ನವದೆಹಲಿ:ಟೀಂ ಇಂಡಿಯಾ ಸ್ಫೋಟಕ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಇದೀಗ ಕೊರೊನಾ ಸೋಂಕಿತರ ಆರೈಕೆಯಲ್ಲಿ ಭಾಗಿಯಾಗಿದ್ದು, ದೆಹಲಿಯ ಕೋವಿಡ್ ರೋಗಿಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ಮನೆಯಲ್ಲಿ ಬೇಯಿಸಿದ ಊಟವನ್ನ ಉಚಿತವಾಗಿ ಒದಗಿಸುತ್ತಿದ್ದಾರೆ.
ಸೆಹ್ವಾಗ್ ಮಾನವೀಯ ಕೆಲಸಕ್ಕೆ ಸಾಥ್ ನೀಡಿದ ಡೊಮಿನೊಸ್! - ಕೋವಿಡ್ ರೋಗಿಗಳಿಗೆ ಸೆಹ್ವಾಗ್ ಊಟ
ಕೊರೊನಾ ಸೋಂಕಿತರಿಗೆ ಆಹಾರ ವಿತರಣೆ ಮಾಡುತ್ತಿರುವ ವಿರೇಂದ್ರ ಸೆಹ್ವಾಗ್ ಕೆಲಸಕ್ಕೆ ಇದೀಗ ಡೊಮಿನೊಸ್ ಪಿಜ್ಜಾ ಸಾಥ್ ನೀಡಿದೆ.
Sehwag Foundation
ವಿರೇಂದ್ರ ಸೆಹ್ವಾಗ್ ಅವರ ಈ ಕಾರ್ಯಕ್ಕೆ ಇದೀಗ ಡೊಮಿನೊಸ್ ಪಿಜ್ಜಾ ವಿತರಣಾ ಪಾಲುದಾರರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿರುವ ಸೆಹ್ವಾಗ್ ಮಾಹಿತಿ ಹಂಚಿಕೊಂಡಿದ್ದಾರೆ. ಕೋವಿಡ್ ಸೋಂಕಿಗೊಳಗಾದವರಿಗೆ ಊಟದ ಅವಶ್ಯಕತೆ ಇದ್ದಲ್ಲಿ ಸೆಹ್ವಾಗ್ ಫೌಂಡೇಷನ್ಗೆ ಮಾಹಿತಿ ನೀಡಿ ಎಂದು ಅವರು ಇದೇ ವೇಳೆ ಮನವಿ ಸಹ ಮಾಡಿಕೊಂಡಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿನಿಂದಾಗಿ ಅನೇಕರು ತೊಂದರೆಗೊಳಗಾಗಿದ್ದು, ಅನೇಕ ಕ್ರಿಕೆಟರ್ಸ್, ಬಾಲಿವುಡ್ ನಟರು ಸೇರಿದಂತೆ ಅನೇಕರು ಸಹಾಯ ಮಾಡುತ್ತಿದ್ದಾರೆ.