ಮುಂಗರ್(ಬಿಹಾರ) :2ನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದುರುಳರು, ಅಷ್ಟು ಸಾಲದು ಎಂಬಂತೆ ಆಕೆಯ ಕಣ್ಣು ಮತ್ತು ಉಗುರುಗಳನ್ನು ಕಿತ್ತು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಇಂತಹದೊಂದು ರಾಕ್ಷಸೀ ಕೃತ್ಯ ನಡೆದಿದೆ.
ತಂದೆಯ ಜೊತೆ ಮೀನುಗಾರಿಕೆಗೆಂದು ಬಾಲಕಿ ಗಂಗಾ ನದಿ ತೀರಕ್ಕೆ ಹೋಗಿದ್ದಳು. ಬಳಿಕ ಆಕೆಯನ್ನು ಮನೆಗೆ ಹೋಗಲು ಅಪ್ಪ ಸೂಚಿಸಿದ್ದು, ಆಕೆ ದೋಣಿ ಇಳಿದು ಹೋಗಿದ್ದಾಳೆ. ತಂದೆ ಮನೆಗೆ ಹೋದಾಗ ಮಗಳು ಇನ್ನೂ ಬಂದಿಲ್ಲದ ವಿಚಾರ ತಿಳಿದ ಪೋಷಕರು, ಹುಡುಕಲು ಶುರು ಮಾಡಿದ್ದಾರೆ.