ಅಲ್ವಾರ್ (ರಾಜಸ್ಥಾನ): ಮಾನವರಂತೆ ಕಾಡು ಪ್ರಾಣಿಗಳು ಕೂಡ ಕೆಲವೊಮ್ಮೆ ಮಾನಸಿಕ ಒತ್ತಡದಂತಹ ಸಮಸ್ಯೆಗಳು ಎದುರಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಇದನ್ನು ಪತ್ತೆ ಮಾಡುವ ಸಲುವಾಗಿ ಹುಲಿಗಳ ಡಿಎನ್‌ಎ ಮಾದರಿಗಳನ್ನು ಅಲ್ವಾರ್ ಸೇರಿದಂತೆ ದೇಶಾದ್ಯಂತ ಹುಲಿ ಸಂರಕ್ಷಿತ ಪ್ರದೇಶಗಳಿಂದ ತೆಗೆದುಕೊಳ್ಳಲಾಗಿದೆ.
ವರದಿ ಮೂಲಕ, ಹುಲಿಗಳ ಪ್ರಭೇದದ ಬಗ್ಗೆ ವಿವರವಾದ ಮಾಹಿತಿ ಲಭ್ಯವಾಗುತ್ತದೆ. ಇದು ಹುಲಿಗಳ ಒತ್ತಡದ ಮಟ್ಟ ನಿರ್ಣಯಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಸಮಸ್ಯೆಯನ್ನು ನಿಭಾಯಿಸಲು ತಜ್ಞರೊಂದಿಗೆ ಸಮಾಲೋಚಿಸಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿರುವ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 10 ಹೆಣ್ಣು ಹುಲಿಗಳು, 7 ಗಂಡು ಹುಲಿಗಳು ಮತ್ತು 6 ಮರಿಗಳಿವೆ.