ಭೋಪಾಲ್(ಮಧ್ಯಪ್ರದೇಶ): ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ನಿರ್ಮಾಣಕ್ಕಾಗಿ ಮಧ್ಯಪ್ರದೇಶ ಕಾಂಗ್ರೆಸ್ನ ಹಿರಿಯ ಮುಖಂಡ, ಸಂಸದ ದಿಗ್ವಿಜಯ್ ಸಿಂಗ್ 1,11,111 ರೂ. ದೇಣಿಗೆ ನೀಡಿದ್ದಾರೆ.
ತಾವು ನೀಡಿರುವ ದೇಣಿಗೆ ಹಣದ ಚೆಕ್ ಅನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದು, ನಿಧಿ ಸಂಗ್ರಹ ಸಾಮರಸ್ಯದ ವಾತಾವರಣದಲ್ಲಿ ನಡೆಯಲಿ ಎಂದು ಮನವಿ ಮಾಡಿದ್ದಾರೆ. ಯಾವ ಬ್ಯಾಂಕ್ಗೆ ಹಣ ದಾನ ಮಾಡಬೇಕು ಎಂಬುದು ನನ್ನಲ್ಲಿ ಮಾಹಿತಿ ಇಲ್ಲದ ಕಾರಣ ರಾಮ ಮಂದಿರ ದೇವಾಲಯ ನಿರ್ಮಾಣಕ್ಕಾಗಿ ನನ್ನ ಕೊಡುಗೆ 1,11,111 ರೂ ಚೆಕ್ ನಿಮಗೆ ಕಳುಹಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.