ಕರ್ನಾಟಕ

karnataka

ETV Bharat / bharat

ಬಲವಂತದ ಮದುವೆಯಿಂದ ನೊಂದ ಯುವತಿ 'ಸಲಿಂಗ ಸಂಗಾತಿ' ಜೊತೆ ಪರಾರಿ

ಮನಸ್ಸಿಲ್ಲದ 'ವ್ಯಕ್ತಿ'ಯನ್ನು ಮದುವೆ ಮಾಡಿಕೊಂಡಿರುವ ಯುವತಿಯೋರ್ವಳು ಸಲಿಂಗ ಸಂಗಾತಿ ಜೊತೆ ಓಡಿ ಹೋಗಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

Dhanbad woman absconds with her lesbian partner
Dhanbad woman absconds with her lesbian partner

By

Published : Jan 17, 2022, 8:25 PM IST

ಧನ್ಬಾದ್​​(ಜಾರ್ಖಂಡ್):ಮನೆಯವರಿಂದ ಒತ್ತಾಯದ ಮದುವೆ ಮಾಡಿಕೊಂಡಿರುವ ಯುವತಿಯೋರ್ವಳು ಮರುದಿನವೇ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿದ್ದಾಳೆ. ಜಾರ್ಖಂಡ್​ನ ಧನ್ಬಾದ್​​ನಲ್ಲಿ ಈ ಘಟನೆ ನಡೆದಿದೆ.

ಯುವತಿಯ ಆಸೆಗೆ ವಿರುದ್ಧವಾಗಿ ಆಕೆಯ ಕುಟುಂಬಸ್ಥರು ಯುವಕನೊಂದಿಗೆ ಮದುವೆ ಮಾಡಿದ್ದಾರೆ. ಇದರ ಮರುದಿನವೇ ಸಲಿಂಗ ಸಂಗಾತಿ ಜೊತೆ ಆಕೆ ಓಡಿ ಹೋಗಿದ್ದಾಳೆ. ಇದರ ಜೊತೆಗೆ ತಮಗೆ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಳೆದ ಡಿಸೆಂಬರ್​ ತಿಂಗಳಲ್ಲಿ ನಡೆದ ಪ್ರಕರಣ ಇದಾಗಿದೆ. ಯುವತಿ ವಿವಾಹ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ಸಲಿಂಗ ಸಂಗಾತಿ ಜೊತೆ ವಾಸವಾಗಿದ್ದಳು. ಇದನ್ನರಿತ ಕುಟುಂಬಸ್ಥರು ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಈ ಬೆನ್ನಲ್ಲೇ ಆಕೆ ಈ ನಿರ್ಧಾರ ಕೈಗೊಂಡಿದ್ದಾಳೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಇಬ್ಬರೂ ಕಳೆದ ಅನೇಕ ವರ್ಷಗಳಿಂದ ಪರಿಚಯವಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದರಂತೆ.

ಇದನ್ನೂ ಓದಿ:ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವತಿ: ರಾಜಸ್ಥಾನದಲ್ಲಿ ಪೋಷಕರ ಮಾತು ಧಿಕ್ಕರಿಸಿ ಒಂದಾದ ಜೋಡಿ

ಪೊಲೀಸ್ ಠಾಣೆಯಲ್ಲಿ, ಗಂಡನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದಿರುವ ಯುವತಿ, ಸಲಿಂಗ ಸಂಗಾತಿ ಜೊತೆ ಇರುವುದಾಗಿ ಹೇಳಿದ್ದಾಳೆ.

ಕಳೆದ ಕೆಲ ದಿನಗಳ ಹಿಂದೆ ಕೂಡ ರಾಜಸ್ಥಾನದ ಚುರುವಿನಲ್ಲಿ ಇಬ್ಬರು ಯುವತಿಯರು ಪರಸ್ಪರ ಪ್ರೀತಿಸಿ, ಮನೆಯಿಂದ ಓಡಿಹೋಗಿ ಮದುವೆ ಮಾಡಿಕೊಂಡಿರುವ ಘಟನೆ ನಡೆದಿದೆ.

ABOUT THE AUTHOR

...view details