ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಚುನಾವಣಾ ಆಯೋಗವು 1951 ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 29 ಎ ಅಡಿ ರಾಜಕೀಯ ಪಕ್ಷಗಳ ನೋಂದಣಿ ನೋಟಿಸ್ ಅವಧಿಯನ್ನು 30 ದಿನಗಳಿಂದ ಏಳು ದಿನಗಳಿಗೆ ಇಳಿಸಿದೆ.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಚುನಾವಣಾ ವೇಳಾಪಟ್ಟಿಯನ್ನು ಜನವರಿ 8 ರಂದು ಚುನಾವಣೆ ಆಯೋಗ ಪ್ರಕಟಿಸಿತ್ತು.
ಓದಿ:ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟ: 20 ಮಕ್ಕಳು ಸೇರಿ 33 ಮಂದಿಗೆ ಕೋವಿಡ್ ದೃಢ
ಈ ಸಂಬಂಧಿತ ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ಆಯೋಗವು ನೋಂದಣಿ ಅವಧಿಗೆ ನಿಗದಿ ಪಡಿಸಿದ್ದ ನೋಟಿಸ್ ಅವಧಿಯಲ್ಲಿ ಸಡಿಲಿಕೆ ನೀಡಿದೆ ಮತ್ತು 08.01.2022 ರಂದು ಅಥವಾ ಮೊದಲು ತಮ್ಮ ಸಾರ್ವಜನಿಕ ಸೂಚನೆಯನ್ನು ಪ್ರಕಟಿಸಿದ ಪಕ್ಷಗಳಿಗೆ 30 ದಿನಗಳಿಂದ 7 ದಿನಗಳವರೆಗೆ ನೋಟಿಸ್ ಅವಧಿಯನ್ನು ಕಡಿಮೆ ಮಾಡಿದೆ ಎಂದು EC ಹೇಳಿಕೆ ತಿಳಿಸಿದೆ.
08.01.2022 ರ ಮೊದಲು 7 ದಿನಗಳೊಳಗೆ ಸಾರ್ವಜನಿಕ ಸೂಚನೆಯನ್ನು ಈಗಾಗಲೇ ಪ್ರಕಟಿಸಿದ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳಿಗೆ ಆಕ್ಷೇಪಣೆಗಳು ಯಾವುದಾದರೂ ಇದ್ದರೆ 21 ಜನವರಿ 2022 ರಂದು ಸಂಜೆ 5.30 ರೊಳಗೆ ಅಥವಾ ಅಂತ್ಯದೊಳಗೆ ಸಲ್ಲಿಸಬಹುದು ಎಂದು ಚುನಾವಣೆ ಆಯೋಗ ಹೇಳಿದೆ.