ಡಿಜಿಟಲ್ ಕಣ್ಣಿನ ಒತ್ತಡ(Digital Eye Strain)ವು ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಟಿವಿ, ಟ್ಯಾಬ್ಲೆಟ್‌ಗಳು ಮತ್ತು ವಿಡಿಯೋ ಗೇಮ್‌ಗಳಂತಹ ಪರದೆಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವ ಯಾರಿಗಾದರೂ ಪರಿಣಾಮ ಬೀರಬಹುದು.
ಹೆಚ್ಚಿದ ಸಮಯ ಸ್ಕ್ರೀನಿಂಗ್ನಲ್ಲಿ ತೊಡಗುವುದು ಪೋಷಕರಲ್ಲಿ ಕಳವಳಕ್ಕೆ ಕಾರಣವಾಗಿದೆ ಮತ್ತು ಆನ್‌ಲೈನ್ ಶಿಕ್ಷಣ ಈ ಚಿಂತೆ ಹೆಚ್ಚಿಸಿದೆ. ಹೆಚ್ಚಿನ ಸಮಯ ಮೊಬೈಲ್, ಲ್ಯಾಪ್‌ಟಾಪ್ ಪರದೆಗಳ ಮೇಲೆ ದೃಷ್ಟಿ ನೆಟ್ಟಿರುವಂತಾಗಿರುವುದು ಮಕ್ಕಳು ತಲೆನೋವು, ಕಣ್ಣಿನ ನೋವು ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಿದೆ.
ಆನ್‌ಲೈನ್ ತರಗತಿಗಳು, ಹೋಮ್‌ವರ್ಕ್ ಮತ್ತು ಅಸೈನ್‌ಮೆಂಟ್‌ಗಳಿಗಾಗಿ ಈ ರೀತಿಯ ಸಾಧನಗಳ ಬಳಕೆಯ ಹೊರತಾಗಿ, ಮಕ್ಕಳು ಹೆಚ್ಚಾಗಿ ಸ್ನೇಹಿತರೊಂದಿಗೆ ಬೆರೆಯಲು ಮತ್ತು ಮನರಂಜನೆಗಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗೆ ಹೋಗುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ. ಇದು ನಿತ್ಯ 7-8 ಗಂಟೆಗಳಿಗಿಂತ ಹೆಚ್ಚು ಸಮಯ ಪರದೆ ವೀಕ್ಷಿಸುವಂತೆ ಮಾಡುತ್ತದೆ ಮತ್ತು ಅದರ ಪರಿಣಾಮ-ಡಿಜಿಟಲ್ ಕಣ್ಣಿನ ಒತ್ತಡ.
ಡಿಜಿಟಲ್ ಕಣ್ಣಿನ ಆಯಾಸದಿಂದ ಬಳಲುತ್ತಿರುವ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಕಣ್ಣಿನ ಆಯಾಸ, ಕಣ್ಣಿನ ಅನಾರೋಗ್ಯ, ತಲೆನೋವು, ಕಣ್ಣುಗಳು ಒಣಗಿದಂತಾಗುವುದು, ದೃಷ್ಟಿ ಮಸುಕಾಗುವುದು ಮತ್ತು ಕಣ್ಣೀರು ಸುರಿಯುವುದು ಮುಂತಾದವು.
ದೀರ್ಘಾವಧಿಯ ಕೆಲಸ ಮತ್ತು ಹೊರಗೆ ಕಳೆಯುವ ಸಮಯವನ್ನು ಕಡಿಮೆ ಮಾಡುವುದರಿಂದ ಚಿಕ್ಕ ಮಕ್ಕಳಲ್ಲಿ ಸಮೀಪದೃಷ್ಟಿ ದೋಷಕ್ಕೆ ಸಹ ಕಾರಣವಾಗುತ್ತದೆ. ಆದ್ದರಿಂದ, ಹೆಚ್ಚಿದ ಪರದೆಯ ಸಮಯದ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು, ಮನೆಯಲ್ಲಿ ಕಣ್ಣಿನ ಒತ್ತಡವನ್ನು ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಮೊದಲ ಹಂತವಾಗಿ, ನಿಮ್ಮ ಮಗುವಿನ ವರ್ಚುಯಲ್ ಅಧ್ಯಯನ ವಾತಾವರಣವನ್ನು ಮೌಲ್ಯಮಾಪನ ಮಾಡಿ ಮತ್ತು ಅಗತ್ಯವಿದ್ದರೆ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿ.
ಕಣ್ಣುಗಳು ಮತ್ತು ಸ್ಕ್ರೀನ್ ನಡುವಿನ ಅಂತರ:
ಕಂಪ್ಯೂಟರ್ ಪರದೆಯು ನಿಮ್ಮ ಮಗು ಕುಳಿತಿರುವ ಸ್ಥಳದಿಂದ ಸುಮಾರು 1.5 ರಿಂದ 2 ಅಡಿ ಉದ್ದವಿದೆ ಎಂದು ಖಚಿತಪಡಿಸಿಕೊಳ್ಳಿ. ಪರದೆಯ ಮೇಲ್ಭಾಗವು ಕಣ್ಣಿನ ಮಟ್ಟದಲ್ಲಿ ಅಥವಾ ಸ್ವಲ್ಪ ಕೆಳಗಿರುವಂತೆ ಸಾಧನವನ್ನು ಹೊಂದಿಸಿ. ಪರದೆಯನ್ನು ವೀಕ್ಷಿಸಲು ನಿಮ್ಮ ಮಗ ಅಥವಾ ಮಗಳು ಕುತ್ತಿಗೆಯನ್ನು ಓರೆಯಾಗಿಸುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
ಸುತ್ತಮುತ್ತಲಿನ ಬೆಳಕನ್ನು ಹೊಂದಿಸಿ:
ಕೊಠಡಿಯಲ್ಲಿ ಚೆನ್ನಾಗಿ ಬೆಳಕು ಬರುವಂತಿರಬೇಕು. ಪರದೆಯ ಬೆಳಕು ಮತ್ತು ಕೋಣೆಯ ಬೆಳಕಿನ ನಡುವೆ ಹೆಚ್ಚು ವ್ಯತ್ಯಾಸ ಇರಬಾರದು. ಕತ್ತಲೆಯಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸದಂತೆ ನಿಮ್ಮ ಮಗುವಿಗೆ ಸಲಹೆ ನೀಡಿ. ಕಿಟಕಿಯಿಂದ ಅಥವಾ ಕೋಣೆಯಲ್ಲಿನ ಬೆಳಕಿನ ಮೂಲದಿಂದ ಬೆಳಕಿನ ಪ್ರತಿಫಲನದಿಂದಾಗಿ ಪರದೆ ಪ್ರಜ್ವಲಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
ಸ್ಕ್ರೀನ್ ಬ್ರೈಟ್ನೆಸ್ ಹೊಂದಿಸಿ:
ಸ್ಕ್ರೀನ್ ಬ್ರೈಟ್ನೆಸ್ ಅತ್ಯುತ್ತಮವಾಗಿದೆ ಎಂದು ಪೋಷಕರು ಖಚಿತಪಡಿಸಿಕೊಳ್ಳಬೇಕು (ಸುತ್ತಮುತ್ತಲಿನ ಪ್ರದೇಶದ ಬೆಳಕಿಗಿಂತ ಹಗುರವಾಗಿರುವುದಿಲ್ಲ ಅಥವಾ ಗಾಢವಾಗಿರುವುದಿಲ್ಲ) ಮತ್ತು ಉತ್ತಮ ವೀಕ್ಷಣೆಗಾಗಿ ಕಾಂಟ್ರಾಸ್ಟ್ ಅನ್ನು ಹೆಚ್ಚಿಸಬೇಕು. ಇದು ಅನಗತ್ಯ ಒತ್ತಡವನ್ನು ಸಹ ತಪ್ಪಿಸುತ್ತದೆ.