ಕರ್ನಾಟಕ

karnataka

ETV Bharat / bharat

ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಗೌರಮ್ಮಗೆ ಸೇರಿದ 3.35 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಜಪ್ತಿ - ಈಟಿವಿ ಭಾರತ ಕನ್ನಡ

ಗೌರಮ್ಮ ಕಾರ್ಪೊರೇಟರ್ ಆಗಿದ್ದಾಗ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಪತಿ ಗೋವಿಂದರಾಜು ಜೊತೆ ಶಾಮೀಲಾಗಿ ಅಕ್ರಮ ಆದಾಯ ಗಳಿಸಿದ್ದಾರೆ ಎಂದು ಇಡಿ ಹೇಳಿದೆ.

ED attaches assets worth Rs 3.35 cr of former Bangalore corporator
ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಗೌರಮ್ಮಗೆ ಸೇರಿದ 3.35 ಕೋಟಿ ರೂ. ಸ್ಥಿರಾಸ್ತಿ ಜಪ್ತಿ

By

Published : Aug 2, 2022, 7:37 PM IST

ನವದೆಹಲಿ: ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನ ಆಜಾದ್ ನಗರದ ಮಾಜಿ ಕಾರ್ಪೊರೇಟರ್ ಗೌರಮ್ಮ ಅವರಿಗೆ ಸೇರಿದ 3.35 ಕೋಟಿ ರೂ.ಗಳ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ. ಗೌರಮ್ಮ ಮತ್ತು ಪತಿ ಸಿ.ಗೋವಿಂದರಾಜು ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಆರೋಪಪಟ್ಟಿ ಆಧಾರದ ಮೇಲೆ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಸಂಬಂಧ ತನಿಖೆ ಕೈಗೊಂಡಿದ್ದರು.

ಗೌರಮ್ಮ ಕಾರ್ಪೊರೇಟರ್ ಆಗಿದ್ದಾಗ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಪತಿ ಗೋವಿಂದರಾಜು ಜೊತೆ ಶಾಮೀಲಾಗಿ ಅಕ್ರಮ ಆದಾಯ ಗಳಿಸಿದ್ದಾರೆ. 2010-11ರಿಂದ 2012-13ರ ಆರ್ಥಿಕ ಸಾಲಿನಲ್ಲಿ 3.46 ಕೋಟಿ ರೂ.ಗಳ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಇದರಲ್ಲಿ ಕೃಷಿ ಭೂಮಿ, ವಸತಿ ಪ್ಲಾಟ್‌ಗಳು ಮತ್ತು ವಾಣಿಜ್ಯ ಸೈಟ್‌ಗಳು ಸೇರಿವೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಕೇಸ್​​: ದೆಹಲಿ ಇಡಿ ವಿಶೇಷ ನ್ಯಾಯಾಲಯದಿಂದ ಡಿಕೆಶಿಗೆ ಜಾಮೀನು ವಿಸ್ತರಣೆ

ABOUT THE AUTHOR

...view details