ಸಮಸ್ಯೆಯನ್ನು ಎದುರಿಸಬಹುದು. ಇದು ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳ ಕುರಿತಾಗಿರಬಹುದು. ವ್ಯವಹಾರಕ್ಕೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಪರಿಹರಿಸಲು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು.
ಸಿಂಹ: ಈ ವಾರವು ನಿಮಗೆ ಸಾಧಾರಣ ಯಶಸ್ಸನ್ನು ತರಲಿದೆ. ವಾರದ ಪ್ರಾರಂಭದಲ್ಲಿ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾದೀತು. ಇದರಿಂದ ನಿಮ್ಮ ಕಿಸೆ ಖಾಲಿಯಾಗಬಹುದು. ಆದಾಯವು ನಿಮ್ಮ ವೆಚ್ಚಕ್ಕಿಂತ ಕಡಿಮೆ ಇರಲಿದೆ. ಹೀಗಾಗಿ ನಿಮ್ಮ ಹಣಕಾಸನ್ನು ಸರಿಯಾಗಿ ನಿಭಾಯಿಸಿ. ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಆದರೆ ಕಾಲ ಕಳೆದಂತೆ ಎಲ್ಲವೂ ಸರಿಯಾಗುತ್ತದೆ. ಪ್ರೀತಿ ಮತ್ತು ಆಕರ್ಷಣೆಯ ಭಾವನೆಗಳು ನಿಮ್ಮಿಂದ ಹೊರಹೊಮ್ಮಲಿವೆ. ಇದು ನಿಮ್ಮ ವೈವಾಹಿಕ ಜೀವನಕ್ಕೆ ಮೆರುಗು ನೀಡಲಿದೆ. ಪ್ರೇಮಿಗಳಿಗೂ ಇದು ಸಕಾಲ. ನಿಮ್ಮ ಪ್ರಣಯ ಸಂಗಾತಿಯು ನಿಮ್ಮ ಜೊತೆ ಕಾಲ ಕಳೆಯಲು ಅವಕಾಶಕ್ಕಾಗಿ ಎದುರು ನೋಡಲಿದ್ದಾರೆ. ಇದು ನಿಮ್ಮ ಸಂಬಂಧವು ಸುಗಮವಾಗಿ ಮುಂದುವರಿಯುವಂತೆ ಮಾಡಲಿದೆ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ವಾರ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಬೇಕು. ವ್ಯಾಪಾರೋದ್ಯಮಿಗಳು ಸಹನಶೀಲರಾಗಿರಬೇಕು. ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಲಿರುವ ಕಾರಣ ನೀವು ಹೊಸ ನೀತಿಗಳನ್ನು ಜಾರಿಗೊಳಿಸುವ ಅಗತ್ಯವಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ.
ಕನ್ಯಾ: ನಿಮ್ಮ ಪಾಲಿಗೆ ಅತ್ಯುತ್ತಮ ವಾರವಿದು. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ನಿಮ್ಮಲ್ಲಿ ಹೊಸ ಚೈತನ್ಯ ತುಂಬಲಿದ್ದು, ಇದು ನಿಮ್ಮ ಸುತ್ತಲಿನ ಜನರನ್ನು ಆಕರ್ಷಿಸಲಿದೆ. ನಿಮ್ಮ ವೈವಾಹಿಕ ಬದುಕಿನಲ್ಲಿ ಸಾಕಷ್ಟು ಪ್ರಣಯ ಇರಲಿದ್ದು, ಒಂಟಿ ತನ ದೂರ ಸಾಗಲಿದೆ. ಪ್ರಣಯ ಹಕ್ಕಿಗಳ ಪಾಲಿಗೆ ಇದು ಒಂದಷ್ಟು ಕಠಿಣಕರ ವಾರ. ನೀವು ಸಮಸ್ಯೆಗಳನ್ನು ಎದುರಿಸಬಹುದು. ಉದ್ಯೋಗದಲ್ಲಿರುವವರು ಸಾಕಷ್ಟು ಕಠಿಣ ಶ್ರಮ ಪಡಬೇಕು. ಈ ಕಾರಣಕ್ಕಾಗಿ ನೀವು ಪ್ರಯಾಣ ಬೆಳೆಸಬೇಕಾದೀತು. ನಿಮ್ಮ ಖರ್ಚು ವೆಚ್ಚಗಳು ಹೆಚ್ಚಲಿವೆ. ನೀವು ನಿಮ್ಮ ವೆಚ್ಚವನ್ನು ತಗ್ಗಿಸಲು ಪ್ರಯತ್ನಿಸಬೇಕು. ವ್ಯವಹಾರದಲ್ಲಿ ನೀವು ಲಾಭ ಮಾಡಲಿದ್ದೀರಿ. ನಿಮ್ಮ ಕೌಟುಂಬಿಕ ಬದುಕಿನ ಕುರಿತು ನಿಮಗೆ ಸಂತಸ ಉಂಟಾಗಲಿದೆ. ಕುಟುಂಬದಲ್ಲಿ ಹಿರಿಯರ ಆರೋಗ್ಯದಲ್ಲಿ ಕುಸಿತ ಉಂಟಾಗಲಿದ್ದು, ಇದು ನಿಮ್ಮ ಆತಂಕಕ್ಕೆ ಕಾರಣವಾಗಲಿದೆ.