ಕರ್ನಾಟಕ

karnataka

By

Published : Apr 27, 2021, 1:46 PM IST

Updated : Apr 27, 2021, 2:18 PM IST

ETV Bharat / bharat

ಭಾರತ ಸರ್ಕಾರದ ವಿರುದ್ಧ 'ದಿ ಆಸ್ಟ್ರೇಲಿಯನ್' ಪತ್ರಿಕೆಯಲ್ಲಿ ಅಪಪ್ರಚಾರ: ಹೈಕಮಿಷನ್​ ಗರಂ

ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳು ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಕಳೆದ ಮಾರ್ಚ್​ನಲ್ಲಿ ಮಾಡಲಾಗಿದ್ದ ಲಾಕ್​ಡೌನ್​ನಿಂದ ಹಿಡಿದು ಇಂದಿನ ಲಸಿಕೆ ಅಭಿಯಾನದವರೆಗಿನ ಕ್ರಮವನ್ನು ಬೇರೆ ರಾಷ್ಟ್ರಗಳು ಹೊಗಳುತ್ತಿವೆ..

The Australian
ದಿ ಆಸ್ಟ್ರೇಲಿಯನ್

ನವದೆಹಲಿ:'Modi leads India out of Lockdown...and into a viral apocalypse' ಎಂಬ ಲೇಖನ 'ದಿ ಆಸ್ಟ್ರೇಲಿಯನ್' ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಹೈಕಮಿಷನ್,​ ಇದು 'ದುರುದ್ದೇಶಪೂರಿತ ಮತ್ತು ಅಪಪ್ರಚಾರ. ಇದು ಸುಳ್ಳನ್ನು ಹರಡಲು ಸಹಾಯ ಮಾಡುತ್ತದೆ' ಎಂದು ವಾಗ್ದಾಳಿ ನಡೆಸಿದೆ.

"ದುರಹಂಕಾರ, ಹೈಪರ್-ನ್ಯಾಷನಲಿಸಂ ಮತ್ತು ಅಧಿಕಾರಶಾಹಿ ಅಸಮರ್ಥತೆಯು ಭಾರತದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿದೆ" ಎಂದು 'ದಿ ಆಸ್ಟ್ರೇಲಿಯಾ' ವರದಿ ಪ್ರಕಟ ಮಾಡಿತ್ತು.

ಹೀಗಾಗಿ, ಕ್ಯಾನ್‌ಬೆರಾದಲ್ಲಿರುವ ಭಾರತೀಯ ಹೈಕಮಿಷನ್​ನ ಆಯುಕ್ತ ಪಿ.ಎಸ್. ಕಾರ್ತಿಗೇಯನ್ ಅವರು ಆಸ್ಟ್ರೇಲಿಯಾದ ಪತ್ರಿಕೆಗೆ ಪತ್ರ ಬರೆದಿದ್ದು, "ನಿಮ್ಮ ವರದಿ ಆಧಾರರಹಿತವಾಗಿ, ದುರುದ್ದೇಶಪೂರಿತವಾಗಿದೆ. ಭಾರತದ ಬಗ್ಗೆ ಮಾಡುತ್ತಿರುವ ಅಪಪ್ರಚಾರವಿದು.

'ದಿ ಆಸ್ಟ್ರೇಲಿಯನ್' ಟ್ವೀಟ್​ ಮೂಲಕ ವರದಿ ಪ್ರಸಾರ

ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳು ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಕಳೆದ ಮಾರ್ಚ್​ನಲ್ಲಿ ಮಾಡಲಾಗಿದ್ದ ಲಾಕ್​ಡೌನ್​ನಿಂದ ಹಿಡಿದು ಇಂದಿನ ಲಸಿಕೆ ಅಭಿಯಾನದವರೆಗಿನ ಕ್ರಮವನ್ನು ಬೇರೆ ರಾಷ್ಟ್ರಗಳು ಹೊಗಳುತ್ತಿವೆ.

ಇದನ್ನು ಸಹಿಸಿಕೊಳ್ಳಲಾಗದೆ ಭಾರತದ ಮೇಲೆ ಉಳಿದವರು ಇಟ್ಟ ನಂಬಿಕೆ, ಮೆಚ್ಚುಗೆಯ ಭಾವನೆಯನ್ನು ದುರ್ಬಲಗೊಳಿಸಲು ಹೀಗೆ ವರದಿ ಮಾಡಿದ್ದೀರಿ" ಆರೋಪಿಸಿದೆ.

ಭಾರತ ಸರ್ಕಾರವು ತೆಗೆದುಕೊಂಡ ಸಾರ್ವತ್ರಿಕವಾಗಿ ಮೆಚ್ಚುಗೆ ಪಡೆದ ವಿಧಾನವನ್ನು ದುರ್ಬಲಗೊಳಿಸುವ ಏಕೈಕ ಉದ್ದೇಶದಿಂದ ಮಾತ್ರ ವರದಿಯನ್ನು ಬರೆಯಲಾಗಿದೆ" ಎಂದು ಅವರು ಹೇಳಿದರು.

'ದಿ ಆಸ್ಟ್ರೇಲಿಯನ್' Modi leads India out of Lockdown...and into a viral apocalypse' ಲೇಖನವನ್ನು ಏಪ್ರಿಲ್ 25 ರಂದು ಪ್ರಕಟಿಸಿತ್ತು.

Last Updated : Apr 27, 2021, 2:18 PM IST

ABOUT THE AUTHOR

...view details