ಕರ್ನಾಟಕ

karnataka

ETV Bharat / bharat

ಜಾಗತಿಕವಾಗಿ 3ರಲ್ಲಿ ಓರ್ವ ಮಹಿಳೆ ಹಿಂಸಾಚಾರ ಅನುಭವಿಸುತ್ತಾರೆ: ವಿಶ್ವ ಆರೋಗ್ಯ ಸಂಸ್ಥೆ

ಪ್ರತಿ 3 ಮಹಿಳೆಯರಲ್ಲಿ ಒಬ್ಬರು ಅಂದರೆ ಸುಮಾರು 736 ಮಿಲಿಯನ್ ಮಹಿಳೆಯರು ಆತ್ಮೀಯ ಸಂಗಾತಿಯಿಂದ ದೈಹಿಕ ಅಥವಾ ಲೈಂಗಿಕ ಹಿಂಸಾಚಾರಕ್ಕೆ ಒಳಗಾಗುತ್ತಾರೆ ಅಥವಾ ಇತರರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದು ಹೊಸ ವರದಿಯು ತಿಳಿಸಿದೆ.

WHO
WHO

By

Published : Mar 10, 2021, 10:31 PM IST

ಹೈದರಾಬಾದ್:ಮಹಿಳೆಯರ ಮೇಲಿನ ದೌರ್ಜನ್ಯವು ವ್ಯಾಪಕವಾಗಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೊಸ ಡೇಟಾವನ್ನು ತೋರಿಸುತ್ತದೆ. ಪ್ರತಿ 3 ಮಹಿಳೆಯರಲ್ಲಿ ಒಬ್ಬರು ಅಂದರೆ ಸುಮಾರು 736 ಮಿಲಿಯನ್ ಮಹಿಳೆಯರು ಆತ್ಮೀಯ ಸಂಗಾತಿಯಿಂದ ದೈಹಿಕ ಅಥವಾ ಲೈಂಗಿಕ ಹಿಂಸಾಚಾರಕ್ಕೆ ಒಳಗಾಗುತ್ತಾರೆ ಅಥವಾ ಇತರರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದು ಹೊಸ ವರದಿ ತಿಳಿಸಿದೆ.

ವಿಶ್ವಸಂಸ್ಥೆಯ ವಿಶೇಷ ಕಾರ್ಯ ಸಮೂಹದ ಪರವಾಗಿ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಈ ಅಧ್ಯಯನ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಇದುವರೆಗೆ ನಡೆದ ಅತಿದೊಡ್ಡ ಅಧ್ಯಯನ. 2000ರಿಂದ 2018ರವರೆಗಿನ ಡೇಟಾದ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ.

ಲಾಕ್‌ಡೌನ್‌ಗಳು ಮತ್ತು ಕೋವಿಡ್-19 ಸಾಂಕ್ರಾಮಿಕವು ಮಹಿಳೆಯರ ಮೆಲಿನ ಹಿಂಸಾಚಾರವನ್ನು ಹೆಚ್ಚಿಸಿದೆ ಎಂದು ಅಧ್ಯಯನಕಾರರು ಎಚ್ಚರಿಸಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಸಹಾಯವಾಣಿಗಳು, ಪೊಲೀಸ್, ಆರೋಗ್ಯ ಕಾರ್ಯಕರ್ತರು, ಶಿಕ್ಷಕರು ಮತ್ತು ಇತರ ಸೇವಾ ಪೂರೈಕೆದಾರರು ಕೂಡಾ ದೌರ್ಜನ್ಯಗಳು ಹೆಚ್ಚಿವೆ ಎಂದು ತಿಳಿಸಿದ್ದಾರೆ.

ಹಿಂಸಾಚಾರವು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುವ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಬಡ ದೇಶಗಳಲ್ಲಿ ವಾಸಿಸುವ 37% ಮಹಿಳೆಯರು ದೈಹಿಕ ಅಥವಾ ಲೈಂಗಿಕ ಹಿಂಸಾಚಾರವನ್ನು ತಮ್ಮ ಸಂಗಾತಿಯಿಂದ ಅನುಭವಿಸಿದ್ದಾರೆ.

ಓಷಿಯಾನಿಯಾ, ದಕ್ಷಿಣ ಏಷ್ಯಾ ಮತ್ತು ಉಪ-ಸಹಾರನ್ ಆಫ್ರಿಕಾದ ಪ್ರದೇಶಗಳಲ್ಲಿ ಹಿಂಸಾಚಾರದ ಪ್ರಮಾಣ ಹೆಚ್ಚಿದ್ದು, 33%ರಿಂದ 51%ವರೆಗೆ ಇದೆ. ಯುರೋಪ್ (16–23%), ಮಧ್ಯ ಏಷ್ಯಾ (18%), ಪೂರ್ವ ಏಷ್ಯಾ (20%) ಮತ್ತು ಆಗ್ನೇಯ ಏಷ್ಯಾ (21%)ದಲ್ಲಿ ಕಡಿಮೆಯಿದೆ.

ವರದಿಯ ಪ್ರಕಾರ 15-49 ವಯಸ್ಸಿನ ಮಹಿಳೆಯರು ತಮ್ಮ ಸಂಗಾತಿಯಲ್ಲಿ ಹಿಂಸಾಚಾರಕ್ಕೆ ಒಳಗಾಗುವ ಪ್ರಮಾಣ ಹೀಗಿವೆ:

ದೇಶಗಳ ಮಾಹಿತಿ ಪ್ರತಿಶತ
ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು 37.00

ಓಷಿಯಾನಿಯಾ ಮೆಲನೇಷಿಯಾ



51




ಮೈಕ್ರೋನೇಶಿಯಾ 41.00
ಪಾಲಿನೇಷ್ಯಾ 39.00
ದಕ್ಷಿಣ ಏಷ್ಯಾ 35.00
ಉಪ-ಸಹಾರನ್ ಆಫ್ರಿಕಾ 33.00
ಉತ್ತರ ಆಫ್ರಿಕಾ 30.00
ಪಶ್ಚಿಮ ಏಷ್ಯಾ 29.00
ಉತ್ತರ ಅಮೆರಿಕಾ 25.00
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ 23.00
ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ 25.00
ಉತ್ತರ ಯುರೋಪ್ 23.00
ಆಗ್ನೇಯ ಏಷ್ಯಾ 21.00
ಪಶ್ಚಿಮ ಯುರೋಪ್ 21.00
ಪೂರ್ವ ಏಷ್ಯಾ 20.00
ಪೂರ್ವ ಯುರೋಪ್ 20.00
ಮಧ್ಯ ಏಷ್ಯಾ 18.00
ದಕ್ಷಿಣ ಯುರೋಪ್ 16.00

ABOUT THE AUTHOR

...view details