ಪರ್ವತದ ಅಂಚಿನಲ್ಲಿರುವ ಕಿರಿದಾದ ರಸ್ತೆಯಲ್ಲಿ ಚಾಲಕನೊಬ್ಬ ಕಾರನ್ನು ಚಾಣಾಕ್ಷತನದಿಂದ ಯೂಟರ್ನ್ ತೆಗೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕಂದಕದ ಪಕ್ಕದಲ್ಲಿರುವ ರಸ್ತೆಯಲ್ಲಿ ನೀಲಿ ಬಣ್ಣದ ಕಾರನ್ನು ನಿಧಾನವಾಗಿ ತಿರುಗಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕಿರಿದಾದ ರಸ್ತೆಯ ಒಂದೆಡೆ ಕಲ್ಲು ಬಂಡೆಗಳು ಹಾಗೂ ಇನ್ನೊಂದೆಡೆ ಕಂದಕವಿದ್ದು, ಅಂತಹ ಆಯಕಟ್ಟಿನ ರಸ್ತೆಯಲ್ಲೂ ಕೂಡ ಚಾಲಕ ಯಶಸ್ವಿಯಾಗಿ ಕಾರನ್ನು ತಿರುಗಿಸಿಕೊಂಡು ಹೋಗುವ ಮೂಲಕ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದ್ದಾನೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಹೀಗೆ ಯೂಟರ್ನ್ ತೆಗೆದುಕೊಳ್ಳುವಾಗ ಅನೇಕ ಸಲ ಕಾರಿನ ಚಕ್ರಗಳು ಕಂದಕದ ಅಂಚಿಗೆ ತೆರಳಿ ಮೇಲೆ ಬಂದಿದ್ದು, ನೋಡುಗರ ಎದೆ ಝಲ್ ಎನ್ನುವಂತಿದೆ. ಕೊನೆಗೂ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಕಾರು ತಿರುಗಿಸಿದ್ದಾನೆ. ಡ್ರೈವರ್ನ ದುಸ್ಸಾಹಸದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂಗಳಲ್ಲಿ ಭಾರಿ ವೈರಲ್ ಆಗಿದ್ದು, ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದಿದೆ.
ಇದನ್ನೂ ಓದಿ:ಆನ್ಲೈನ್ ತರಗತಿ ವೇಳೆ ದಿಢೀರ್ ಅರೆನಗ್ನ ಡ್ಯಾನ್ಸ್.. ತನಿಖೆಗೆ ಸೂಚನೆ ನೀಡಿದ ಶಿಕ್ಷಣ ಸಚಿವ