ಲಾಹೌಲ್(ಹಿಮಾಚಲ ಪ್ರದೇಶ):ಮಕರ ಸಂಕ್ರಾಂತಿಯ ಮುನ್ನಾದಿನದಂದು, ಯುವಕನೊಬ್ಬ ಮೈಕೊರೆವ ಚಳಿಯ ನಡುವೆ ಲಾಹೌಲ್ - ಸ್ಪಿತಿಯ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡುತ್ತಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಮೈಕೊರೆವ ಚಳಿಯಲ್ಲಿ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡಿದ ಭಕ್ತ ಲಾಹೌಲ್ ಕಣಿವೆಯಲ್ಲಿ ತಾಪಮಾನವು ಸಂಜೆ ವೇಳೆಗೆ ಮೈನಸ್ ಡಿಗ್ರಿಗೆ ಇಳಿಯುತ್ತದೆ. ಹೀಗಾಗಿ ಕಣಿವೆಯ ನದಿ, ಚರಂಡಿಗಳೂ ಸಂಪೂರ್ಣ ಹೆಪ್ಪುಗಟ್ಟುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಯುವಕ ನದಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ ಮೈಜುಮ್ಮೆನಿಸುವಂತಿದೆ.
ಹಿಮಾಚಲ ಪ್ರದೇಶದಲ್ಲಿ ಲೋಹ್ರಿ ಮತ್ತು ಮಕರ ಸಂಕ್ರಾಂತಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯುವಕರು ಪ್ರತಿ ವರ್ಷ ಪುಣ್ಯಸ್ನಾನ ಮಾಡಲು ಚಂದ್ರಭಾಗ ಸಂಗಮ ಸ್ಥಳಕ್ಕೆ ಆಗಮಿಸುತ್ತಾರೆ. ಧೈರ್ಯಶಾಲಿ ಯುವಕರು ಮಾತ್ರ ಚಂದ್ರಭಾಗಾದಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ಧಾರ್ಮಿಕ ನಂಬಿಕೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ:ದಾವಣಗೆರೆಯಲ್ಲಿ ಸಂಕ್ರಾಂತಿಯಂದೇ ಭೀಕರ ರಸ್ತೆ ಅಪಘಾತ.. ಮದ್ಯ ಸೇವಿಸಿ ನಿದ್ರೆಗೆ ಜಾರಿದ ಚಾಲಕ, ಏಳು ಜನರ ದುರ್ಮರಣ