ಪುಣೆ (ಮಹಾರಾಷ್ಟ್ರ):ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳು ನಡುರಸ್ತೆಯಲ್ಲಿ ಮಲಗಿ ರಂಪಾಟ ಮಾಡಿದ ಘಟನೆ ನಗರದ ತಿಲಕ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಈ ಯುವತಿ ನಶೆಯಲ್ಲಿ ತೇಲಾಡಿದ ವಿಡಿಯೋ ವೈರಲ್ ಆಗಿದೆ.
ಪ್ರಮುಖ ರಸ್ತೆಯಲ್ಲೇ ಯುವತಿ ಮಲಗಿದ್ದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು. ಈ ಬಗ್ಗೆ ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಯುವತಿಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.