ಕುಪ್ವಾರ(ಜಮ್ಮು ಮತ್ತು ಕಾಶ್ಮೀರ) :ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಸಿದ್ಪೋರಾದಲ್ಲಿ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ಒಳನುಸುಳುವಿಕೆ ಯತ್ನ ವಿದೇಶಿ ಉಗ್ರರನ್ನು ಕೊಂದಿರುವುದಾಗಿ ತಿಳಿಸಿದ್ದಾರೆ. ಭದ್ರತಾ ಪಡೆಗಳು ಸ್ಥಳದಲ್ಲಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಕುಪ್ವಾರ ಎನ್ಕೌಂಟರ್ನಲ್ಲಿ ಒಬ್ಬ ಉಗ್ರಗಾಮಿ ಹತ್ಯೆ ಕಾಶ್ಮೀರ ಪೊಲೀಸ್ ವಲಯದ ಪ್ರಕಾರ, ಕುಪ್ವಾರದ ಎಲ್‌ಒಸಿ ಬಳಿಯ ಸಿದ್ಪೋರಾದಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಆತನ ಬಳಿಯಿದ್ದ ಶಸ್ತ್ರಾಸ್ತ್ರ, ಮದ್ದುಗುಂಡು ಸೇರಿದಂತೆ ಕ್ರಿಮಿನಲ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವೆರಸಲಾಗಿದೆ.
ಬೆಳಗಿನ ಜಾವ 2:30ರ ಸುಮಾರಿಗೆ ಉಗ್ರರ ಗುಂಪು ಸಿದ್ಪೋರಾದ ಟಿಂಗ್ದರ್ ಸೆಕ್ಟರ್ ಕಡೆಗೆ ಬರಲು ಯತ್ನಿಸಿದ್ದು, ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಅವರ ಪ್ರಕಾರ, ಆರಂಭಿಕ ಗುಂಡಿನ ದಾಳಿಯಲ್ಲಿ ಒಬ್ಬ ವಿದೇಶಿ ಉಗ್ರಗಾಮಿ ಕೊಲ್ಲಲಾಗಿದ್ದು. ಆ ಪ್ರದೇಶದಲ್ಲಿ ಎರಡರಿಂದ ಮೂವರು ಉಗ್ರರು ಇರುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಸಿರುವುದಾಗಿ ರಕ್ಷಣಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ :ನಕಲಿ ದಾಖಲೆಗಳೊಂದಿಗೆ ಚೀನಾ ಮಹಿಳೆ ಬಂಧನ: ಆರೂವರೆ ಲಕ್ಷ ಭಾರತೀಯ ಕರೆನ್ಸಿ, 1 ಲಕ್ಷ ನೇಪಾಳಿ ಕರೆನ್ಸಿ ವಶ