ಲಖನೌ(ಉತ್ತರ ಪ್ರದೇಶ):ರೈಲ್ವೆ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ವೇಳೆ ಆಘಾತಕಾರಿ ಘಟನೆಯೊಂದು ನಡೆದಿದೆ. ಹೌದು, ಅಕಾಲ್ - ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಪ್ರಯಾಣಿಕರೊಬ್ಬರ ಮೇಲೆ ಕುಡಿದ ಮತ್ತಿನಲ್ಲಿ ಟಿಟಿಇಯೊಬ್ಬ (ಟ್ರಾವೆಲ್ ಟಿಕೆಟ್ ಎಕ್ಸಾಮಿನರ್) ಮೂತ್ರ ವಿಸರ್ಜನೆ ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ. ರೈಲು ಅಮೃತಸರದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವೇಳೆ ಮಧ್ಯರಾತ್ರಿ ಈ ಅಮಾನವೀಯ ಘಟನೆ ನಡೆದಿದೆ.
ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಅನುಚಿತ ವರ್ತನೆ: ಈ ಹಿಂದೆಯೂ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕರೊಬ್ಬರು ಮತ್ತೊಬ್ಬ ಪ್ರಯಾಣಿಕರ ಮೇಲೆ ಶೌಚ ಮಾಡಿದ್ದ ಘಟನೆ ನಡೆದಿತ್ತು. ಈ ರೀತಿಯ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಇಂತಹದೇ ಪ್ರಕರಣವೊಂದು ರೈಲಿನಲ್ಲಿಯೂ ಕೂಡ ಜರುಗಿದೆ. ನಶೆಯಲ್ಲಿದ್ದ ಟಿಟಿಇಯೊಬ್ಬ ಮಹಿಳೆಯೊಬ್ಬರ ಮೇಲೆ ವಿಸರ್ಜನೆ ಮಾಡಿದ ಘಟನೆ ನಡೆದಿದೆ. ರೈಲು ಲಖನೌದ ಚಾರ್‌ಬಾಗ್ ರೈಲು ನಿಲ್ದಾಣವನ್ನು ತಲುಪಿದ ವೇಳೆ, ಮಹಿಳೆಯ ದೂರಿನ ಅನ್ವಯ ಟಿಟಿಇಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭಾನುವಾರ ತಡರಾತ್ರಿ ಅಮೃತಸರದಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಅಕಾಲ್ - ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇ ಮಹಿಳೆಯ ತಲೆಯ ಮೇಲೆ ಮತ್ರ ವಿಸರ್ಜನೆ ಮಾಡಿದ್ದಾನೆ ಎಂದು ಜಿಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಎಚ್ಚರಿಕೆ ನೀಡಿದ ಹಿನ್ನೆಲೆ, ಆಕೆಯ ಪತಿ ಟಿಟಿಇಯನ್ನು ಹಿಡಿದು ಸೋಮವಾರ ಬೆಳಗ್ಗೆ ಚಾರ್‌ಬಾಗ್ ರೈಲು ನಿಲ್ದಾಣದಲ್ಲಿ ಜಿಆರ್‌ಪಿಗೆ ಒಪ್ಪಿಸಿದರು.
ಟಿಟಿಇ ನ್ಯಾಯಾಂಗ ಬಂಧನಕ್ಕೆ:ಜಿಆರ್‌ಪಿ ಚಾರ್‌ಬಾಗ್‌ನ ಇನ್ಸ್‌ಪೆಕ್ಟರ್ ನವರತ್ನ ಗೌತಮ್ ಪ್ರಕಾರ, ಅಮೃತಸರ ನಿವಾಸಿ ರಾಜೇಶ್ ತನ್ನ ಪತ್ನಿಯೊಂದಿಗೆ ಅಕಾಲ್ ತಖ್ತ್ ಎಕ್ಸ್‌ಪ್ರೆಸ್‌ನ ಎ-1 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಪತ್ನಿ ಸೀಟಿನಲ್ಲಿ ವಿಶ್ರಮಿಸುತ್ತಿದ್ದಳು. ಟಿಟಿಇ ಅವರ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ವಿರೋಧಿಸಿ ಪತ್ನಿ ಕೂಗಿಕೊಂಡಾಗ ರೈಲಿನೊಳಗೆ ಜಮಾಯಿಸಿದ ಪ್ರಯಾಣಿಕರು ಟಿಟಿಇಯನ್ನು ಹಿಡಿದಿದ್ದಾರೆ. ಪ್ರಯಾಣಿಕರು ಟಿಟಿಇಗೆ ಥಳಿಸಿದ್ದಾರೆ. ಮಹಿಳಾ ಪ್ರಯಾಣಿಕರೊಬ್ಬರ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡುವಾಗ ವೇಳೆ, ಟಿಟಿಇ ಕುಡಿದ ಅಮಲಿನಲ್ಲಿ ಇದ್ದರು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಪ್ರಯಾಣಿಕ ರಾಜೇಶ್ ಅವರು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಆರ್‌ಪಿ ಇನ್ಸ್ಪೆಕ್ಟರ್ ನವರತ್ನ ಗೌತಮ್ ಹೇಳುತ್ತಾರೆ. ಟಿಟಿಇ ಮುನ್ನಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸರು ಹೇಳಿದ್ದೇನು?:ಜಿಆರ್‌ಪಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸಿನ್ಹಾ ಅವರು, ಆರ್‌ಪಿಎಫ್ ಕಂಟ್ರೋಲ್ ರೂಂ ಮತ್ತು ಟ್ವಿಟರ್ ಮೂಲಕ ದಂಪತಿ ಬಿಹಾರಕ್ಕೆ ಹೋಗುತ್ತಿರುವ ಬಗ್ಗೆ ಟಿಟಿಇ ಮುನ್ನಾ ಕುಮಾರ್ ಮಾಹಿತಿ ಪಡೆದರು ಎಂದು ಅವರು ಹೇಳಿದರು. ಟಿಟಿಇಯನ್ನು ಜಿಆರ್‌ಪಿ ಇನ್ಸ್ಪೆಕ್ಟರ್ ನವರತ್ನ ಗೌತಮ್ ಚಾರ್‌ಬಾಗ್ ರೈಲು ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿಸಿದರು. ಪ್ರಯಾಣಿಕರ ದೂರಿನ ಮೇರೆಗೆ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡರು. ಟಿಟಿಇ ಮುನ್ನಾ ಕುಮಾರ್ ಅವರನ್ನು ಸಹರಾನ್‌ಪುರದಲ್ಲಿ ನಿಯೋಜಿಸಲಾಗಿತ್ತು, ಸದ್ಯ ಅವರನ್ನು ದೂರಿನ ಅನ್ವಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ:ಗೆಳತಿಯೊಂದಿಗೆ ಓಡಿಹೋದ ಮಗ, ತಂದೆಗೆ ತಾಲಿಬಾನ್ ರೀತಿ ಶಿಕ್ಷೆ: ಮುಜುಗರಕ್ಕೆ ಒಳಗಾಗಿ ಅಪ್ಪ ಆತ್ಮಹತ್ಯೆ