ಕರ್ನಾಟಕ

karnataka

ETV Bharat / bharat

ಅಂಡಮಾನ್ ನಿಕೋಬಾರ್​ ದ್ವೀಪದಲ್ಲಿ ಕಂಪಿಸಿದ ಭೂಮಿ.. 5.2 ರಷ್ಟು ತೀವ್ರತೆ ದಾಖಲು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕ್ಯಾಂಪ್‌ಬೆಲ್ ಕೊಲ್ಲಿ ಬಳಿ ಶುಕ್ರವಾರ ರಾತ್ರಿ 8:34 ರ ಸುಮಾರಿಗೆ ಭೂಕಂಪ ಸಂಭವಿಸಿದೆ.

ಭೂಕಂಪ
ಭೂಕಂಪ

By

Published : Sep 25, 2021, 8:10 AM IST

ಕ್ಯಾಂಪ್‌ಬೆಲ್ ಬೇ (ಅಂಡಮಾನ್ ಮತ್ತು ನಿಕೋಬಾರ್): ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕ್ಯಾಂಪ್‌ಬೆಲ್ ಕೊಲ್ಲಿ ಬಳಿ ಶುಕ್ರವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಾ ಶಾಸ್ತ್ರ ಕೇಂದ್ರ (NCS) ತಿಳಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರೀಯ ಭೂಕಂಪನಾ ಶಾಸ್ತ್ರ ಕೇಂದ್ರ, ಸೆಪ್ಟೆಂಬರ್​ 24 ರ ರಾತ್ರಿ 8:34 ರ ಸುಮಾರಿಗೆ ಕ್ಯಾಂಪ್​ ಬೆಲ್​ ಕೊಲ್ಲಿಯಿಂದ 246 ಕಿ.ಮೀ ದೂರದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ ಎಂದು ಉಲ್ಲೇಖಿಸಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಆಗಾಗ್ಗೆ ಭೂಕಂಪನ ಸಂಭವಿಸುತ್ತಿರುತ್ತದೆ. ಈ ಹಿಂದೆ ಸೆಪ್ಟೆಂಬರ್ 22 ರಂದು ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿತ್ತು.

ಇದನ್ನೂ ಓದಿ: ಕೇಂದ್ರ​ ಅಮೆರಿಕದ ನಿಕರಾಗುವಾದಲ್ಲಿ 6.5 ತೀವ್ರತೆಯ ಭೂಕಂಪ

ABOUT THE AUTHOR

...view details