ನವದೆಹಲಿ:ಹೈದರಾಬಾದ್ ಮತ್ತು ವಿಜಯವಾಡದಲ್ಲಿರುವ ಎಂಬಿಎಸ್ ಜ್ಯುವೆಲರ್ಸ್ ಪ್ರೈವೇಟ್ ಲಿಮಿಟೆಡ್, ಮುಸದ್ದಿಲಾಲ್ ಜೆಮ್ಸ್ ಆ್ಯಂಡ್ ಜ್ಯುವೆಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅದರ ನಿರ್ದೇಶಕ ಸುಕೇಶ್ ಗುಪ್ತಾ ಮತ್ತು ಅನುರಾಗ್ ಗುಪ್ತಾ ಅವರ ಅಂಗಡಿ ಮತ್ತು ಮನೆಗಳ ಮೇಲೆ ಇತ್ತೀಚೆಗೆ ಶೋಧ ಕಾರ್ಯಾಚರಣೆ ನಡೆಸಿ 149.10 ಕೋಟಿ ಮೌಲ್ಯದ ಆಭರಣಗಳು ಮತ್ತು 1.96 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಇಡಿ ಈ ಕ್ರಮ ಕೈಗೊಂಡಿದೆ. ಅಕ್ಟೋಬರ್ 18 ರಂದು ಸುಕೇಶ್ ಗುಪ್ತಾ ಅವರನ್ನು ಇಡಿ ಬಂಧಿಸಿತ್ತು. ಅವರನ್ನು ಹೈದರಾಬಾದ್‌ನ ನಾಂಪಲ್ಲಿಯಲ್ಲಿರುವ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. Buyer's Credit Scheme ಅಡಿ ಚಿನ್ನಾಭರಣ ಖರೀದಿಯಲ್ಲಿ ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ (MMTC) ಲಿಮಿಟೆಡ್ಗೆ ವಂಚನೆ ಮಾಡಿರುವುದಕ್ಕೆ ಗುಪ್ತಾ ಮತ್ತು ಅವರ ಕಂಪನಿಗಳ ವಿರುದ್ಧ CBI, ACB, ಹೈದರಾಬಾದ್ ದಾಖಲಿಸಿದ FIR ಆಧಾರದ ಮೇಲೆ ED ತನಿಖೆ ಪ್ರಾರಂಭಿಸಿತು.