ಕರ್ನಾಟಕ

karnataka

ETV Bharat / bharat

ಕೆಟ್ಟು ಹೋದ ಮೊಬೈಲ್‌ ಬ್ಯಾಟರಿಗೆ ವಿದ್ಯುತ್‌ ಸ್ಪರ್ಶಿಸಿ ಸ್ಫೋಟ; ಮಗು ಗಂಭೀರ

ಮಗು ಮನೆಯೊಳಗೆ ಕೆಟ್ಟುಹೋದ ಮೊಬೈಲ್ ಬ್ಯಾಟರಿಯೊಂದಿಗೆ ಆಟವಾಡುತ್ತಿದ್ದ. ಈ ವೇಳೆ ಬ್ಯಾಟರಿಗೆ ವಿದ್ಯುತ್ ತಂತಿ ತಗುಲಿಸಿದ್ದಾನೆ. ಪರಿಣಾಮ ಸ್ಫೋಟಗೊಂಡಿದೆ.

ಮೊಬೈಲ್ ಬ್ಯಾಟರಿ ಸ್ಫೋಟ: ಎಂಟು ವರ್ಷದ ಮಗುವಿನ ಸ್ಥಿತಿ ಗಂಭೀರ
ಮೊಬೈಲ್ ಬ್ಯಾಟರಿ ಸ್ಫೋಟ: ಎಂಟು ವರ್ಷದ ಮಗುವಿನ ಸ್ಥಿತಿ ಗಂಭೀರ

By

Published : Apr 8, 2022, 3:30 PM IST

ಛತ್ತರ್‌ಪುರ (ಮಧ್ಯಪ್ರದೇಶ): ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ 8 ವರ್ಷದ ಮಗು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಜರುಗಿದೆ. ಮಗುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಗ್ವಾಲಿಯರ್‌ನ ಛತ್ತರ್‌ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣು, ಮುಖ ಮತ್ತು ಎದೆಗೆ ಗಂಭೀರ ಗಾಯಗಳಾಗಿವೆ.

ಈ ಸಂಬಂಧ ಮಾತನಾಡಿದ ಡಾ.ಜಿ.ಎಲ್.ಅಹಿರ್ವಾರ್, ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ. ಕೊತ್ವಾಲಿಯ ನಜರ್‌ಬಾಗ್‌ನ ನಿವಾಸಿ ಹಾಗೂ ಮಗುವಿನ ತಂದೆ ಇಸ್ತ್ಕರ್ ಖಾನ್ ಮಾತನಾಡಿ, ಇಲ್ಲಿ ಅಗತ್ಯ ಚಿಕಿತ್ಸೆ ಸಿಗದ ಕಾರಣ ಮಗುವನ್ನು ಗ್ವಾಲಿಯರ್‌ಗೆ ಕರೆದೊಯ್ದಿದ್ದೇವೆ. ಚಿಂಟು ಮನೆಯೊಳಗೆ ಕೆಟ್ಟುಹೋದ ಮೊಬೈಲ್ ಬ್ಯಾಟರಿಯೊಂದಿಗೆ ಆಟವಾಡುತ್ತಿದ್ದ. ಆ ವೇಳೆ ಬ್ಯಾಟರಿಗೆ ವಿದ್ಯುತ್ ತಂತಿ ತಗುಲಿಸಿದ್ದಾನೆ. ಪರಿಣಾಮ ಸ್ಫೋಟಗೊಂಡಿದೆ ಎಂದು ಘಟನೆಯನ್ನು ವಿವರಿಸಿದರು.

ಇದನ್ನೂ ಓದಿ: ಹಳಿ ಮೇಲೆ ವಿಡಿಯೋ ಮಾಡ್ತಿದ್ದಾಗ ಅವಘಡ : ರೈಲಿಗೆ ಸಿಲುಕಿ ಒಂದೇ ಊರಿನ ಮೂವರು ವಿದ್ಯಾರ್ಥಿಗಳು ಸಾವು

ಮೊನ್ನೆಯಷ್ಟೇ ಛತ್ತರ್‌ಪುರದಲ್ಲಿ ಬ್ಯಾಟರಿ ಸ್ಫೋಟದಿಂದಾಗಿ 12 ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದ. ಈಗ ಇದೇ ಪ್ರದೇಶದಲ್ಲಿ ಮೊಬೈಲ್ ಬ್ಯಾಟರಿ ಸ್ಫೋಟದ ಘಟನೆ ಮರುಕಳಿಸಿದೆ. ಈ ಸಂಬಂಧ ಸಾರ್ವಜನಿಕರಲ್ಲಿ ಮನವಿ ಮಾಡಿರುವ ವೈದ್ಯರು, ಮಕ್ಕಳ ಕೈಗೆ ಈ ರೀತಿಯ ವಸ್ತುಗಳನ್ನು ನೀಡಬೇಡಿ, ಅಕಸ್ಮಾತ್​ ಕೊಟ್ಟರೂ ಎಚ್ಚರಿಕೆ ವಹಿಸಿ ಎಂದು ಸೂಚಿಸಿದ್ದಾರೆ.

ABOUT THE AUTHOR

...view details