ಕರ್ನಾಟಕ

karnataka

ETV Bharat / bharat

ಚಹಾ ಬೆಲೆಗಾಗಿ ನಡೆದ ಮಾತಿನ ಚಕಮಕಿ: ಢಾಬಾದ ಮಾಲೀಕನಿಗೆ ಥಳಿಸಿದ ಯುವಕರ ಗುಂಪು - Dhaba owner was beaten up

ಬೆಳಗ್ಗೆ ಢಾಬಾದ ಬಳಿ ಚಹಾ ಕುಡಿಯಲು ಬಂದಿದ್ದ ಯುವಕರ ಗುಂಪೊಂದು ಚಹಾದ ಬೆಲೆಗಾಗಿ ಮಾಲೀಕನ ಜೊತೆ ವಾಗ್ವಾದಕ್ಕಿಳಿದಿದೆ. ಮಾತು ಅತಿರೇಕಕ್ಕೇರಿ ಮಾಲೀಕ ಸೇರಿದಮತೆ ಇನ್ನುಳಿದ ಇಬ್ಬರಿಗೂ ಯುವಕರ ಗುಂಪು ತೀವ್ರವಾಗಿ ಥಳಿಸಿದೆ.

Dhaba owner was beaten up due to the price of tea
ಢಾಬಾದ ನಿರ್ವಾಹಕರಿಗೆ ಥಳಿಸಿದ ಯುವಕರ ಗುಂಪು

By

Published : May 23, 2022, 3:40 PM IST

ರಾಜನಂದಗಾಂವ್:ಛತ್ತೀಸ್‌ಗಢದ ದುರ್ಗ್ - ರಾಜನಂದಗಾಂವ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಢಾಬಾವೊಂದರಲ್ಲಿ ಚಹಾದ ಬೆಲೆಗಾಗಿ ಯುವಕರ ಗುಂಪೊಂದು ಢಾಬಾ ಮಾಲೀಕರಿಗೆ ಥಳಿಸಿದ ಘಟನೆ ನಡೆದಿದೆ. ಒಂದು ನಿರ್ದಿಷ್ಟ ಪಂಗಡದ ಯುವಕರು ಚಹಾದ ಬೆಲೆಗೆ ಸಂಬಂಧಿಸಿದಂತೆ ಮೊದಲಿಗೆ ಮಾತಿನ ಚಕಮಕಿ ನಡೆಸಿ, ಬಳಿಕ ಢಾಬಾ ನಿರ್ವಾಹಿಕನಿಗೆ ತೀವ್ರವಾಗಿ ಥಳಿಸಿದ್ದಾರೆ.

ಹೊಡೆದಾಟದಲ್ಲಿ ಢಾಬಾ ನಿರ್ವಾಹಕ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಈ ಪ್ರಕರಣ ಕೋಮುಗಲಭೆಯ ಬಣ್ಣ ಹಚ್ಚಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದ ಕುರಿತಂತೆ ಈವರೆಗೆ ಪೊಲೀಸರು ಯಾವ ಮಾತಿಹಿ ಬಹಿರಂಗ ಪಡಿಸಿಲ್ಲ.

ಸಂಪೂರ್ಣ ಪ್ರಕರಣದ ವಿವರ ಇಲ್ಲಿದೆ: ಕೆಲ ಯುವಕರು ಬೆಳಗ್ಗೆಯೇ ಚಹಾ ಕುಡಿಯಲು ಢಾಬಾ ಹತ್ತಿರ ಬಂದಿದ್ದಾರೆ. ಈ ಯುವಕರು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದು, ಚಹಾ ಕುಡಿದ ಬಳಿಕ ಢಾಬಾ ನಿರ್ವಾಹಕರ ಜೊತೆ ಚಹಾದ ದರದ ಬಗ್ಗೆ ಸಾಕಷ್ಟು ವಾಗ್ವಾದ ನಡೆಸಿದ್ದಾರೆ. ಮಾತಿನ ಜಗಳ ಹೊಡೆದಾಟದವರೆಗೂ ತಲುಪಿದೆ. ಈ ಯುವಕರ ಗುಂಪು ಢಾಬಾ ಆಪರೇಟರ್ ಸೇರಿದಂತೆ ನೌಕರರನ್ನೂ ಸಹ ಥಳಿಸಿದೆ. ಬಳಿಕ ಢಾಬಾವನ್ನೂ ಧ್ವಂಸಗೊಳಿಸಿದ್ದು, ಇದರಿಂದ ಢಾಬಾ ನಿರ್ವಾಹಕರಿಗೆ ಅಪಾರ ನಷ್ಟವಾಗಿದೆ. ಪೊಲೀಸರಿಗೆ ವಿಷಯ ತಲುಪುವಷ್ಟರಲ್ಲಿ ಗುಂಪು ಇಡೀ ಢಾಬಾವನ್ನು ಧ್ವಂಸಗೊಳಿಸಿಯಾಗಿತ್ತು.

ಪ್ರಾಣ ಉಳಿಸಿಕೊಳ್ಳಲು ಓಡಿದ ನೌಕರರು:ವಿವಾದದ ನಂತರವೂ ಒಂದು ನಿರ್ದಿಷ್ಟ ಸಮುದಾಯದ ಯುವಕರು ಢಾಬಾ ಮಾಲೀಕ ದೀಪಕ್ ಬಿಹಾರಿ ಮತ್ತು ಅವರ ಸಹೋದರನನ್ನು ತೀವ್ರವಾಗಿ ಥಳಿಸಿದ್ದಾರೆ. ಹಲ್ಲೆಯ ವೇಳೆ ನೌಕರರು ಹೇಗೋ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಗುಂಪಿನಲ್ಲಿದ್ದ ಯುವಕನೊಬ್ಬ ಢಾಬಾ ನಿರ್ವಾಹಕನ ಮೇಲೆ ಹರಿತವಾದ ಆಯುಧದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದರಿಂದ ಢಾಬಾ ನಿರ್ವಾಹಕ ದೀಪಕ್ ಬಿಹಾರಿ ಗಂಭೀರ ಗಾಯಗೊಂಡಿದ್ದಾರೆ.

ಢಾಬಾದಲ್ಲಿ ಪೊಲೀಸ್​ ಪಡೆ ನಿಯೋಜನೆ: ನಗರದ ಸಮೀಪದ ಧಾರ್ಮಿಕ ಸ್ಥಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೆಲ ಯುವಕರು ಆಗಮಿಸಿದ್ದರು. ಬೆಳಗ್ಗೆ ಹಿಂದಿರುಗುವ ವೇಳೆ ಈ ಯುವಕರು ಢಾಬಾದಲ್ಲಿ ಜಗಳ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂಸಾತ್ಮಕ ಘಟನೆಯ ಮಾಹಿತಿ, ಘಟನೆ ನಡೆದ ಬಹಳ ಸಮಯದ ನಂತರ ಸೋಮಾನಿ ಪೊಲೀಸರಿಗೆ ತಲುಪಿದೆ. ಇದುವರೆಗೆ ಯಾರ ಮೇಲೂ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರ ತಂಡ ಢಾಬಾದಲ್ಲಿ ಬೀಡುಬಿಟ್ಟಿದೆ.

ಗಾಯಾಳುಗಳನ್ನು ಭೇಟಿ ಮಾಡಿದ ಸಂಸದ: ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜನಂದಗೌನ್ ಸಂಸದ ಸಂತೋಷ್ ಪಾಂಡೆ ಅವರು ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಘಟನೆಯ ಬಗ್ಗೆ ವಿವರವಾಗಿ ವಿಚಾರಿಸಿದರು. ಎಸ್​ಪಿಯೊಂದಿಗೆ ಚರ್ಚಿಸಿ, ಘಟನೆಯ ಬಗ್ಗೆ ನ್ಯಾಯಯುತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದನ್ನೂ ಓದಿ:ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ವೈದ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details