ಕರ್ನಾಟಕ

karnataka

ಎಡಿಎಂಕೆ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ 1,500 ರೂ. ವಿತರಣೆ: ಪಳನಿಸ್ವಾಮಿ

ನಮ್ಮ ಪಕ್ಷದ ಪ್ರಣಾಳಿಕೆಯ ಅಂಶಗಳು ಸೋರಿಕೆಯಾಗಿವೆ. ನಮ್ಮ ಪ್ರಣಾಳಿಕೆಯ ಬಗ್ಗೆ ತಿಳಿದುಕೊಂಡು ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಘೋಷಣೆಗಳನ್ನು ಮಾಡುತ್ತಿದ್ದಾರೆ ಎಂದು ಪಳನಿಸ್ವಾಮಿ ಆರೋಪಿಸಿದ್ದಾರೆ.

By

Published : Mar 8, 2021, 10:52 PM IST

Published : Mar 8, 2021, 10:52 PM IST

Edapadi's yet another master stroke
ಎಡಿಎಂಕೆ ಪ್ರಣಾಳಿಕೆ ಕುರಿತು ಪಳನಿಸ್ವಾಮಿ ಹೇಳಿಕೆ

ಚೆನ್ನೈ (ತಮಿಳುನಾಡು) : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ 1,500 ರೂ. ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ತಮ್ಮ ಪಕ್ಷದ ಪ್ರಣಾಳಿಕೆ ಕುರಿತು ಮಾತನಾಡುತ್ತಾ ಹೇಳಿದ್ದಾರೆ.

ಎಐಎಡಿಎಂಕೆಯ ಹತ್ತು ವರ್ಷದ ದೃಷ್ಠಿಕೋನ ಎಂಬ ಪ್ರಣಾಳಿಕೆ ವಿಷಯದ ಕುರಿತು ಮಾತನಾಡಿದ ಅವರು, ನಮ್ಮ ಪಕ್ಷದ ಪ್ರಣಾಳಿಕೆಯ ಅಂಶಗಳು ಸೋರಿಕೆಯಾಗಿವೆ. ನಮ್ಮ ಪ್ರಣಾಳಿಕೆಯ ಬಗ್ಗೆ ತಿಳಿದುಕೊಂಡು ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಘೋಷಣೆಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಪ್ರಣಾಳಿಕೆಯನ್ನು ಆದಷ್ಟು ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಓವೈಸಿ-ದಿನಕರನ್ ಮೈತ್ರಿ ಸಕ್ಸಸ್​: ತಮಿಳುನಾಡಿನಲ್ಲಿ ಒಟ್ಟಿಗೆ ಚುನಾವಣಾ ಕಣಕ್ಕೆ

ಗೃಹಿಣಿಯರಿಗೆ 1,000 ರೂ. ಮತ್ತು ವರ್ಷಕ್ಕೆ ಆರು ಗ್ಯಾಸ್​ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಈ ಹಿಂದೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಘೋಷಿಸಿದ್ದರು.

ಎಐಎಡಿಎಂಕೆ ಸಹ-ಸಂಯೋಜಕರಾಗಿರುವ ಪಳನಿಸ್ವಾಮಿ, ಚುನಾವಣೆಯನ್ನು ಮುಂದಿಟ್ಟುಕೊಂಡು ಒಂದರ ಹಿಂದೊಂದು ಘೋಷಣೆಗಳನ್ನು ಮಾಡುತ್ತಿದ್ದು, ಕೃಷಿ ಸಾಲ ಮನ್ನಾ, ವನ್ನಿಯರ್‌ಗಳಿಗೆ ಶೇ. 10.5 ಸಮತಲ ಮೀಸಲಾತಿ, ಸಹಕಾರಿ ಸಮಾಜದಲ್ಲಿ ಸ್ವಸಹಾಯ ಮಹಿಳಾ ಗುಂಪುಗಳಿಗೆ ಸಾಲ ಮನ್ನಾ ಸೇರಿದಂತೆ ಇನ್ನೂ ಹಲವು ಪ್ರಮುಖ ಭರವಸೆಗಳನ್ನು ಘೊಷಿಸಿದ್ದಾರೆ.

ABOUT THE AUTHOR

...view details