ಕರ್ನಾಟಕ

karnataka

ETV Bharat / bharat

ಐಜ್ವಾಲ್​​ನಲ್ಲಿ 57 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ - ಅಸ್ಸಾಂ ರೈಫಲ್ಸ್​

Drugs worth 57.6 lakhs seized in Aizawl
ಐಜ್ವಾಲ್​​ನಲ್ಲಿ 57 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ

By

Published : Feb 23, 2021, 9:57 PM IST

Updated : Feb 23, 2021, 10:02 PM IST

21:12 February 23

ಐಜ್ವಾಲ್​​ನಲ್ಲಿ 57 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ

ಐಜ್ವಾಲ್:ಮಾದಕ ವಸ್ತು ನಿಗ್ರಹ ದಳ, ಮಿಜೋರಾಂ ಅಬಕಾರಿ- ಮಾದಕ ವಸ್ತು ನಿಗ್ರಹ ಇಲಾಖೆ ಮತ್ತು ಅಸ್ಸಾಂ ರೈಫಲ್ಸ್​ನ 46 ಬೆಟಾಲಿಯನ್​ನಿಂದ ಐಜ್ವಾಲ್​ನ ಬಾವ್ಗ್ಕಾನ್ ಶಾಲೋಂನಲ್ಲಿ ಕಾರ್ಯಾಚರಣೆ ನಡೆಸಿ 128 ಗ್ರಾಂ ಹೆರಾಯಿನ್ ಜಪ್ತಿ ಮಾಡಲಾಗಿದೆ.

ಈ ಮಾದಕ ವಸ್ತುವಿನ ಮೌಲ್ಯ ಸುಮಾರು 57 ಲಕ್ಷದ 60 ಸಾವಿರ ರೂಪಾಯಿ ಎಂದು ಅಂದಾಜು ಮಾಡಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಚಂಪಾಯ್ ವೆಂಗ್ತಾರ್​ ಟ್ಲಾಂನೌಮ್​ ನಿವಾಸಿಯಾದ 25 ವರ್ಷ ವಯಸ್ಸಿನ ಲಾಲ್​ಕಿಮಾ, ನಗೌರ್​ ಗ್ರಾಮದ 38 ವರ್ಷದ ಮಂಗ್ಕನ್ಪೌವಾ ಎಂಬುವವರನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್​ ಅಂಡ್ ಸೈಕೋಟ್ರೋಪಿಕ್ ಸಬ್​ಸ್ಟೆನ್ಸ್​ ಆ್ಯಕ್ಟ್​-1985ರ ಅಡಿಯಲ್ಲಿ ದೂರು ದಾಖಲಾಗಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Last Updated : Feb 23, 2021, 10:02 PM IST

ABOUT THE AUTHOR

...view details