ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ದಿಶಾ ಪಟಾನಿ ಅವರು ಜಿಮ್‌ನಲ್ಲಿ ಪ್ರತಿನಿತ್ಯ ಬೆವರು ಹರಿಸುತ್ತಾರೆ. ಇಂದು ಮಹಿಳೆಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ತಮ್ಮ ಸಾಹಸದ ಮೂಲಕ ತೋರಿಸಿದ್ದಾರೆ. ಮಾರ್ಷಲ್ ಆರ್ಟ್ಸ್‌ನಲ್ಲಿ ಪಳಗಿರುವ ದಿಶಾ ಜಿಮ್‌ನಲ್ಲಿ ತನ್ನನ್ನು ಕೆಣಕಿದವನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ದಿಶಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅವರು ಜಿಮ್‌ನಲ್ಲಿದ್ದರು. ಆಗ ತನ್ನ ಎದುರಿಗೆ ಬಂದು ಒಬ್ಬ ಕೆಣಕಿದಾಗ ಆತನಿಗೆ ಬೆಂಡತ್ತಿದ್ದಾರೆ. ಸಮರ ಕಲೆಯ ಕೌಶಲ್ಯಗಳನ್ನು ಪ್ರದರ್ಶಿಸಿ ಆತನನ್ನು ನೆಲಕ್ಕೆ ಕೆಡವಿ ಸಾಹಸ ಮೆರೆದಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋದಲ್ಲಿ ಒದೆ ತಿಂದಿರುವ ವ್ಯಕ್ತಿ ದಿಶಾಗೆ ಪರಿಚಯಸ್ಥನಾಗಿದ್ದು, ಮಹಿಳೆಯರನ್ನು ಯಾರಾದರು ಬಂದು ಕೆಣಕಿದಾಗ ಅವರಿಗೆ ಹೇಗೆ ಪಾಠ ಕಲಿಸಬೇಕು ಎಂಬ ಸಾಮಾಜಿಕ ಮತ್ತು ರಕ್ಷಣಾತ್ಮಕ ಸಂದೇಶ ವಿಡಿಯೋದಲ್ಲಿದೆ.