ಮಹಾರಾಷ್ಟ್ರ(ಜಲಗಾಂವ್): ಇಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಔರಂಗಾಬಾದ್‌ನ ಕನ್ನಡ್ ಘಾಟ್‌ನಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ ಔರಂಗಾಬಾದ್‌ನಿಂದ ಚಾಲಿಸ್‌ಗಾಂವ್ ಧುಲೆಯವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕನ್ನಡ್ ಘಾಟ್‌ನಲ್ಲಿ ಭೂ ಕುಸಿತ, ಸಂಚಾರ ಬಂದ್ ಭೂಕುಸಿತದಿಂದಾಗಿ ಅನೇಕ ವಾಹನಗಳು ರಸ್ತೆ ಮಧ್ಯೆ ಸಿಲುಕಿಕೊಂಡಿವೆ. ಘಟನೆಯಲ್ಲಿ ಕೆಲವು ವಾಹನಗಳು ಹಾನಿಗೊಳಗಾಗಿದ್ದರೂ, ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಹೆದ್ದಾರಿ ಪೊಲೀಸರು ತಿಳಿಸಿದ್ದಾರೆ. ಇದೀಗ ರಸ್ತೆಯನ್ನು ತೆರವುಗೊಳಿಸುತ್ತಿದ್ದಾರೆ.
ಕನ್ನಡ್ ಘಾಟ್‌ನಲ್ಲಿ ಭೂ ಕುಸಿತ, ಸಂಚಾರ ಬಂದ್ ಸೋಮವಾರ ರಾತ್ರಿಯಿಂದ ಮರಾಠವಾಡ ಮತ್ತು ಮಹಾರಾಷ್ಟ್ರದ ಉತ್ತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ತಡರಾತ್ರಿ ತೀವ್ರ ಮಳೆಯಾಗಿದ್ದು, ನದಿಗಳು ಮತ್ತು ಕೊಳಗಳು ತುಂಬಿ ಹರಿಯುತ್ತಿವೆ. ನಿರಂತರ ಮಳೆಯಿಂದಾಗಿ ಪರಿಹಾರ ಕಾರ್ಯ ನಿಧಾನವಾಗಲಿದೆ. ಅಲ್ಲದೇ, ಸಾರ್ವಜನಿಕರು ಪ್ರವಾಸವನ್ನು ಯೋಜಿಸಿದ್ದರೆ ತಾತ್ಕಾಲಿಕವಾಗಿ ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಓದಿ:ಸುಪ್ರೀಂಕೋರ್ಟ್‌ನ 9 ನೂತನ ನ್ಯಾಯಮೂರ್ತಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ