ಕರ್ನಾಟಕ

karnataka

ETV Bharat / bharat

ಜಮ್ಮು & ಕಾಶ್ಮೀರದಲ್ಲಿ 3.7 ತೀವ್ರತೆಯ ಭೂಕಂಪ - ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್)

ಲಡಾಖ್​ನ ಲೇಹ್​ ಪ್ರದೇಶದಲ್ಲಿ ಇಂದು ಬೆಳಗ್ಗೆ 8.33 ಗಂಟೆಗೆ ಭೂಕಂಪ ಉಂಟಾಗಿದ್ದು, ರಿಕ್ಟರ್​ ಮಾಪಕದಲ್ಲಿ 3.7 ರಷ್ಟು ತೀವ್ರತೆ ದಾಖಲಾಗಿದೆ.

Earthquake of 3.7 magnitude hits Jammu and Kashmir
ಜಮ್ಮು & ಕಾಶ್ಮೀರದಲ್ಲಿ 3.7 ತೀವ್ರತೆಯ ಭೂಕಂಪ

By

Published : Dec 21, 2020, 10:08 AM IST

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಲಡಾಖ್​ನ ಲೇಹ್​ ಪ್ರದೇಶದಲ್ಲಿ ಬೆಳಗ್ಗೆ ಭೂಕಂಪನ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಬೆಳಗ್ಗೆ 8.33ಕ್ಕೆ ಭೂರಮೆ ನಡುಗಿದ್ದು, ರಿಕ್ಟರ್​ ಮಾಪಕದಲ್ಲಿ 3.7 ರಷ್ಟು ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಇದನ್ನೂ ಓದಿ: ಮುಂದಿನ 1000 ವರ್ಷ ಯಾವುದೇ ಭೂಕಂಪನ ಆದ್ರೂ ರಾಮ ಮಂದಿರ ಅಲುಗಾಡಲ್ಲ: ಶೈಲೇಶ್ ಗಾಂಧಿ

ಲೇಹ್‌ನ ಆಲ್ಚಿಯಿಂದ ನೈರುತ್ಯಕ್ಕೆ 79 ಕಿ. ಮೀ. ದೂರದಲ್ಲಿ ಹಾಗೂ 5 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಇದೆ ಎಂದು ಎನ್‌ಸಿಎಸ್​ ತಿಳಿಸಿದೆ.

ABOUT THE AUTHOR

...view details