ಕರ್ನಾಟಕ

karnataka

ETV Bharat / bharat

ಮುಂಬೈ: ಡ್ರಗ್ಸ್ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಎನ್​ಸಿಬಿ ವಶಕ್ಕೆ - NCB Raid

ಭಾನುವಾರ ಮತ್ತು ಸೋಮವಾರ ತಡರಾತ್ರಿಯವರೆಗೂ ಮುಂಬೈನ ಬಾಂದ್ರಾ, ಅಂಧೇರಿ ಮತ್ತು ಲೋಖಂಡ್‌ವಾಲಾ ಪ್ರದೇಶಗಳಲ್ಲಿ ಸರಣಿ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದೆ.

Mumbai: Drug supplier taken into custody by NCB following series of raids
ಡ್ರಗ್ಸ್ ಸರಬರಾಜು ಮಾಡುತ್ತಿದ್ದವನ ವಶಕ್ಕೆ ಪಡೆದ ಎನ್​ಸಿಬಿ

By

Published : Oct 4, 2021, 10:46 AM IST

ಮುಂಬೈ (ಮಹಾರಾಷ್ಟ್ರ): ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಶನಿವಾರ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್‌ ಪಾರ್ಟಿ ಮೇಲೆ ದಾಳಿ ನಡೆಸಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಸೇರಿ 8 ಮಂದಿಯನ್ನು ವಶಕ್ಕೆ ಪಡೆದು ಬಳಿಕ ಬಂಧಿಸಿದ್ದರು.

ಈ ಹಿನ್ನೆಲೆಯಲ್ಲಿ ಭಾನುವಾರ ಮತ್ತು ಸೋಮವಾರ ತಡರಾತ್ರಿವರೆಗೂ ಮುಂಬೈನ ಬಾಂದ್ರಾ, ಅಂಧೇರಿ ಮತ್ತು ಲೋಖಂಡ್‌ವಾಲಾದಲ್ಲಿ ಸರಣಿ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದ ಬಂಧಿತರಲ್ಲಿ ಶಾರುಖ್ ಪತ್ರ ಆರ್ಯನ್ ಖಾನ್, ಅರ್ಬಜ್ ಮರ್ಚೆಂಟ್, ಮುನ್ಮುನ್ ಧಮೇಚ ಅವರನ್ನು ಮ್ಯಾಜಿಸ್ಟ್ರೇಟ್​ ಕೋರ್ಟ್ ಒಂದು ದಿನಗಳ ಕಾಲ ಎನ್​ಸಿಬಿ ಕಸ್ಟಡಿಗೆ ಒಪ್ಪಿಸಿತ್ತು. ಈ ಕುರಿತು ಇಂದು ಮಧ್ಯಾಹ್ನ ಕೋರ್ಟ್​ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಇದರ ಜೊತೆಗೆ ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾರ ವೈದ್ಯಕೀಯ ಪರೀಕ್ಷೆ ಅಂತ್ಯಗೊಂಡ ಬಳಿಕ ಕೋರ್ಟ್​ಗೆ ಹಾಜರುಪಡಿಸಲು ಎನ್​ಸಿಬಿ ತಯಾರಿ ನಡೆಸಿದೆ.

ಇದನ್ನೂ ಓದಿ:ಪಂಡೋರಾ ಪೇಪರ್ಸ್ ಸೋರಿಕೆ: ಸಚಿನ್, ಶಕೀರಾ ಸೇರಿ 91 ದೇಶಗಳ ಶ್ರೀಮಂತರ ಹಣಕಾಸು ಗುಟ್ಟು ರಟ್ಟು

ABOUT THE AUTHOR

...view details