ಕರ್ನಾಟಕ

karnataka

ETV Bharat / bharat

ಶುಕ್ರವಾರದ ಭವಿಷ್ಯ: ಇಂದು ಮಿಥುನ ರಾಶಿಯವರಿಗೆ ಭಾರಿ ಯಶಸ್ಸು, ನಿಮ್ಮ ದಿನ ಹೇಗಿರಲಿದೆ? - Etv bharat kannada

ಇಂದಿನ ರಾಶಿ ಭವಿಷ್ಯ ಹೀಗಿದೆ..

Etv bharat horoscope today
ಶುಕ್ರವಾರದ ರಾಶಿ ಭವಿಷ್ಯ

By

Published : Feb 3, 2023, 5:00 AM IST

ಮೇಷ : ಇಂದು ನೀವು ಸೂಕ್ಷ್ಮ ಕುಸುರಿ ಮತ್ತು ಸೌಂದರ್ಯಕ್ಕೆ ಗಮನ ನೀಡುತ್ತೀರಿ. ನೀವು ನಿಮ್ಮ ಸುತ್ತಲಿನ ಅಂತಹ ಸುಂದರ ವಸ್ತುಗಳ ಕುರಿತಾದ ಹೊಸ ಉದ್ಯಮ ಪ್ರಾರಂಭಿಸಲೂ ಬಯಸುತ್ತೀರಿ. ಆದರೆ, ನಿರ್ಧಾರ ಕೈಗೊಳ್ಳುವುದು ಕಷ್ಟದ ಕೆಲಸ. ಆಯ್ಕೆಗಳನ್ನು ಆವಿಷ್ಕರಿಸಿ ಮತ್ತು ಮುಕ್ತ ಮನಸ್ಸಿನಲ್ಲಿರಿ.

ವೃಷಭ :ಇಂದು ನಿಮ್ಮೊಂದಿಗೆ ಕೊಂಚ ಗುಣಮಟ್ಟದ ಸಮಯ ಕಳೆಯಲು ಅತ್ಯಂತ ಸೂಕ್ತವಾದ ದಿನವಾಗಿದೆ. ಹಿಂದೆಂದೂ ಇಲ್ಲದಂತೆ ನಿರಾಳವಾಗಿ ಮತ್ತು ನವೋತ್ಸಾಹ ತುಂಬಿಕೊಳ್ಳಿರಿ. ಈ ದಿನದಲ್ಲಿ ನಿಮ್ಮ ಮಿತ್ರರು ಹಾಗೂ ಕುಟುಂಬದೊಂದಿಗೆ ಭೋಜನ ಕೂಟ ಹಾಗೂ ಮನರಂಜನೆ ಪಡೆಯುವ ಸಾಧ್ಯತೆ ಇದೆ. ನೀವು ಅತ್ಯಂತ ಖಾರ, ಸವಿಯಾದ ಮತ್ತು ಸ್ವಾದಿಷ್ಟ ತಿನಿಸನ್ನು ಬಯಸುತ್ತೀರಿ. ಎಷ್ಟು ಸಾಧ್ಯವೋ ಅಷ್ಟು ನಿಮ್ಮನ್ನು ನೀವು ತಣಿಸಿಕೊಳ್ಳಿ.

ಮಿಥುನ: ಇಂದು ನೀವು ಸಂಪೂರ್ಣ ಚೈತನ್ಯ ಮತ್ತು ಅತ್ಯಂತ ಉತ್ಸಾಹದಲ್ಲಿರುತ್ತೀರಿ. ನೀವು ವಿಷಯಗಳನ್ನು ಸಕಾರಾತ್ಮಕತೆ ಬೆಳಕಲ್ಲಿ ನೋಡುತ್ತೀರಿ. ಅದು ನಿಮ್ಮನ್ನು ಯಶಸ್ಸಿನತ್ತ ನಡೆಯಲು ನೆರವಾಗುತ್ತದೆ. ನೀವು ಸಂಪೂರ್ಣ ಮುಕ್ತವಾಗಿ ಕಾರ್ಯ ನಿರ್ವಹಿಸಲು ಶಕ್ತರಾಗುತ್ತೀರಿ. ಆದ್ದರಿಂದ ನಿಮಗೆ ಇಷ್ಟವಾಗುವ ವಿಷಯಗಳನ್ನು ತೆಗೆದುಕೊಳ್ಳುತ್ತೀರಿ. ನಿಮಗೆ ಅತ್ಯಂತ ಒತ್ತಡವಿರಬಹುದು. ಆದರೆ, ಅದು ಶಾಂತಿಯುತ ಮತ್ತು ಪುರಸ್ಕಾರಯುತ ಫಲಿತಾಂಶಗಳನ್ನು ನೀಡುತ್ತದೆ.

ಕರ್ಕಾಟಕ: ನಿಮ್ಮ ಕುಟುಂಬ ನೆರವಿನ ಹಸ್ತ ಚಾಚದೇ ಇರಬಹುದು. ಆದ್ದರಿಂದ, ನಿಮ್ಮ ಪ್ರಯತ್ನಗಳು ವಿಫಲವಾಗುತ್ತವೆ. ನಿಮ್ಮ ಮಕ್ಕಳು ಕೂಡಾ ನಿಮ್ಮನ್ನು ನಿರುತ್ಸಾಹಗೊಳಿಸುತ್ತಾರೆ. ನೀವು ನಿಮ್ಮ ಕುಟುಂಬದ ನಡುವೆ ಭಿನ್ನಾಭಿಪ್ರಾಯ ಎದುರಿಸಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ ಮತ್ತು ನಿಮ್ಮ ಸನ್ನಿವೇಶಗಳನ್ನು ಘನತೆ ಮತ್ತು ಸಮಚಿತ್ತತೆಯಿಂದ ಎದುರಿಸಿ.

ಸಿಂಹ :ಇಂದು ನಿಮ್ಮ ಆತ್ಮವಿಶ್ವಾಸ ಅತ್ಯಂತ ಹೆಚ್ಚಾಗಿದೆ. ನೀವು ಕೆಲಸದಲ್ಲಿ ಬಹಳ ಮಹತ್ವದ ನಿರ್ಧಾರಗಳನ್ನು ದೃಢವಾಗಿ ತೆಗೆದುಕೊಳ್ಳುತ್ತೀರಿ. ಇಂದು ಕೆಲಸ ಸುಸೂತ್ರವಾಗುವುದನ್ನು ಕಾಣುತ್ತೀರಿ ಮತ್ತು ಯಶಸ್ಸ ನಿಮ್ಮನ್ನು ಅನುಸರಿಸುತ್ತದೆ.

ಕನ್ಯಾ:ವೈಯಕ್ತಿಕ ವ್ಯವಹಾರಗಳು ವೃತ್ತಿಪರತೆಯನ್ನು ಮಸುಕಾಗಿಸುತ್ತವೆ. ಇಂದು ನೇರವಾಗಿ ನಿಮ್ಮ ಸಮಸ್ಯೆಗಳನ್ನು ಎದುರಿಸುವ ಮೂಲಕ ಅವುಗಳನ್ನು ದೂರ ತಳ್ಳಿರಿ. ಭಾವನಾತ್ಮಕವಾಗಿ ಮುಖ್ಯವಾಗಿ ಸಂಜೆಯ ವೇಳೆ ಸಿಲುಕಿಕೊಳ್ಳಬೇಡಿ.

ತುಲಾ :ನಿಮ್ಮಲ್ಲಿರುವ ಒಳಗಿನ ಕಲಾವಿದ ಇಂದು ಮೇಲೆ ಬರುತ್ತಾನೆ ಮತ್ತು ನೀವು ನಿಮ್ಮ ಕಲ್ಪಾಶಕ್ತಿಯನ್ನೂ ಪ್ರದರ್ಶಿಸುತ್ತೀರಿ. ನೀವು ನಿಮ್ಮ ಆಸಕ್ತಿಯ ವಿಷಯಗಳತ್ತ ಗಮನ ನೀಡಲು ಸಾಧ್ಯವಾಗುತ್ತದೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಕೊಂಡವರು ಮತ್ತಷ್ಟು ಮುಂದೆ ಸಾಗುತ್ತಾರೆ. ನೀವು ಇಂದು ಅನುಕೂಲಕರ ಕಾನೂನು ವ್ಯವಹಾರಗಳನ್ನು ಸಹಿ ಹಾಕುವ ಸಾಧ್ಯತೆ ಇದೆ. ಈ ದಿನ ನಿಮಗೆ ಅತ್ಯಂತ ಉತ್ತಮ ಮತ್ತು ಯಶಸ್ವಿ ದಿನವಾಗಿರುತ್ತದೆ.

ವೃಶ್ಚಿಕ: ಇಂದು ಕೆಲಸ ಅತಿಯಾಗಿರುತ್ತದೆ. ನೀವು ಇಂದು ಅತಿಯಾದ ಕಾರ್ಯದೊತ್ತಡ ಮತ್ತು ಜವಾಬ್ದಾರಿಗಳ ನಡುವೆ ಸಿಲುಕಿಕೊಳ್ಳುತ್ತೀರಿ. ಸಂಜೆ ನಿಮಗೆ ಹಗುರ ಹಾಗೂ ಶಾಂತಯುತವಾಗಿರಬಹುದು. ಮಿತ್ರರೊಂದಿಗೆ ಕಳೆದ ಕಾಲ ನವೋತ್ಸಾಹ ನೀಡುತ್ತದೆ.

ಧನು: ಈ ದಿನ ನಿಮಗೆ ಅತ್ಯಂತ ವಿವಾದಾತ್ಮಕ ಮತ್ತು ವದಂತಿಗಳ ದಿನವಾಗಿ ಬದಲಾಗಲಿದೆ. ನಿಮ್ಮ ಮೇಲೆ ತಮ್ಮ ಅಭಿಪ್ರಾಯಗಳನ್ನು ನೀಡಲು ಪ್ರಯತ್ನಿಸುವವರ ಜೊತೆಯಲ್ಲಿ ಆತ್ಮೀಯವಾಗಿರುವುದನ್ನು ಬಿಡಿ. ತಾಳ್ಮೆಯಿಂದ ಆಲಿಸಿದರೆ ಮತ್ತು ಅವರ ಅಭಿಪ್ರಾಯಗಳಿಗೆ ಅವಕಾಶ ನೀಡಿದರೆ ವಿವಾದಗಳು ಇತ್ಯರ್ಥವಾಗಬಹುದು.

ಮಕರ:ನಿಮ್ಮ ದಿನಚರಿ ಅತ್ಯಂತ ಒತ್ತಡದಲ್ಲಿದೆ ಮತ್ತು ನೀವು ದಿನದ ಅಂತ್ಯಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬರಿದಾಗುತ್ತೀರಿ. ಹೊರಗಡೆ ಸ್ಪರ್ಧಾತ್ಮಕ ಜಗತ್ತು ಇದೆ. ಆದ್ದರಿಂದ ಅತ್ಯಂತ ಜಾಗರೂಕತೆ ವಹಿಸಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಕಾಲೆಳೆಯಲು ಒಂದು ಸಣ್ಣ ಅವಕಾಶ ದೊರೆತರೂ ಸಾಕು ಎಂದು ಕಾಯುತ್ತಿದ್ದಾರೆ. ಜಾಣ್ಮೆಯಿಂದಿರಿ ಮತ್ತು ನಿಮ್ಮನ್ನು ಕೆಳಕ್ಕೆಳೆಯಲು ಪ್ರಯತ್ನಿಸಿದವರಿಗೆ ಎಲ್ಲವನ್ನೂ ಹಿಂದಿರುಗಿಸಿ ನೀಡಿ.

ಕುಂಭ: ಶೈಕ್ಷಣಿಕ ವಿಷಯಕ್ಕೆ ಬಂದರೆ ನಿವು ಅಸಾಧಾರಣ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಡೈನಮೈಟ್ ನಂತೆ ಕಾರ್ಯ ನಿರ್ವಹಿಸುತ್ತೀರಿ ಮತ್ತು ನಿಮ್ಮ ಸುತ್ತಲಿನ ಬಹುತೇಕರನ್ನು ಪ್ರೇರೇಪಿಸುತ್ತೀರಿ. ನಿಮ್ಮ ಇಮೇಜ್ ಕುರಿತು ಎಚ್ಚರವಾಗಿರಿ. ಅತಿಯಾದ ಮಹತ್ವಾಕಾಂಕ್ಷೆಗೆ ಬೀಳಬೇಡಿ. ಜನರ ಕುರಿತಾಗಿ ನಮ್ರ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಿ.

ಮೀನ: ದಣಿವಿರದೆ ಹಾಗೂ ಅತ್ಯಂತ ಕಠಿಣ ಪರಿಶ್ರಮಪಡುವವರಿಗೆ ಇದು ಅತ್ಯುತ್ತಮ ದಿನವಾಗಿದೆ. ಇಂದು ನಿಮ್ಮ ಕೆಲಸದಲ್ಲಿ ಆವಿಷ್ಕಾರ ಮತ್ತು ಸೃಜನಶೀಲತೆಯನ್ನು ತರುತ್ತೀರಿ. ದೇವರ ಆಶೀರ್ವಾದ ಯಶಸ್ಸಿಗೆ ದಾರಿಯಾಗುತ್ತದೆ. ಆದ್ದರಿಂದ ಶ್ರಮವಹಿಸಿ ಕೆಲಸ ಮಾಡಿ ಮತ್ತು ವೈಫಲ್ಯಗಳಿಂದ ಕಂಗೆಡಬೇಡಿರಿ.

ABOUT THE AUTHOR

...view details