ಕರ್ನಾಟಕ

karnataka

ETV Bharat / bharat

ಬಾಕ್ಸ್​ ಆಫೀಸ್​ನಲ್ಲಿ ತೋಪೆದ್ದ 'ಧಾಕಡ್​': ನಿರ್ಮಾಪಕ, ನಟಿ ಕಂಗನಾ ಕಂಗಾಲು - ಕಂಗನಾ ರಣಾವತ್​ ಸಿನಿಮಾ

ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಅಭಿನಯದ ಧಾಕಡ್​ ಸಿನಿಮಾ ಬಿಡುಗಡೆಯಾದ ಎಂಟನೇ ದಿನಕ್ಕೆ ದೇಶಾದ್ಯಂತ ಕೇವಲ 20 ಟಿಕೆಟ್​ಗಳು ಮಾತ್ರ ಮಾರಾಟವಾಗಿದ್ದು, ಒಟ್ಟು 4,420 ರೂ. ಮಾತ್ರ ಕಲೆಕ್ಷನ್​​ ಮಾಡಿ, ಬಾಕ್ಸ್​ ಆಫೀಸ್​ನಲ್ಲಿ ಕಳಪೆ ಪ್ರದರ್ಶನ ಕಂಡಿದೆ.

Dhaakad Day 8 sells only 20 tickets across India
ಬಾಕ್ಸ್​ ಆಫೀಸ್​ನಲ್ಲಿ ತೋಪೆದ್ದ 'ಧಾಕಡ್​'

By

Published : May 28, 2022, 4:11 PM IST

ಹೈದರಾಬಾದ್: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮಹಿಳಾ ಸೂಪರ್​ ಹೀರೋ ಆಗಿ ಅಭಿನಯಿಸಿರುವ, ಇತ್ತೀಚೆಗೆ ಬಿಡುಗಡೆಯಾದ 'ಧಾಕಡ್' ಸಿನಿಮಾ ಬಿಡುಗಡೆಗೂ ಮುನ್ನ ಸಖತ್​ ಸೌಂಡ್​ ಮಾಡಿತ್ತಾದರೂ, ದುರಾದೃಷ್ಟವಶಾತ್​ ಬಾಕ್ಸ್ ಆಫೀಸ್​ನಲ್ಲಿ ಗಳಿಕೆಯಿಲ್ಲದೇ ಸಂಪೂರ್ಣ ನೆಲಕಚ್ಚಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟನೇ ದಿನದಲ್ಲಿ ದೇಶಾದ್ಯಂತ ಕೇವಲ 20 ಟಿಕೆಟ್​ಗಳಷ್ಟೇ ಮಾರಾಟವಾಗುವ ಮೂಲಕ, ಬಾಕ್ಸ್​ ಆಫೀಸ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ.

ಮೇ 20 ರಂದು 'ಧಾಕಡ್' ಚಿತ್ರ ತೆರೆಕಂಡಿತ್ತು, ಬಿಡುಗಡೆಯಾದ ಎರಡನೇ ದಿನಕ್ಕೆ ಚಿತ್ರ ಬಾಕ್ಸ್​ ಆಫೀಸ್​ ಗಳಿಕೆ ಇಳಿಕೆ ಕಂಡಿತ್ತು. ಈಗ ಎರಡನೇ ಶುಕ್ರವಾರದ ಕಲೆಕ್ಷನ್​ ಕಂಗನಾ ಚಿತ್ರದ ಪತನವನ್ನು ಸಾಬೀತುಗೊಳಿಸಿದೆ. ಚಿತ್ರ ಬಿಡುಗಡೆಯಾದ ಎಂಟನೇ ದಿನಕ್ಕೆ ದೇಶದಾದ್ಯಂತ ಕೇವಲ 20 ಟಿಕೆಟ್‌ಗಳು ಮಾತ್ರ ಮಾರಾಟವಾಗಿದ್ದು, ಒಟ್ಟು 4,420 ರೂ. ಕಲೆಕ್ಷನ್​ ಮಾಡಿದೆ. ಕಂಗನಾ ಅವರ ಇದುವರೆಗಿನ ಫ್ಲಾಪ್ ಸಿನಿಮಾಗಳಲ್ಲೂ ‘ಧಾಕಡ್’ ಟಾಪ್ ಸ್ಥಾನಕ್ಕೆ ತಲುಪಿದೆ.

100 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬರೋಬ್ಬರಿ 3 ಕೋಟಿಯಷ್ಟೇ ಗಳಿಸಿದೆ. ದೇಶಾದ್ಯಂತ 25 ಚಿತ್ರಮಂದಿರಗಳಲ್ಲಿ 2100 ಸ್ಕ್ರೀನ್‌ಗಳಲ್ಲಿ ಚಿತ್ರ ಓಡುತ್ತಿತ್ತು. ಇದೀಗ ದಿನದಿಂದ ದಿನಕ್ಕೆ ಗಳಿಕೆ ಕುಸಿಯುತ್ತಿರುವ ಕಾರಣ ಸಿನಿಮಾವನ್ನು ಥಿಯೇಟರ್​ಗಳಿಂದ ತೆಗೆಯಲಾಗುತ್ತಿದೆ. ಮುಂಬೈನ ಯಾವುದೇ ಚಿತ್ರಮಂದಿರದಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿಲ್ಲ ಎನ್ನುವುದೇ ಅಚ್ಷರಿಯಾಗಿದೆ.

ಧಾಕಡ್ ಸಿನಿಮಾದ ಜೊತೆಗೆ ಬಿಡುಗಡೆಯಾದ ‘ಭೂಲ್-ಭುಲೈಯಾ 2’ ಚಿತ್ರ ಗಳಿಕೆಯಲ್ಲಿ ದಾಖಲೆ ನಿರ್ಮಿಸುವ ಹಾದಿಯಲ್ಲಿ ಸಾಗುತ್ತಿದೆ. ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ಅಭಿನಯಿಸಿದ್ದು, ಚಿತ್ರ ಒಂದು ವಾರದಲ್ಲಿ 92 ಕೋಟಿ ಗಳಿಸಿದೆ. ಚಿತ್ರ 100 ಕೋಟಿ ಕ್ಲಬ್ ಸೇರಲು ಇನ್ನೆರಡು ಹೆಜ್ಜೆಯಷ್ಟೇ ಬಾಕಿ ಇದೆ.

ಮತ್ತೊಂದೆಡೆ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಅಭಿನಯದ ‘ಟಾಪ್ ಗನ್-ಮೇವರಿಕ್’ ಸಿನಿಮಾ ಮೇ 27ರಂದು ದೇಶದಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ಇದನ್ನೂ ಓದಿ:ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮನಿಗೆ ಸಾಥ್ ಕೊಟ್ಟ ಕರುನಾಡ ಚಕ್ರವರ್ತಿ!

ABOUT THE AUTHOR

...view details