ಧನಬಾದ್:ಜಾರ್ಖಂಡ್ನ ಧನಬಾದ್ನಲ್ಲಿನ ಫೈನಾನ್ಸ್ ಕಂಪನಿಯನ್ನು ದೋಚಲು ಬಂದ ದುಷ್ಕರ್ಮಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಅದರಲ್ಲಿ ಓರ್ವ ಹತನಾಗಿದ್ದಾನೆ. ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಜಾರ್ಖಂಡ್ನ ಧನಬಾದ್ ಜಿಲ್ಲೆಯಲ್ಲಿನ ಖಾಸಗಿ ಫೈನಾನ್ಸ್ ಕಂಪನಿಯೊಳಗೆ ದರೋಡೆಕೋರರು ಹಗಲಲ್ಲೇ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಬಂದೂಕು ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ದೋಚಲು ಯತ್ನಿಸಿದ್ದಾರೆ. ಈ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಫೈನಾನ್ಸ್ ಕಂಪನಿಯನ್ನು ಸುತ್ತುವರಿದಿದ್ದಾರೆ.